Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ʻವಕ್ಫ್ ತಿದ್ದುಪಡಿ ಕಾಯ್ದೆʼ ಅರ್ಜಿ ವಿಚಾರಣೆ ಮೇ.20 ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್‌ | Waqf bill

15/05/2025 12:42 PM

ಮೇ 20ರಿಂದ 30ರವರೆಗೆ ‘ಜೈ ಹಿಂದ್ ಸಭೆ’ ನಡೆಸಲಿರುವ ಕಾಂಗ್ರೆಸ್ | Jai Hind Sabhas

15/05/2025 12:40 PM

BREAKING : ಭಯೋತ್ಪಾದಕರು ಧರ್ಮ ನೋಡಿ ಕೊಂದಿದ್ದರು. ನಾವು ಉಗ್ರರ ಕರ್ಮ ನೋಡಿ ಹೊಡೆದಿದ್ದೇವೆ : ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ | WATCH VIDEO

15/05/2025 12:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : ಕೆಲಸಕ್ಕೆ ಸೇರಿದ ಬಳಿಕ ಈ ನಿಯಮಗಳ ಪಾಲನೆ ಕಡ್ಡಾಯ.!
KARNATAKA

BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : ಕೆಲಸಕ್ಕೆ ಸೇರಿದ ಬಳಿಕ ಈ ನಿಯಮಗಳ ಪಾಲನೆ ಕಡ್ಡಾಯ.!

By kannadanewsnow5726/12/2024 9:21 AM

ಬೆಂಗಳೂರು : ರಾಜ್ಯ ಸರ್ಕಾರಿ ಕೆಲಸಕ್ಕೆ ಸೇರುವ ನೌಕರರು ಕೆಲವು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಕರ್ನಾಟಕ ಸಿವಿಲ್ ಸೇವಾ ನಡತೆ ನಿಯಮಗಳಲ್ಲಿ ಸರ್ಕಾರಿ ನೌಕವರರು ಹೇಗೆ ಇರಬೇಕೆಂದು ತಿಳಿಸಲಾಗಿರುತ್ತದೆ. ಅದಕ್ಕೆ ಸಂಬಂಧಪಟ್ಟ ಒಂದಿಷ್ಟು ಮಾಹಿತಿ ಇಲ್ಲಿದೆ.

(1) ಪ್ರತಿಯೊಬ್ಬ ಸರ್ಕಾರಿ ನೌಕರನು, ಎಲ್ಲ ಕಾಲಗಳಲ್ಲಿಯೂ;-

(i) ಸಂಪೂರ್ಣ ನೀತಿ ನಿಷ್ಠೆಯನ್ನು ಹೊಂದಿರತಕ್ಕದ್ದು,

(ii) ಕರ್ತವ್ಯ ಶ್ರದ್ಧೆಯನ್ನು ಹೊಂದಿರತಕ್ಕದ್ದು;

(iii) ಸರ್ಕಾರಿ ನೌಕರನಿಗೆ ತಕ್ಕದ್ದಲ್ಲದ ಯಾವುದನ್ನೂ ಮಾಡತಕ್ಕದ್ದಲ್ಲ;

(iv) ಯಾವುದೇ ಅಪರಾಧಿಕ ಚಟುವಟಿಕೆಯಲ್ಲಿ ತೊಡಗತಕ್ಕದ್ದಲ್ಲ.

