Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಭೀಕರ ಕೊಲೆ : ಪ್ರೀತಿಸಿದ್ದಕ್ಕೆ, ಹೆತ್ತ ಮಗಳನ್ನು ಕೊಂದು, ಹಳ್ಳದಲ್ಲಿ ಶವ ಹೂತು ಹಾಕಿದ ಪಾಪಿ ತಂದೆ!

Garuda Purana : ಮರಣಕ್ಕೂ ಮುನ್ನ ಮನುಷ್ಯನಿಗೆ ಏನೆಲ್ಲಾ ಕಾಣಿಸುತ್ತದೆ ಗೊತ್ತಾ? ಗರುಡ ಪುರಾಣದ ರಹಸ್ಯಗಳಿವು!

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ತಪ್ಪದೇ ಇವುಗಳನ್ನು ಪರಿಶೀಲಿಸಿಕೊಳ್ಳಿ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರಿ ಮಹಿಳಾ ನೌಕರರೇ ಗಮನಿಸಿ : `ಋತುಚಕ್ರ ರಜೆ’ಗೆ ಈ ಷರತ್ತುಗಳು ಅನ್ವಯ.!
KARNATAKA

BIG NEWS : ರಾಜ್ಯ ಸರ್ಕಾರಿ ಮಹಿಳಾ ನೌಕರರೇ ಗಮನಿಸಿ : `ಋತುಚಕ್ರ ರಜೆ’ಗೆ ಈ ಷರತ್ತುಗಳು ಅನ್ವಯ.!

By kannadanewsnow57

ಬೆಂಗಳೂರು : ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರಿಗೆ ಋತುಚಕ್ರ ರಜೆ ಸೌಲಭ್ಯವನ್ನು ಕಲ್ಪಿಸಿರುವ ರಾಜ್ಯ ಸರ್ಕಾರವು ಇದೀಗ ಋತುಚಕ್ರ ರಜೆ ಪಡೆಯಲು ಮಹಿಳಾ ನೌಕರರು ಈ ಷರತ್ತುಗಳ ಪಾಲನೆ ಕಡ್ಡಾಯವಾಗಿದೆ.

ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿ ಅವರ ಮನೋಸ್ಥೆರ್ಯವನ್ನು ಹೆಚ್ಚಿಸಲು ಮಾಸಿಕ ಋತುಚಕ್ರದ ಸಂದರ್ಭದಲ್ಲಿ ಪ್ರತಿ ಮಾಸಿಕ ಒಂದು ದಿನದ ರಜೆಯಂತೆ ವಾರ್ಷಿಕ 12 ದಿನಗಳ ವೇತನ ಸಹಿತ ರಜೆಯನ್ನು ಪಡೆದುಕೊಳ್ಳಲು ಇರುವ ನಿಬಂಧನೆಗಳು ಉಲ್ಲೇಖ (2) ರ ಮತ್ತು ಸರ್ಕಾರದ ಆದೇಶ ದಿನಾಂಕ:12.11.2025ರಲ್ಲಿ ಪ್ರಸ್ತಾಪಿಸಿರುವಂತೆ ಇರುತ್ತದೆ.

ಷರತ್ತುಗಳು:

1. ಮಹಿಳಾ ನೌಕರರು ಆಯಾ ತಿಂಗಳ “ಋತುಚಕ್ರ ರಜೆ”ಯನ್ನು ಆಯಾ ತಿಂಗಳಿನಲ್ಲಿಯೇ ಬಳಸಿಕೊಳ್ಳುವುದು. ಹಿಂದಿನ ತಿಂಗಳ “ಋತುಚಕ್ರ ರಜೆ”ಯನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು (CARRY OVER) ಅವಕಾಶವಿರುವುದಿಲ್ಲ.

2. ಪ್ರತಿ ತಿಂಗಳು ಒಂದು ದಿನದ “ಋತುಚಕ್ರ ರಜೆ” ಪಡೆಯಲು ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅವಶ್ಯಕತೆ ಇರುವುದಿಲ್ಲ”.

3. ಋತುಚಕ್ರ ಹೊಂದಿರುವ, 18 ರಿಂದ 52 ವಯಸ್ಸಿನ ಮಹಿಳಾ ಸರ್ಕಾರಿ ನೌಕರರು ಈ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ.

4. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸಕ್ಷಮವಾದ ಪ್ರಾಧಿಕಾರಿಯು ಋತುಚಕ್ರ ರಜೆಯನ್ನು ಮಂಜೂರು ಮಾಡಬಹುದು.

5. ಈ ರಜೆಯನ್ನು ರಜೆ/ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸತಕ್ಕದ್ದು.

6. ಋತುಚಕ್ರ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸತಕ್ಕದ್ದಲ್ಲ.

