ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಷಾರೋಪ ನಿಗದಿ ಪಡಿಸುವ ಹಿನ್ನೆಲೆ ಇಂದು ಬೆಂಗಳೂರಿನ 57ನೇ CCH ನ್ಯಾಯಾಲಯಕ್ಕೆ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಕೊಲೆಯ ಪ್ರಕರಣದ ಎಲ್ಲ 17 ಆರೋಪಿಗಳು ಹಾಜರಾಗಿದ್ದಾರೆ.
ಹೌದು ಸೇಷನ್ಸ್ ಕೋರ್ಟ್ ನಲ್ಲಿ ಇಂದು ದೋಷಾರೋಪ ನಿಗದಿ ಮಾಡುವ ಹಿನ್ನೆಲೆಯಲ್ಲಿ ನಟ ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ ಕೊಲೆಯ ಪ್ರಕರಣದ ಉಳಿದ ಆರೋಪಿಗಳಾದಂತಹ ಪ್ರದೋಷ್, ನಾಗರಾಜ್, ಕೆಶವಮೂರ್ತಿ, ನಿಖಿಲ್ ನಾಯಕ್ ಸೇರಿದಂತೆ ಎಲ್ಲ 17 ಆರೋಪಿಗಳು ಕೂಡ ಇದೀಗ ಕೋರ್ಟಿಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.ಇನ್ನು ಕೋರ್ಟ್ ಹಾಲ್ ಗೆ ನ್ಯಾಯಾಧೀಶರು ಆಗಮಿಸಿದ್ದು ಕೆಲವೇ ಕ್ಷಣಗಳಲ್ಲಿ ವಿಚಾರಣೆ ಆರಂಭವಾಗಲಿದೆ.