ಬೆಂಗಳೂರು : ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರಿಗೆ ಋತುಚಕ್ರ ರಜೆ ಸೌಲಭ್ಯವನ್ನು ಕಲ್ಪಿಸಿರುವ ರಾಜ್ಯ ಸರ್ಕಾರವು ಇದೀಗ ಋತುಚಕ್ರ ರಜೆ ಪಡೆಯಲು ಮಹಿಳಾ ನೌಕರರು ಈ ಷರತ್ತುಗಳ ಪಾಲನೆ ಕಡ್ಡಾಯವಾಗಿದೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿ ಅವರ ಮನೋಸ್ಥೆರ್ಯವನ್ನು ಹೆಚ್ಚಿಸಲು ಮಾಸಿಕ ಋತುಚಕ್ರದ ಸಂದರ್ಭದಲ್ಲಿ ಪ್ರತಿ ಮಾಸಿಕ ಒಂದು ದಿನದ ರಜೆಯಂತೆ ವಾರ್ಷಿಕ 12 ದಿನಗಳ ವೇತನ ಸಹಿತ ರಜೆಯನ್ನು ಪಡೆದುಕೊಳ್ಳಲು ಇರುವ ನಿಬಂಧನೆಗಳು ಉಲ್ಲೇಖ (2) ರ ಮತ್ತು ಸರ್ಕಾರದ ಆದೇಶ ದಿನಾಂಕ:12.11.2025ರಲ್ಲಿ ಪ್ರಸ್ತಾಪಿಸಿರುವಂತೆ ಇರುತ್ತದೆ.
ಷರತ್ತುಗಳು:
1. ಮಹಿಳಾ ನೌಕರರು ಆಯಾ ತಿಂಗಳ “ಋತುಚಕ್ರ ರಜೆ”ಯನ್ನು ಆಯಾ ತಿಂಗಳಿನಲ್ಲಿಯೇ ಬಳಸಿಕೊಳ್ಳುವುದು. ಹಿಂದಿನ ತಿಂಗಳ “ಋತುಚಕ್ರ ರಜೆ”ಯನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು (CARRY OVER) ಅವಕಾಶವಿರುವುದಿಲ್ಲ.
2. ಪ್ರತಿ ತಿಂಗಳು ಒಂದು ದಿನದ “ಋತುಚಕ್ರ ರಜೆ” ಪಡೆಯಲು ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅವಶ್ಯಕತೆ ಇರುವುದಿಲ್ಲ”.
3. ಋತುಚಕ್ರ ಹೊಂದಿರುವ, 18 ರಿಂದ 52 ವಯಸ್ಸಿನ ಮಹಿಳಾ ಸರ್ಕಾರಿ ನೌಕರರು ಈ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ.
4. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸಕ್ಷಮವಾದ ಪ್ರಾಧಿಕಾರಿಯು ಋತುಚಕ್ರ ರಜೆಯನ್ನು ಮಂಜೂರು ಮಾಡಬಹುದು.
5. ಈ ರಜೆಯನ್ನು ರಜೆ/ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸತಕ್ಕದ್ದು.
6. ಋತುಚಕ್ರ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸತಕ್ಕದ್ದಲ್ಲ.
ಸದರಿ ಸೌಲಭ್ಯವನ್ನು ಪಡೆದುಕೊಳ್ಳಲು EEDS ಮುಖಾಂತರದಲ್ಲಿ ಆಯಾ ಪ್ರಾಧಿಕಾರಿಯವರಿಗೆ ಮನವಿ ಸಲ್ಲಿಸಿಕೊಂಡು ಪಡೆದುಕೊಳ್ಳಬಹುದಾಗಿದೆ. ಸಂದರ್ಭಾನುಸಾರ ರಜೆ ಸೌಲಭ್ಯವನ್ನು ಪಡೆದುಕೊಳ್ಳುವ ನೌಕರರು ಕಛೇರಿಯ ತುರ್ತು ಕಡತಗಳು ನ್ಯಾಯಾಲಯದ ಕಡತಗಳಿದ್ದಲ್ಲಿ ಆಯಾ ಶಾಖಾಧಿಕಾರಿಯವರ ಗಮನಕ್ಕೆ ಕಡ್ಡಾಯವಾಗಿ ತಂದು ಜವಾಬ್ದಾರಿಯನ್ನು ನಿರ್ವಹಿಸತಕ್ಕದ್ದು.
ಮೇಲಿನ ಸರ್ಕಾರದ ಆದೇಶಗಳನ್ವಯ ಸರ್ಕಾರದ ಆದೇಶ ಹೊರಡಿಸಲಾಗಿರುವ ದಿನಾಂಕದಿಂದ ಜಾರಿಗೆ ಬರುವಂತೆ ಇಲಾಖಾ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 52 ವರ್ಷಗಳ ಮಿತಿಯಲ್ಲಿರುವ ಋತುಚಕ್ರ ಹೊಂದಿರುವ ಮಹಿಳಾ ನೌಕರರಿಗೆ ಋತುಚಕ್ರ ರಜೆ ಸೌಲಭ್ಯವನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ.