(2) ಪ್ರತಿಯೊಬ್ಬ ಸರ್ಕಾರಿ ನೌಕರನು;-

(i) ಉನ್ನತ ನೈತಿಕ ಆದರ್ಶಗಳನ್ನು ಹೊಂದಿರತಕ್ಕದ್ದು;

(ii) ರಾಜಕೀಯವಾಗಿ ತಟಸ್ಥನಾಗಿರತಕ್ಕದ್ದು;

(iii) ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ, ಅರ್ಹತಾದಾಯಕ, ನ್ಯಾಯ ಸಮ್ಮತ ಮತ್ತು ನಿಷ್ಪಕ್ಷಪಾತತೆಯ ಮೂಲ ತತ್ವಗಳನ್ನು ಅಳವಡಿಸಿಕೊಂಡಿರತಕ್ಕದ್ದು;

(iv) ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ನಿರ್ವಹಿಸತಕ್ಕದ್ದು;

(v) ಸಾರ್ವಜನಿಕರಿಗೆ ಸ್ಪಂದನಾಶೀಲನಾಗಿರತಕ್ಕದ್ದು ಹಾಗೂ;

(vi) ಸಾರ್ವಜನಿಕರೊಂದಿಗೆ ಸೌಜನ್ಯ ಹಾಗೂ ವಿನಯದಿಂದ ವರ್ತಿಸತಕ್ಕದ್ದು.

(3) ಮೇಲ್ವಿಚಾರಣಾ ಹುದ್ದೆಯನ್ನು ಹೊಂದಿರುವ ಪ್ರತಿಯೊಬ್ಬ ಸರ್ಕಾರಿ ನೌಕರನು, ತತ್ಕಾಲದಲ್ಲಿ ತನ್ನ ನಿಯಂತ್ರಣಕ್ಕೆ ಮತ್ತು ಅಧಿಕಾರಕ್ಕೆ ಒಳಪಟ್ಟಿರುವ ಎಲ್ಲಾ ಸರ್ಕಾರಿ ನೌಕರರ ನೀತಿ ನಿಷ್ಠೆಯನ್ನು ಮತ್ತು ಕರ್ತವ್ಯ ಶ್ರದ್ಧೆಯನ್ನು ಸುನಿಶ್ಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು.

4) ಪ್ರತಿಯೊಬ್ಬ ಸರ್ಕಾರಿ ನೌಕರನು, ತನ್ನ ಕರ್ತವ್ಯಗಳನ್ನು ನಿರ್ವಹಿಸುವಾಗ ಸೌಜನ್ಯಯುತವಾದ ವರ್ತನೆಯನ್ನು ಹೊಂದಿರತಕ್ಕದ್ದು.

(5) ಪ್ರತಿಯೊಬ್ಬ ಸರ್ಕಾರಿ ನೌಕರನು:-

(i) ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಸರ್ವೋಚ್ಛತೆಗೆ ಸ್ವತಃ ಬದ್ಧನಾಗಿರತಕ್ಕದ್ದು ಮತ್ತು ಎತ್ತಿ ಹಿಡಿಯತಕ್ಕದ್ದು;

(ii) ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆ, ರಾಷ್ಟ್ರದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಮತ್ತು ನೈತಿಕತೆಯನ್ನು ಸಮರ್ಥಿಸತಕ್ಕದ್ದು ಮತ್ತು ಎತ್ತಿ ಹಿಡಿಯತಕ್ಕದ್ದು;

(iii) ಸಾರ್ವಜನಿಕ ಹಿತದೃಷ್ಠಿಯಿಂದ ಮಾತ್ರವೇ ನಿರ್ಧಾರಗಳನ್ನು ತೆಗೆದುಕೊಳ್ಳತಕ್ಕದ್ದು ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ಸಮರ್ಥವಾಗಿ, ಪರಿಣಾಮಕಾರಿಯಾಗಿ ಮತ್ತು ಮಿತವ್ಯಯಕರವಾಗಿ ಬಳಸತಕ್ಕದ್ದು ಅಥವಾ ಬಳಸುವಂತೆ ಮಾಡತಕ್ಕದ್ದು;

(iv) ತನ್ನ ಸಾರ್ವಜನಿಕ ಕರ್ತವ್ಯಗಳಿಗೆ ಸಂಬಂಧಿಸಿದ ಯಾವುದೇ ಖಾಸಗಿ ಹಿತಾಸಕ್ತಿಯನ್ನು ಘೋಷಿಸತಕ್ಕದ್ದು ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಸಂರಕ್ಷಿಸುವಂಥ ರೀತಿಯಲ್ಲಿ ಯಾವುದೇ ಬಿಕ್ಕಟ್ಟುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳತಕ್ಕದ್ದು;