ಸದರಿ ಸೌಲಭ್ಯವನ್ನು ಪಡೆದುಕೊಳ್ಳಲು EEDS ಮುಖಾಂತರದಲ್ಲಿ ಆಯಾ ಪ್ರಾಧಿಕಾರಿಯವರಿಗೆ ಮನವಿ ಸಲ್ಲಿಸಿಕೊಂಡು ಪಡೆದುಕೊಳ್ಳಬಹುದಾಗಿದೆ. ಸಂದರ್ಭಾನುಸಾರ ರಜೆ ಸೌಲಭ್ಯವನ್ನು ಪಡೆದುಕೊಳ್ಳುವ ನೌಕರರು ಕಛೇರಿಯ ತುರ್ತು ಕಡತಗಳು ನ್ಯಾಯಾಲಯದ ಕಡತಗಳಿದ್ದಲ್ಲಿ ಆಯಾ ಶಾಖಾಧಿಕಾರಿಯವರ ಗಮನಕ್ಕೆ ಕಡ್ಡಾಯವಾಗಿ ತಂದು ಜವಾಬ್ದಾರಿಯನ್ನು ನಿರ್ವಹಿಸತಕ್ಕದ್ದು.

ಮೇಲಿನ ಸರ್ಕಾರದ ಆದೇಶಗಳನ್ವಯ ಸರ್ಕಾರದ ಆದೇಶ ಹೊರಡಿಸಲಾಗಿರುವ ದಿನಾಂಕದಿಂದ ಜಾರಿಗೆ ಬರುವಂತೆ ಇಲಾಖಾ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 52 ವರ್ಷಗಳ ಮಿತಿಯಲ್ಲಿರುವ ಋತುಚಕ್ರ ಹೊಂದಿರುವ ಮಹಿಳಾ ನೌಕರರಿಗೆ ಋತುಚಕ್ರ ರಜೆ ಸೌಲಭ್ಯವನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ.

BIG NEWS: State government female employees take note: These conditions apply to 'menstrual leave'!
Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಭೀಕರ ಕೊಲೆ : ಪ್ರೀತಿಸಿದ್ದಕ್ಕೆ, ಹೆತ್ತ ಮಗಳನ್ನು ಕೊಂದು, ಹಳ್ಳದಲ್ಲಿ ಶವ ಹೂತು ಹಾಕಿದ ಪಾಪಿ ತಂದೆ!

1 Min Read

Garuda Purana : ಮರಣಕ್ಕೂ ಮುನ್ನ ಮನುಷ್ಯನಿಗೆ ಏನೆಲ್ಲಾ ಕಾಣಿಸುತ್ತದೆ ಗೊತ್ತಾ? ಗರುಡ ಪುರಾಣದ ರಹಸ್ಯಗಳಿವು!

2 Mins Read

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ತಪ್ಪದೇ ಇವುಗಳನ್ನು ಪರಿಶೀಲಿಸಿಕೊಳ್ಳಿ.!

2 Mins Read
Recent News

BREAKING : ರಾಜ್ಯದಲ್ಲಿ ಭೀಕರ ಕೊಲೆ : ಪ್ರೀತಿಸಿದ್ದಕ್ಕೆ, ಹೆತ್ತ ಮಗಳನ್ನು ಕೊಂದು, ಹಳ್ಳದಲ್ಲಿ ಶವ ಹೂತು ಹಾಕಿದ ಪಾಪಿ ತಂದೆ!

Garuda Purana : ಮರಣಕ್ಕೂ ಮುನ್ನ ಮನುಷ್ಯನಿಗೆ ಏನೆಲ್ಲಾ ಕಾಣಿಸುತ್ತದೆ ಗೊತ್ತಾ? ಗರುಡ ಪುರಾಣದ ರಹಸ್ಯಗಳಿವು!

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ತಪ್ಪದೇ ಇವುಗಳನ್ನು ಪರಿಶೀಲಿಸಿಕೊಳ್ಳಿ.!

SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ಗುಡುಗು ಸಿಡಿಲಿನ ಆರ್ಭಟಕ್ಕೆ ಶಿಕ್ಷಕ ಸಾವು!

State News
KARNATAKA

BREAKING : ರಾಜ್ಯದಲ್ಲಿ ಭೀಕರ ಕೊಲೆ : ಪ್ರೀತಿಸಿದ್ದಕ್ಕೆ, ಹೆತ್ತ ಮಗಳನ್ನು ಕೊಂದು, ಹಳ್ಳದಲ್ಲಿ ಶವ ಹೂತು ಹಾಕಿದ ಪಾಪಿ ತಂದೆ!

By ಸುರೇಶ್‌ KARNATAKA 1 Min Read

ತುಮಕೂರು : ರಾಜ್ಯದಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದ್ದು, ಪ್ರೀತಿಯ ವಿಚಾರಕ್ಕೆ ತಂದೆಯಿಂದಲೇ ಮಗಳ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಳ್ಳದಲ್ಲಿ…

Garuda Purana : ಮರಣಕ್ಕೂ ಮುನ್ನ ಮನುಷ್ಯನಿಗೆ ಏನೆಲ್ಲಾ ಕಾಣಿಸುತ್ತದೆ ಗೊತ್ತಾ? ಗರುಡ ಪುರಾಣದ ರಹಸ್ಯಗಳಿವು!

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ತಪ್ಪದೇ ಇವುಗಳನ್ನು ಪರಿಶೀಲಿಸಿಕೊಳ್ಳಿ.!

SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ಗುಡುಗು ಸಿಡಿಲಿನ ಆರ್ಭಟಕ್ಕೆ ಶಿಕ್ಷಕ ಸಾವು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.