ಬೆಂಗಳೂರು : ಕೆಲ ದಿನಗಳ ಹಿಂದೆ ಕೋಠಿಮಠದ ಶ್ರೀಗಳು ಪ್ರಪಂಚದಲ್ಲಿ ಭೂಕಂಪನ ಉಂಟಾಗಲಿದೆ. ಸಾವು ನೋವು ಹೆಚ್ಚಾಗಲಿದೆ ಎಂಬುದಾಗಿ ಹೇಳಿದ್ದರು. ಈ ಭವಿಷ್ಯ ಇಂದು ನಿಜವಾಗಿದೆ. ಮ್ಯಾನ್ಮಾರ್ ಹಾಗೂ ಬ್ಯಾಂಕಾಕ್ ನಲ್ಲಿ 7.7 ತೀವ್ರತೆಯಲ್ಲಿ ಪ್ರಬಲ ಭೂಕಂಪನ ಉಂಟಾಗಿದೆ. ಇದರಿಂದಾಗಿ ಹಲವರು ಸಾವನ್ನುಪ್ಪಿದ್ದಾರೆ.
ಮಾರ್ಚ್.2, 2025ರಂದು ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿಯವರು ಭವಿಷ್ಯ ನುಡಿದಿದ್ದರು. ಮುಂದಿನ ಸಿಎಂ ಯಾರಾಗ್ತಾರೆ, ಡಿಕೆ ಶಿವಕುಮಾರ್ ಜೊತೆ ಅಧಿಕಾರ ಹಂಚಿಕೆ ಯಾವಾಗ ಎಂಬ ಚರ್ಚೆಯ ನಡುವೆ, ಈ ಭವಿಷ್ಯವಾಣಿ ಹೊರಬಿದ್ದಿದೆ. ಅಲ್ಲದೇ ಕೋಡಿಮಠ ಶ್ರೀ ಭವಿಷ್ಯವಾಣಿಯಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನ ಭದ್ರ ಎಂಬುದಾಗಿಯೇ ತಿಳಿಸಿದ್ದರು.
ಹಾಲು ಮತ ಸಮಾಜವು ಪ್ರಾಚೀನ ಕಾಲದಿಂದ ದೈವಾರಾಧನೆ ಮಾಡುವ ಸಮಾಜವಾಗಿದೆ. ಹಾಲು ಕೆಟ್ಟರೂ ಹಾಲು ಸಮಾಜ ಕೆಡದು. ಹಕ್ಕ ಬುಕ್ಕರು ವಿಜಯನಗರ ಸಾಮ್ರಾಜ್ಯ ಕಟ್ಟಿದರು. ಹಾಲು ಮತ ಸಮಾಜದವರಲ್ಲಿ ರಾಜ್ಯದ ಅಧಿಕಾರವಿದೆ. ಸಿಎಂ ಕುರ್ಚಿಯಿಂದ ಬಿಡಿಸುವುದು ಕಷ್ಟ. ಅದು ಸುಲಭವೂ ಅಲ್ಲ. ಸಿಎಂ ಸಿದ್ಧರಾಮಯ್ಯ ಅವರು ಅವರಾಗೇ ಸಿಎಂ ಸ್ಥಾನ ಬಿಡಬೇಕೇ ಹೊರತು, ನೀವು ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದು ತಿಳಿಸಿದ್ದರು.
ಇನ್ನೂ ರಾಜ್ಯದಲ್ಲಿ ತೊಂದರೆ ತಾಪತ್ರೆಯವಿಲ್ಲ. ಮಳೆ ಬೆಳೆ ಚೆನ್ನಾಗಿ ಆಗುತ್ತದೆ. ಸುಭೀಕ್ಷೆಯಿಂದ ಕೂಡಿರಲಿದೆ. ನಾಡಿನಲ್ಲಿ ಯಾವುದೇ ಕೊರತೆ ಕಾಣೋದಿಲ್ಲ. ಯುಗಾದಿ ನಂತ್ರ ಕರ್ನಾಟಕದ ಬಗ್ಗೆ ಗೊತ್ತಾಗಲಿದೆ ಎಂದು ಕೋಠಿಮಠ ಶ್ರೀ ಭವಿಷ್ಯ ನುಡಿದಿದ್ದರು.
ಪ್ರಪಂಚದಲ್ಲಿ ಭೂಕಂಪನ, ಜನರ ಸಾವು ನೋವು ಆಗುವುದು. ಕಟ್ಟಡ ಬೀಳುವುದು ಮುಂದುವರೆಯಲಿದೆ. ಭೂ ಸುನಾಮಿ, ಜಲ ಸುನಾಮಿ, ವಾಯು ಸುನಾಮಿ ಕಾಣಿಸಿಕೊಳ್ಳುತ್ತದೆ. ಇಲ್ಲಿಯವರೆಗೆ ಜಲ ಸುನಾಮಿ ಆಗಿತ್ತು. ಈ ಭಾರಿ ಭೂ ಸುನಾಮಿ ಇದೆ. ಜಲ ಸುನಾಮಿ ಹಾಗೂ ವಾಯು ಸುನಾಮಿ ಹೆಚ್ಚಾಗಲಿದೆ. ಬಾಹ್ಯ ಸುನಾಮೆ ಅಂದ್ರೆ ಬಾಹ್ಯಾಕಾಶದಲ್ಲಿ ತೊಂದರೆ ಆಗಲಿದೆ. ಮುಂದುವರೆದು ಯುಗಾದಿಯ ನಂತ್ರ ಭವಿಷ್ಯ ಹೇಳುವುದಾಗಿ ತಿಳಿಸಿದ್ದರು.
ಈ ಭವಿಷ್ಯ ನುಡಿಯಲ್ಲಿ ಪ್ರಪಂಚದಲ್ಲಿ ಭೂಕಂಪನ, ಸಾವು ನೋವು ಹೆಚ್ಚಾಗಲಿದೆ ಎಂಬುದು ಇಂದು ನಿಜವಾಗಿದೆ. ಮ್ಯಾನ್ಮಾರ್ ಹಾಗೂ ಬ್ಯಾಂಕಾಕ್ ನಲ್ಲಿ ಪ್ರಬಲ ಭೂಕಂಪನ ಉಂಟಾಗಿದೆ. ಪ್ರಾಥಮಿಕ ವರದಿಯಂತೆ 25ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.