(v) ತನ್ನ ಪದೀಯ ಕರ್ತವ್ಯಗಳ ನಿರ್ವಹಣೆಯಲ್ಲಿ ತನ್ನ ಮೇಲೆ ಪ್ರಭಾವ ಬೀರಬಹುದಾದ ಯಾರೇ ವ್ಯಕ್ತಿ ಅಥವಾ ಯಾವುದೇ ಸಂಸ್ಥೆಯ ಯಾವುದೇ ಹಣಕಾಸು ಅಥವಾ ಇತರ ಆಮಿಷಗಳಿಗೆ ತಾನು ಒಳಗಾಗತಕ್ಕದ್ದಲ್ಲ;

(vi ) ನಾಗರಿಕ ಸೇವಾ ನೌಕರನಾಗಿ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳತಕ್ಕದ್ದಲ್ಲ ಮತ್ತು ಸ್ವಂತಕ್ಕಾಗಿ, ತನ್ನ ಕುಟುಂಬಕ್ಕಾಗಿ ಅಥವಾ ತನ್ನ ಸ್ನೇಹಿತರಿಗಾಗಿ ಹಣಕಾಸು ಅಥವಾ ಬಹು ಮುಖ್ಯ ಪ್ರಯೋಜನಗಳನ್ನು ದೊರಕಿಸಿಕೊಡುವ ಉದ್ದೇಶದಿಂದ ನಿರ್ಧಾರಗಳನ್ನು ತೆಗೆದುಕೊಳ್ಳತಕ್ಕದ್ದಲ್ಲ;

(vii) ಅರ್ಹತೆಯ ಆಧಾರದ ಮೇಲೆ ಮಾತ್ರವೇ ಆಯ್ಕೆಗಳನ್ನು ಮಾಡ ತಕ್ಕದ್ದು. ನಿರ್ಣಯಗಳನ್ನು ತೆಗೆದುಕೊಳ್ಳತಕ್ಕದ್ದು ಮತ್ತು ಶಿಫಾರಸ್ಸುಗಳನ್ನು ಮಾಡತಕ್ಕದ್ದು;

(viii) ನ್ಯಾಯಸಮ್ಮತವಾಗಿ ಮತ್ತು ನಿಷ್ಪಕ್ಷಪಾತದಿಂದ ಕಾರ್ಯನಿರ್ವಹಿಸತಕ್ಕದು ಹಾಗೂ ಯಾವುದೇ ವ್ಯಕ್ತಿಯ ಅಥವಾ ಪಕ್ಷದ ವಿರುದ್ಧ ತಾರತಮ್ಯ ಮಾಡತಕ್ಕದ್ದಲ್ಲ;

(ix) ಯಾವುದೇ ಕಾನೂನು, ನಿಯಮಗಳು, ವಿನಿಯಮಗಳು ಮತ್ತು ಸ್ಥಾಪಿತ ಪದ್ಧತಿಗಳಿಗೆ ವಿರುದ್ಧವಾಗಿರುವ ಅಥವಾ ವಿರುದ್ಧವಾಗಿರಬಹುದಾದ ಯಾವುದೇ ಕಾರ್ಯ ಮಾಡುವುದನ್ನು ನಿಬರ್ಂಧಿಸತಕ್ಕದ್ದು;

(x) ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಶಿಸ್ತನ್ನು ಕಾಪಾಡಿಕೊಳ್ಳತಕ್ಕದ್ದು ಮತ್ತು ತನಗೆ ಯುಕ್ತವಾಗಿ ತಿಳಿಸಲಾದ ಕಾನೂನುಬದ್ಧ ಆದೇಶಗಳನ್ನು ಜಾರಿಗೊಳಿಸಲು ಬದ್ಧನಾಗಿರತಕ್ಕದ್ದು;

