ಚಾಮರಾಜನಗರ : ಚಾಮರಾಜನಗರದ ಬೇಡುಗುಳಿ ಸಮೀಪದ ರಾಮಯ್ಯನ ಪೋಡಿನಲ್ಲಿ ಸೋಮವಾರ ರಾತ್ರಿ ಬಹಿರ್ದೆಸೆಗೆ ಹೋಗಿದ್ದ ಸಂದರ್ಭ ಏಕಾಏಕಿ ಹುಲಿ ದಾಳಿ ಮಾಡಿದ ಪರಿಣಾಮ ರವಿ ಎಂಬ ವ್ಯಕ್ತಿ ತಲೆಗೆ ಗಂಭೀರ ಗಾಯಗಳಾಗಿವೆ.
ಕೂಡಲೇ ಗಾಯಾಳು ರವಿ ಅವರನ್ನು ಚಾಮರಾಜನಗರ ಸರ್ಕಾರಿ ಬೋಧನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೇಡುಗುಳಿಯ ರಾಮಯ್ಯನ ಪೋಡಿನಲ್ಲಿ ನಡೆದ ಹುಲಿ ದಾಳಿಯಿಂದಾಗಿ ನಿವಾಸಿಗಳು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದಾಳಿ ಮಾಡಿದ ಹುಲಿ ಸೆರೆಯಾಗುವ ತನಕ ತಾತ್ಕಾಲಿಕವಾಗಿ ಬೇಡುಗುಳಿಯಲ್ಲಿನ ಆಶ್ರಮ ಶಾಲೆಯಲ್ಲಿ ಆಶ್ರಯ ನೀಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.