ಬೆಳಗಾವಿ : ಬೆಳಗಾವಿಯಲ್ಲಿ ಮಹಾನಗರ ಪಾಲಿಕೆಯ ಜಾಗಕ್ಕಾಗಿ ಎರಡು ಸಮುದಾಯದ ನಡುವೆ ಗಲಾಟೆ ನಡೆದಿದೆ. ಗಲಾಟೆ ಎಷ್ಟರಮಟ್ಟಿಗೆ ಇತ್ತು ಎಂದರೆ ಎರಡು ಸಮುದಾಯದವರು ಪರಸ್ಪರ ಕಲ್ಲುತೂರಾಟ ನಡೆಸಿ, ಗಲಾಟೆ ಮಾಡಿರುವ ಘಟನೆ ಬೆಳಗಾವಿಯ ಖಡೆ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗಾವಿಯ ಗಣಾಚಾರಿ ಗಳ್ಳಿಯಲ್ಲಿ ಪರಸ್ಪರ ಕಲ್ಲುತೂರಾಟ ನಡೆಸಲಾಗಿದೆ. ಹಿಂದೂ ಕಾರ್ಟಿಕ ಸಮುದಾಯದ ಕೆಲವರಿಂದ ಜಾಗ ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ. ಒತ್ತುವರಿ ತೆರವಿಗೆ ಗಣಾಚಾರಿ ಸಮಾಜದ ಯುವಕರು ಆಗ್ರಹಿಸಿದ್ದಾರೆ. ಒತ್ತುವರಿ ಜಾಗ ಗುರುತಿಸಲು ಬಂದಿದ್ದಾಗ ಗಲಾಟೆ ನಡೆದಿದೆ.ಈ ವೇಳೆ 2 ಸಮುದಾಯಗಳು ಪರಸ್ಪರ ಕಲ್ಲುತೂರಾಟ ನಡೆಸಿವೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಗಣಾಚಾರಿ ಸಮುದಾಯದ ಇಬ್ಬರು ಯುವಕರಿಗೆ ಗಾಯಗಳಾಗಿವೆ. ರಾಜು ತಳವಾರ್ ಮತ್ತು ಸುರೇಶ್ ಲಾಠಿ ಎಂಬುವರಿಗೆ ಗಾಯಗಳಾಗಿವೆ. ಹೊರಗಿನಿಂದ ಹುಡುಗರನ್ನು ಕರೆ ತಂದು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಗಾಯಾಳುಗಳಿಗೆ ಇದೀಗ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 20ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಖಡೆ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.