(xi) ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನುಗಳ ಮೂಲಕ ಅಗತ್ಯಪಡಿಸಲಾದಂಥ ಪದೀಯ ಕರ್ತವ್ಯಗಳನ್ನು ನಿರ್ವಹಿಸುವಾಗ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಬದ್ದನಾಗಿರತಕ್ಕದ್ದು, ಅದರಲ್ಲೂ ಮುಖ್ಯವಾಗಿ ಭಾರತದ ಸಾರ್ವಭೌಮತೆಗೆ ಮತ್ತು ಅಖಂಡತೆಗೆ, ರಾಷ್ಟ್ರದ ಭದ್ರತೆಗೆ, ರಾಷ್ಟ್ರದ ಕಾರ್ಯತಂತ್ರ, ವೈಜ್ಞಾನಿಕ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ವಿದೇಶಿ ರಾಷ್ಟ್ರಗಳೊಂದಿಗಿನ ಸ್ನೇಹ ಸಂಬಂಧಗಳಿಗೆ ಬಾಧಕವನ್ನುಂಟು ಮಾಡುವಂತೆ ಅಥವಾ ಒಂದು ಅಪರಾಧದ ಚಿತಾವಣೆಗೆ ಕಾರಣವಾಗುವಂತೆ ಅಥವಾ ಯಾವುದೇ ವ್ಯಕ್ತಿಗೆ ಕಾನೂನು ಬಾಹಿರ ಪ್ರಯೋಜನಗಳನ್ನು ಮಾಡಿಕೊಡುವಂತೆ ಮಾಹಿತಿಯನ್ನು ಬಹಿರಂಗಪಡಿಸತಕ್ಕದ್ದಲ್ಲ;

(xii) ಅತ್ಯುನ್ನತ ಮಟ್ಟದ ನೈಪುಣ್ಯತೆಯಿಂದ ಹಾಗೂ ತನ್ನ ಗರಿಷ್ಠ ಸಾಮರ್ಥ್ಯದ ವೃತ್ತಿಪರತೆಯಿಂದ ತನ್ನ ಕರ್ತವ್ಯಗಳನ್ನು ಪಾಲಿಸತಕ್ಕದ್ದು ಹಾಗೂ ನಿರ್ವಹಿಸತಕ್ಕದ್ದು.

ವಿವರಣೆ: ಒಬ್ಬ ಸರ್ಕಾರಿ ನೌಕರನಿಗೆ ಇತರ ಕಾರ್ಯಗಳ ನಡುವೆ

ವಹಿಸಿದ ಒಂದು ಕಾರ್ಯವನ್ನು ನಿಗದಿಪಡಿಸಿದ ಸಮಯದೊಳಗೆ ಮತ್ತು ಆತನ ನಿರೀಕ್ಷಿತ ಕಾರ್ಯಕ್ಷಮತೆಯ ಗುಣಮಟ್ಟದೊಂದಿಗೆ ನಿರ್ವಹಿಸಲು ಆತನು ರೂಢಿಗತವಾಗಿ ವಿಫಲನಾದಲ್ಲಿ, ಅದನ್ನು (1)ನೇ ಉಪ ನಿಯಮ ಮತ್ತು (3)ನೇ ಉಪ ನಿಯಮದ ಉದ್ದೇಶಕ್ಕಾಗಿ ಕರ್ತವ್ಯದ ಮೇಲಿನ ಶ್ರದ್ದೆಯ ಕೊರತೆ ಎಂದು ಭಾವಿಸತಕ್ಕದ್ದು.

