ಬೆಂಗಳೂರು : ಗಣರಾಜ್ಯೋತ್ಸವ ಧ್ವಜಾರೋಹಣ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಧ್ವಜ ಕಂಬಕ್ಕೆ ಹತ್ತಿಸುವಂತಿಲ್ಲ ಎಂದು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಹಿಂದೆ ಗಣರಾಜ್ಯೋತ್ಸವ ಧ್ವಜಾರೋಹಣ ಸಂದರ್ಭ ಧ್ವಜಸ್ತಂಭದಲ್ಲಿ ಸಿಲುಕಿದ ಧ್ವಜ ಬಿಡಿಸಲು ಕಂಬವನ್ನೇರಿದಾಗ ಸಂಭವಿಸಿದಂತಹ ಅವಘಡಗಳ ತಡೆಯಲು ವಿದ್ಯಾರ್ಥಿಗಳಿಂದ ಕಂಭ ಹತ್ತಿಸುವುದಕ್ಕೆ ನಿರ್ಬಂಧ ಹೇರಿ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ.
ಮಕ್ಕಳ ಕವಾಯತು, ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳೆ ಪಾಲಿಸಬೇಕಾದ ಅಂಶಗಳು
ವಿದ್ಯುತ್ ಸಂಪರ್ಕ ಜಾಲದ ಬಗ್ಗೆ ವಿಶೇಷ ನಿಗಾ ಇಡಬೇಕು.
ಸುವ್ಯವಸ್ಥಿತ ವಾಹನಗಳನ್ನು ಬಳಸಬೇಕು.
ಚಾಲಕರು ಮದ್ಯಪಾನ ಮಾಡಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.
ವೇಗ ಮಿತಿಯ ಮೇಲೆ ನಿಗಾವಹಿಸಬೇಕು.
ವಾಹನಗಳ ನಿಲುಗಡೆ ಕಾರ್ಯಕ್ರಮ ನಡೆಯುವ ಸ್ಥಳದಿಂದ 100 ಮೀಟರ್ ಅಂತರದಲ್ಲಿರಬೇಕು.
ತುರ್ತು ಪರಿಸ್ಥಿತಿ ಎದರಿಸಲು ಮಕ್ಕಳಿಗೆ ಅಗತ್ಯ ತರಬೇತಿ, ಜಾಗೃತಿ ಮೂಡಿಸಬೇಕು.
ಮಕ್ಕಳ ಕಾರ್ಯಕ್ರಮ ಕುರಿತು ಸ್ಥಳೀಯ ಸಂಸ್ಥೆಗಳು, ಪೊಲೀಸ್, ವೈದ್ಯಕೀಯ, ಅಗ್ನಿಶಾಮಕ ಸೇವೆಗಳಿಗೆ ಮಾಹಿತಿ ನೀಡಬೇಕು.
ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳನ್ನು ಪರಿಶೀಲನೆಗೆ ಒಳಪಡಿಸಬೇಕು.
ಶಾಲಾಭಿವೃದ್ಧಿ ಸಮಿತಿಯ ಸದಸ್ಯರನ್ನು ಬಳಸಿಕೊಳ್ಳಬೇಕು.
ಹಿಂದೆ ಗಣರಾಜ್ಯೋತ್ಸವ ಧ್ವಜಾರೋಹಣ ಸಂದರ್ಭ ಧ್ವಜಸ್ತಂಭದಲ್ಲಿ ಸಿಲುಕಿದ ಧ್ವಜ ಬಿಡಿಸಲು ಕಂಬವನ್ನೇರಿದಾಗ ಸಂಭವಿಸಿದಂತಹ ಅವಘಡಗಳ ತಡೆಯಲು ವಿದ್ಯಾರ್ಥಿಗಳಿಂದ ಕಂಭ ಹತ್ತಿಸುವುದಕ್ಕೆ ನಿರ್ಬಂಧ ಹೇರಿ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ. pic.twitter.com/QZuGNgfKgZ
— DIPR Karnataka (@KarnatakaVarthe) January 24, 2026








