ಕಲಬುರಗಿ : ರಾಜ್ಯದಲ್ಲಿ ಒಂದು ಕೋಟಿ ಪಡಿತರ ಚೀಟಿದಾರರು ಹೊಂದಿದ್ದು, ಅನ್ನಭಾಗ್ಯ ಯೋಜನೆಯಡಿ ಇಂದಿರಾ ಕಿಟ್‌ನಲ್ಲಿ ಎರಡು ಕೆಜಿ ತೊಗರಿ ವಿತರಣೆಯಿಂದ ತೊಗರಿ ಬೆಳೆಗಾರರಿಗೆ ದೊಡ್ಡ ಪ್ರಮಾಣದ ಲಾಭವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದಾದ್ಯಂತ ತೊಗರಿ ವಿತರಣೆಗೆ ಟೆಂಡರ್ ಕರೆದು ಬೆಲೆ ನಿಗದಿಪಡಿಸಿ ವಿತರಿಸಲು ಕ್ರಮವಹಿಸಲಿದ್ದೇವೆ. ಪ್ರತಿ ಕಾರ್ಡ್ ಗೆ ಎರಡು ಕೆಜಿ ತೊಗರಿ ಬೇಳೆ ಸಿಗಲಿವೆ. ಇದ್ದಾರೆ. ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ತೊಗರಿ ಖರೀದಿ ಆಗಲಿದೆ ಎಂದು ಮಾಹಿತಿ ನೀಡಿದರು.
ಬೀದರ್, ಯಾದಗಿರಿ, ರಾಯಚೂರು, ಬಾಗಲಕೋಟ, ವಿಜಯಪುರ ಹಾಗೂ ಕಲಬುರಗಿ ‘ಯಲ್ಲಿ ಬೆಳೆ ನಷ್ಟದ ಸರ್ವೇ ಕಾರ್ಯ ನಡೆದಿದೆ. ಶೇ. 70 ಸರ್ವೇ ಮುಗಿದಿದೆ. ಕಲಬುರಗಿಯಲ್ಲಿ ವಿಮೆ ಹಣ 500 ಕೋಟಿಗೂ ಹೆಚ್ಚು ಪರಿಹಾರ ಸಿಗುವ ನಿರೀಕ್ಷೆ ಇದೆ. ವಾಣಿಜ್ಯ ಬೆಳೆಗಳಿಗೆ 200 ಕೋಟಿ ಬರುವ ನಿರೀಕ್ಷೆ ಇದೆ. ರೈತರಿಗೆ ಕೈಗೆ ಬಂದ ತೂತು ಬಾಯಿಗೆ ಬರದಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತೊಗರಿ ರೋಗ ನಿಯಂತ್ರಣಕ್ಕೆ ಕೇಂದ್ರ ಸರಕಾರ ಮುಂದಾಗಿದ್ದು, ಪಲ್ಲೆಸ್ ಸಂರಕ್ಷಣೆಗೆ ಹಿಂದಿನಿಂದಲೂ ಆನೇಕ ಕಾರ್ಯಕ್ರಮ ಹಮ್ಮಿಕೊಂಡಿವೆ. ಈಗ ಪಲ್ಲೆಸ್ ಉತ್ತೇಜಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮುಂದಾಗಿವೆ. ಈ ವರ್ಷ 11,000 ಕೋಟಿ ರೂ. ಕೇಂದ್ರ ಸರ್ಕಾರ ಮೀಸಲಿಟ್ಟಿದೆ ಎಂದರು. ಇದೇ ವೇಳೆಗೆ ಎನ್‌ಡಿಆರ್.ಎಫ್ ಕಾಯ್ದೆಯಡಿ ಹಸಿ ಬರಗಾಲ ಘೋಷಣೆ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.