ಬೆಂಗಳೂರು : ರಾಜ್ಯದ ಎಲ್ಲಾ ಶಿಕ್ಷಕರನ್ನು ಜನಗಣತಿಗೆ ನಿಯೋಜಿ ಸಲಾಗುತ್ತದೆ. ಯಾರಿಗೂ ವಿನಾಯ್ತಿ ನೀಡಿಲ್ಲ ಎಂದು ಜಿಬಿಎ ಸೇರಿ ರಾಜ್ಯದ ಎಲ್ಲಾ ಪಾಲಿಕೆ ಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಇಲಾಖೆ ತಿಳಿಸಿದೆ. ಕಂದಾಯ ಮುಂದಿನ ತಿಂಗಳಿನಿಂದ ಆರಂಭವಾಗಲಿ ರುವ ಜನಗಣತಿ ಕಾರ್ಯಕ್ಕೆ 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ವಿನಾಯ್ತಿ ನೀಡಲಾಗುತ್ತಿದೆ ಎಂದು ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳಿಗೆ ಸ್ಪಷ್ಟನೆ ನೀಡಲಾಗಿದೆ.
ಭಾರತ ಚುನಾವಣಾ ಆಯೋಗ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಕ್ಕೆ ಮತ್ತು ಜನಗಣತಿ ಕಾರ್ಯಕ್ಕೆ 50 ವರ್ಷ ದಾಟಿದ ಮಹಿಳಾ ಶಾಲಾ ಶಿಕ್ಷಕರನ್ನು ಒಳಗೊಂಡಂತೆ ಎಲ್ಲಾಶಿಕ್ಷಕ ರನ್ನು ಅಗತ್ಯಕ್ಕೆ ಅನುಗುಣವಾಗಿ ನಿಯೋ ಜಿಸಿಕೊಳ್ಳಬೇಕು ಎಂದು ಸೂಚಿಸಿದೆ.
ಜಿಬಿಎ, ಜಿಲ್ಲೆಗಳ ವ್ಯಾಪ್ತಿ ಯಲ್ಲಿ ಜನಗಣತಿ ಕಾರ್ಯಕ್ಕೆ ಹಾಜರಾ ಗುವಂತೆ ಈಗಾ ಗಲೇ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಸಂದೇಶ ಗಳನ್ನು ರವಾನಿಸಲಾಗಿದೆ. ಬೆಂಗಳೂರಿನಲ್ಲಿ ಮಾಸ್ಟರ್‌ಟೈನರ್‌ಗಳಿಗೆ ತರಬೇತಿ ಕೂಡ ಆರಂಭಿಸಲಾಗಿದೆ.








