ಬೆಂಗಳೂರು : ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಸಂಜೆ ಸಾರಿಗೆ ನೌಕರರು ಮುಷ್ಕರ ಹಮ್ಮಿಕೊಂಡಿದ್ದು, ಇದರ ಬೆನ್ನಲ್ಲೇ ಮಾರ್ಚ್ ಇದರಂದು ರಾಜ್ಯ ಗುತ್ತಿಗೆದಾರರ ಸಂಘದ ವತಿಯಿಂದ ಸಾಕೇತಿಕ ಮುಷ್ಕರ ಹಮ್ಮಿಕೊಂಡಿದೆ.
ಈ ಕುರಿತು ನಮ್ಮ ಬೇಡಿಕೆ ಈಡೇರದಿದ್ದರೆ ಮಾರ್ಚ್ 05 ರಂದು ಒಂದು ದಿನ ಸಾಂಕೇತಿಕವಾಗಿ ಮುಷ್ಕರ ಮಾಡುವ ತೀರ್ಮಾನ ಮಾಡಿದ್ದೇವೆ. ನಂತರವೂ ಬೇಡಿಕೆ ಪೂರೈಸದಿದ್ದರೆ ಎಪ್ರಿಲ್ ನಂತರ ಅನಿರ್ಧಿಷ್ಟಾವಧಿ ಮುಷ್ಕರ ಮಾಡುತ್ತೇವೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ್ ತಿಳಿಸಿದರು.
ಎರಡೂವರೆ ವರ್ಷದಿಂದ ಕಾಂಟ್ರಾಕ್ಟರ್ಗಳ 37,000 ಕೋಟಿ ರೂಪಾಯಿ ಬಿಲ್ ಬಾಕಿ ಇದೆ. ಅದರಲ್ಲಿ ನಮ್ಮ ಲೋಕೋಪಯೋಗಿ ಇಲಾಖೆಯ 8000 ಕೋಟಿ ಬಿಲ್, ಜಲಸಂಪನ್ಮೂಲ ಇಲಾಖೆಯದ್ದು 13,000 ಕೋಟಿ ಇದೆ. ಆರ್ಡಿಪಿಆರ್ 3,800 ಕೋಟಿ ಹಾಗೂ ವಸತಿ ಮತ್ತು ಹೌಸಿಂಗ್ 2,800 ಕೋಟಿ, ಲೆಬರ್ ಇಲಾಖೆ 2000 ಕೋಟಿ, ಬಿಬಿಎಂಪಿ 1600 ಕೋಟಿ ಹಾಗೂ ವಸತಿ ಹಾಗೂ ವಕ್ಫ್ 2600 ಕೋಟಿ ಪೆಂಡಿಂಗ್ ಬಿಲ್ ಇದೆ ಎಂದಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇಟ್ಟಿದ್ದೆವು. ಅವರು ಮುತ್ಸದ್ಧಿಗಳಿದ್ದಾರೆ, ನಮ್ಮ ಪೇಮೆಂಟ್ ಕ್ಲಿಯರ್ ಮಾಡುತ್ತಾರೆ ಎಂದುಕೊಂಡಿದ್ದೆವು. ಈ ಪೆಂಡಿಂಗ್ ಬಿಲ್ಗಳ ಕುರಿತು ಹಲವಾರು ಮಂತ್ರಿಗಳಿಗೆ ಮನವಿ ಸಲ್ಲಿಸಿದೆವು. ಅವರು ಸಹಕಾರದ ಮೀಟಿಂಗ್ ಮಾಡಿದರು. ಆದರೆ ಏನೂ ಪ್ರಯೋಜನವಾಗುತ್ತಿಲ್ಲ ಎಂದು ಹೇಳಿದರು.
ಪ್ರತಿಶತ 40, 60, 70 ಪರ್ಸೆಂಟೇಜ್ ಈ ರೀತಿ ಎಂದು ನಾವು ಹೇಳಿಲ್ಲ. ಮೂರು ವರ್ಷಕ್ಕೂ ಪರ್ಸೆಂಟೇಜ್ ಕೊಡಬೇಕು. ಇದು ಬಹಳ ಅನ್ಯಾಯ. ನಾವು ಕಮಿಷನ್ ಹೇಳಿಲ್ಲ, ದೂರು ಕೊಡಲು ಹೋಗಲ್ಲ. ಸಿಎಂ ಮತ್ತು ಡಿಸಿಎಂ ಇಬ್ಬರೂ ಸಹ ನಮ್ಮ ದೊರೆಗಳಿದ್ದಂತೆ. ನಾವು ಏನಿದ್ದರೂ ಮನೆ ಯಜಮಾನನ ಹತ್ತಿರವೇ ಹೊಡೆದಾಡಬೇಕಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.








