ಬೆಂಗಳೂರು: ರಾಜ್ಯ ಸರ್ಕಾರದಿಂದ 2026ನೇ ಸಾಲಿನ ಸಾರ್ವತ್ರಿಕ ಹಾಗೂ ಪರಿಮಿತ ರಜಾ ದಿನಗಳ ಪಟ್ಟಿ ಪ್ರಕಟಿಸಲಾಗಿದೆ. ಹಾಗಾದ್ರೇ 2026ನೇ ಸಾಲಿಗೆ ಮಂಜೂರಾದ ಸಾರ್ವತ್ರಿಕೆ ರಜಾ ದಿನಗಳು ಹಾಗೂ ಪರಿಮಿತ ರಜಾ ದಿನಗಳ ಅಧಿಕೃತ ಪಟ್ಟಿಯನ್ನು ಮುಂದಿದೆ ನೋಡಿ..
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅಧಿಸೂಚನೆ ಹೊರಡಿಸಿದ್ದಾರೆ. 2026ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಸಾರ್ವಜನಿಕರಿಗಾಗಿ ಈ ಕೆಳಕಂಡಂತೆ ಪ್ರಕಟಿಸಲಾಗಿದೆ ಎಂದಿದ್ದಾರೆ.
ಸೂಚನೆ:
ತುಲಾ ಸಂಕ್ರಮಣ (18.10.2026) ಭಾನುವಾರದಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
ಈ ಕೆಳಕಂಡ ರಜೆಗಳನ್ನು ನಮೂದಿಸಿರುವುದಿಲ್ಲ.
ದಿನಾಂಕ:14.04.2026ರ ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯ ಸಾರ್ವತ್ರಿಕ ರಜೆಯಂದು ಬರುವ ಸೌರಮಾನ ಯುಗಾದಿ.
ದಿನಾಂಕ:01.05.2026ರ ಶುಕ್ರವಾರ ಕಾರ್ಮಿಕ ದಿನಾಚರಣೆಯ ಸಾರ್ವತ್ರಿಕ ರಜೆಯಂದು ಬರುವ ಬುದ್ಧ ಪೂರ್ಣಿಮ.
ಋಗ್ ಉಪಾಕರ್ಮ / ತಿರುಓಣಂ ಬುಧವಾರ, 26.08.2026, ಈದ್-ಮಿಲಾದ್ ರಾಷ್ಟ್ರೀಯ ರಜಾದಿನ.
ದಿನಾಂಕ:14.09.2026ರ ಸೋಮವಾರ ವರಸಿದ್ಧಿ ವಿನಾಯಕ ವ್ರತ ಸಾರ್ವತ್ರಿಕ ರಜೆಯಂದು ಬರುವ ಸ್ವರ್ಣಗೌರಿ ವ್ರತ.









