ಬೆಂಗಳೂರು : ಬೆಂಗಳೂರಿನಲ್ಲಿ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಅನೈತಿಕ ಸಂಬಂಧ ಅನುಮಾನ ಹಿನ್ನೆಲೆಯಲ್ಲಿ ದಂಪತಿ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮಗಳಿಗೆ ನೀನು ಬಿಗಿದು ನಂತರ ತಾಯಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಗಳು ಕೃತಿಕ (6) ಸಾವನ್ನಪ್ಪಿದ್ದು ತಾಯಿ ನಿರುತ (30) ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.
ಜನವರಿ 5ರಂದು ರಾತ್ರಿ 10 ಗಂಟೆಗೆ ಗೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನೇಪಾಳ ಮೂಲದ ನೀರುತಾ ಮತ್ತು ಕಿಶನ್ ದಂಪತಿ ನಡುವೆ ಕಿತ್ತಾಟ ನಡೆದಿದೆ. ಫೋನಲ್ಲಿ ಯಾವಾಗಲೂ ಬಿಸಿಯಾಗಿರುತ್ತಾಳೆ ಎಂದು ಪತಿ ಗಲಾಟೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಕಿಶನ್ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದಾನೆ.
ಜನವರಿ 5ರಂದು ಬೆಳಿಗ್ಗೆ ಕಿಶನ್ ಕೆಲಸಕ್ಕೆ ತೆರಳಿದ್ದಾನೆ. ವಾಪಸ್ ಬರುವ ಅಷ್ಟರಲ್ಲಿ ಪತ್ನಿ ಮತ್ತು ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಗಳು ಕೃತಿಕ ಮೃತಪಟ್ಟಿದ್ದರೆ, ಪತ್ನಿ ನಿರುತ ಸ್ಥಿತಿ ಗಂಭೀರವಾಗಿತ್ತು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ನಿರುತಾಗೆ ಚಿಕಿತ್ಸೆ ನೀಡಲಾಗುತ್ತಿದೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