(xiii) ಯಾವುದೇ ಹಂತದಲ್ಲಿ ತೆಗೆದುಕೊಂಡ ಯಾವುದೇ ಉದ್ದೇಶಿತ ಕ್ರಮವು, ಯಾವುದೇ ನಿಯಮ ಅಥವಾ ಕಾನೂನಿಗೆ ತದ್ವಿರುದ್ಧ ಇದ್ದಲ್ಲಿ, ಅಥವಾ ಸರ್ಕಾರದ ಕಾರ್ಯನೀತಿಗಳಿಗೆ ಭಿನ್ನವಾಗಿದ್ದಲ್ಲಿ. ಅಥವಾ ವಹಿಸಲಾದ ಪ್ರಕರಣದಲ್ಲಿ ಪ್ರಕ್ರಿಯಾ ಲೋಪ ಕಂಡುಬಂದಲ್ಲಿ ಆ ಅಂಶವನ್ನು ಮೇಲಧಿಕಾರಿಗಳ ಗಮನಕ್ಕೆ ತರತಕ್ಕದ್ದು;

(xiv) ತನ್ನ ಕರ್ತವ್ಯಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದಕ್ಕಾಗಿ ಅಗತ್ಯವಾಗಿರುವ ವೃತ್ತಿಪರ ಜ್ಞಾನ ಮತ್ತು ಅನುಭವವನ್ನು ಪಡೆಯಲು ಪ್ರಯತ್ನ ಮಾಡತಕ್ಕದ್ದು ಹಾಗೂ ತನ್ನ ಕಾರ್ಯಕ್ಷೇತ್ರದ ಜ್ಞನವನ್ನು ವೃದ್ಧಿಸಿಕೊಳ್ಳಲು ಮತ್ತು ಕಚೇರಿ ಆಡಳಿತಾತ್ಮಕ ಸುಧಾರಿತ ವಿಧಾನಗಳಿಗೆ ತನ್ನನ್ನು ಸಿದ್ಧಪಡಿಸಿಕೊಳ್ಳಲು ಸರ್ವ ರೀತಿಯಲ್ಲೂ ಶ್ರಮಿಸತಕ್ಕದ್ದು ಹಾಗೂ;

(xv) ಸಾರ್ವಜನಿಕರೊಂದಿಗೆ ಅಧಿಕೃತ ವ್ಯವಹಾರ ನಡೆಸುವಲ್ಲಿ ಉದೇಶ ಪೂರ್ವಕವಾಗಿ ವಿಳಂಬ ಧೋರಣೆಯನ್ನು ತೋರತಕ್ಕದ್ದಲ್ಲ ಅಥವಾ ಆತ/ಆಕೆಗೆ ವಹಿಸಲಾದ ಕೆಲಸಗಳನ್ನು ವಿಲೇ ಮಾಡುವಲ್ಲಿ ದುರುದೇಶ ಪೂರ್ವಕವಾಗಿ ವಿಳಂಬ ಮಾಡತಕ್ಕದ್ದಲ್ಲ.

(6) (i) ಯಾರೇ ಸರ್ಕಾರಿ ನೌಕರನು, ತನ್ನ ಪದೀಯ ಕರ್ತವ್ಯಗಳನ್ನು ನಿರ್ವಹಿಸುವಾಗ ಅಥವಾ ಆತನಿಗೆ ಪ್ರದತ್ತವಾಗಿರುವ ಅಧಿಕಾರಗಳನ್ನು ಚಲಾಯಿಸುವಾಗ, ತನ್ನ ವರಿಷ್ಠಾಧಿಕಾರಿಯ ನಿರ್ದೇಶನದ ಮೇರೆಗೆ ಆತನು ಕಾರ್ಯನಿರ್ವಹಿಸುತ್ತಿರುವ ಸಂದರ್ಭದ ಹೊರತಾಗಿ, ತನ್ನ ಸ್ವಂತ ಅತ್ಯುತ್ತಮ ನಿರ್ಣಯ ಸರಿಯಾಗಿದೆ ಮತ್ತು ಕರಾರುವಾಕ್ಕಾಗಿದೆ ಎಂದೆನಿಸದೆ ಬೇರೆ ರೀತಿಯಲ್ಲಿ ಕಾರ್ಯನಿರ್ವಹಿಸತಕ್ಕದಲ್ಲ;

