ಬಳ್ಳಾರಿ : ಸರ್ಕಾರಿ ಕೆಲಸವನ್ನು ಮಾಡಿಕೊಡುವುದಕ್ಕೆ ವ್ಯಕ್ತಿಯೊಬ್ಬರ ಬಳಿ 3.50 ಲಕ್ಷ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ತಹಸೀಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಾಗುಪ್ಪದಲ್ಲಿ ನಡೆದಿದೆ.
ಸಿರುಗುಪ್ಪ ತಾಲೂಕು ತಹಶೀಲ್ದಾರ್ ಹೆಚ್.ವಿಶ್ವನಾಥ್ ಲೋಕಾಯುಕ್ತ ಬಲೆಗೆ ಬದ್ದಿದ್ದಾರೆ.ಸರ್ಕಾರಿ ಕೆಲಸವನ್ನು ಮಾಡಿಕೊಡುವಲ್ಲಿ ವಿಳಂಬ ಮಾಡಿದ್ದಲ್ಲದೆ, ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ರಾಯಚೂರಿನ ಸಮಾಜ ಸೇವಕ ಮಹಾಂತೇಶ್ ಎನ್ನುವವರು ನೀಡಿದ್ದ ದೂರನ್ನು ಆಧರಿಸಿ, ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು.
3.50 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದ ತಹಸೀಲ್ದಾರ್ ವಿಶ್ವನಾಥ್, ಮುಂಗಡವಾಗಿ 1.50 ಲಕ್ಷ ರೂ.ಗಳನ್ನು ಈಗಾಗಲೇ ಪಡೆದಿದ್ದರು. ಇಂದು ಉಳಿದ ಹಣವನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ತಾಲೂಕು ತಹಶೀಲ್ದಾರ್ ಹೆಚ್.ವಿಶ್ವನಾಥ್ ನನ್ನು ಬಂಧಿಸಿದ್ದಾರೆ.