ಬೆಂಗಳೂರು: ಪ್ರೊಪೆಲ್ ಕಾರ್ಯಕ್ರಮವು ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್ ಇಲಾಖೆ, ಐಟಿ-ಬಿಟಿ- 2023-24ರ ಬಜೆಟ್ ಘೋಷಣೆಯ ಭಾಗವಾಗಿತ್ತು. ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ ರೂಪಿಸಿ ರುವ ‘ಪ್ರೊಪೆಲ್ ಪ್ಲಾಟ್ಫಾರ್ಮ್’ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಿ, ನಿರ್ವಹಿಸಲು ಅರ್ಹ ಏಜೆನ್ಸಿಗಳಿಂದ ರಾಜ್ಯ ಸರ್ಕಾರ ಟೆಂಡರ್ ಆಹ್ವಾನಿಸಿದೆ.
ಪ್ರೊಪೆಲ್ ಕಾರ್ಯಕ್ರಮವು ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್ ಇಲಾಖೆ, ಐಟಿ-ಬಿಟಿ- 2023-24ರ ಬಜೆಟ್ ಘೋಷಣೆಯ ಭಾಗವಾಗಿತ್ತು. ಈ ಕಾರ್ಯಕ್ರಮದ ಮೂಲಕ, ದೊಡ್ಡ ತಂತ್ರಜ್ಞಾನದ ಬಹುರಾಷ್ಟ್ರೀಯ ಸಂಸ್ಥೆಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು, ಜಾಗತಿಕ ನಾವೀನ್ಯತೆ ಮೈತ್ರಿ ಪಾಲುದಾರರು ಮತ್ತು ಇತರ ಸಂಸ್ಥೆಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಸ್ಟಾರ್ಟ್ ಅಪ್ ಗಳಿಗೆ ಸರ್ಕಾರ ಅವಕಾಶ ನೀಡುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸ್ಟಾರ್ಟಪ್ಗಳು ತಮ್ಮ ಮೊದಲ ಗ್ರಾಹಕರನ್ನು ಪಡೆಯಲು ಸಹಾಯ ಮಾಡುವ ಪ್ರೊಪೆಲ್ ಅನ್ನು ಅನ್ಲೈನ್ ಪ್ಲಾಟ್ ಫಾರ್ಮ್ ಆಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಈ ವೇದಿಕೆಯ ಮೂಲಕ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳು ತಮ್ಮ ವಿನೂತನ ಆಲೋಚನೆಗಳನ್ನು ಜಾರಿ ಮಾಡಲು ಸಹಕಾರಿಯಾಗಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪ್ರೊಪೆಲ್ ಕಾರ್ಯಕ್ರಮದ ಲಕ್ಷಣಗಳು ಹೀಗಿವೆ
* ರಾಜ್ಯ ಸರ್ಕಾರದ ಇಲಾಖೆಗಳೊಂದಿಗೆ ಉದ್ಯಮಗಳು ಕೆಲಸ ಮಾಡಲು ಸ್ಟಾರ್ಟ್ ಅಪ್ ಗಳಿಗೆ ನೇರ ಅವಕಾಶ ಒದಗಿಸುವುದು ಮತ್ತು ಅವರ ಸವಾಲು/ಸಮಸ್ಯೆಗಳನ್ನು ಪರಿಹರಿಸಲು ಅವರಿಗೆ ಸಹಾಯ ಮಾಡುವುದು.
* ಸ್ಟಾರ್ಟ್ ಅಪ್ಗಳು ಮತ್ತು ಎಂಎನ್ ಸಿಗಳು/ಜಿಸಿಸಿಗಳ ನಡುವೆ ಪರಸ್ಪರ ಲಾಭದಾಯಕ ಪಾಲುದಾರಿಕೆಗಳನ್ನು ರಚಿಸಲು, ತಂತ್ರಜ್ಞಾನಗಳಿಗೆ ಪ್ರವೇಶ ಹೊಂದಲು ಸಹಾಯ ಮಾಡುವುದರಿಂದ ಸ್ಟಾರ್ಟ್ಪ್ ಗಳು ಎಂಎನ್ಸಿ/ಜಿಸಿಸಿಯ ಸಂಪನ್ಮೂಲಗಳು, ಪರಿಣತಿ ಮತ್ತು ಮಾರುಕಟ್ಟೆ ವ್ಯಾಪ್ತಿಯಿಂದ ಪ್ರಯೋಜನ ಪಡೆಯುತ್ತವೆ.
* ಸ್ಟಾರ್ಟ್ಪ್ಗಳಿಗೆ ತಮ್ಮ ನವೀನ ಪರಿಹಾರಗಳು/ಐಡಿಯಾಗಳನ್ನು ರಾಜ್ಯ ಸರ್ಕಾರದ ಇಲಾಖೆಗಳೊಂದಿಗೆ ತೊಡಗಿಸಿಕೊಳ್ಳಲು ಮತ್ತು ಪ್ರಸ್ತುತಪಡಿಸಲು ಅವಕಾಶವನ್ನು ಒದಗಿಸುವುದು.
* ಪ್ರೊಪೆಲ್ ಮೂಲಕ, ಸ್ಟಾರ್ಟ್ ಅಪ್ ಗಳು ಉದ್ಯಮದ ಆಲೋಚನೆಗಳಿಗೆ ಒಡ್ಡಿಕೊಳ್ಳುತ್ತವೆ ಮತ್ತು ಎಂಎನ್ಸಿ ಗಳಿಂದ ನೇರ ಆದೇಶಗಳನ್ನು ಪಡೆಯುತ್ತವೆ.