(ii) ಮೇಲಾಧಿಕಾರಿಯ ನಿರ್ದೇಶನವು ಸಾಮಾನ್ಯವಾಗಿ ಲಿಖಿತರೂಪದಲ್ಲಿರತಕ್ಕದ್ದು. ತುರ್ತು ಸಂದರ್ಭದ ಹಿನ್ನಲೆಯಲ್ಲಿ ಮೌಖಿಕ ನಿರ್ದೇಶನ ನೀಡುವುದು ಅನಿವಾರ್ಯವಾದಾಗ, ಮೇಲಧಿಕಾರಿಯು ತಾನಾಗಿಯೇ ಆಗಲಿ, ಅಥವಾ ಸಂಬಂಧಿಸಿದ ಅಧೀನ ಸರ್ಕಾರಿ ನೌಕರನ ಕೋರಿಕೆಯ ಮೇಲಾಗಲಿ ಅದನ್ನು ಆ ನಂತರ ಕೂಡಲೇ ಲಿಖಿತವಾಗಿ ಸ್ಥಿರೀಕರಿಸತಕ್ಕದ್ದು, ಮತ್ತು;

(iii) ತನ್ನ ಮೇಲಧಿಕಾರಿಯಿಂದ ಮೌಖಿಕ ನಿರ್ದೇಶನವನ್ನು ಸ್ವೀಕರಿಸಿದಂಥ ಸರ್ಕಾರಿ ನೌಕರನು, ಸಾಧ್ಯವಾದಷ್ಟು ಬೇಗನೆ ಆ ನಿರ್ದೇಶನವನ್ನು ಲಿಖಿತದಲ್ಲಿ ಸ್ಥಿರೀಕರಿಸುವಂತೆ ಕೋರತಕ್ಕದ್ದು ಮತ್ತು ಅಂಥ ಸಂದರ್ಭದಲ್ಲಿ ನಿರ್ದೇಶನವನ್ನು ಲಿಖಿತವಾಗಿ ಸ್ಥಿರೀಕರಿಸುವುದು ಮೇಲಾಧಿಕಾರಿಯ ಕರ್ತವ್ಯವಾಗಿರತಕ್ಕದ್ದು.

ವಿವರಣೆ: (6)ನೇ ಉಪ-ನಿಯಮದ (iii)ನೇ ಖಂಡದಲ್ಲಿ

ಇರುವುದು ಯಾವುದನ್ನೂ, ಅಧಿಕಾರಗಳು ಮತ್ತು ಹೊಣೆಗಾರಿಕೆಗಳ ಹಂಚಿಕೆ ಮತ್ತು ಪ್ರತ್ಯಾಯೋಜನೆಯ ಅಡಿಯಲ್ಲಿ ಅಂಥ ನಿರ್ದೇಶನಗಳು ಅಗತ್ಯವಿಲ್ಲದಿರುವಾಗ, ವರಿಷ್ಠ ಅಧಿಕಾರಿ ಅಥವಾ ಪ್ರಾಧಿಕಾರಿಯಿಂದ ನಿರ್ದೇಶನವನ್ನು ಕೋರುವ ಮೂಲಕ ಸರ್ಕಾರಿ ನೌಕರನು ತನ್ನ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಅವನನ್ನು ಅದು ಶಕ್ತಗೊಳಿಸುತ್ತದೆ ಎಂದು ಅರ್ಥೈಸತಕ್ಕದ್ದಲ್ಲ.

(7) ಹಾಜರಾತಿಯಲ್ಲಿ ಸಮಯಪಾಲನೆ:- ಪ್ರತಿಯೊಬ್ಬ ಸರ್ಕಾರಿ ನೌಕರನು ಸಮಯಕ್ಕೆ ಸರಿಯಾಗಿ ಕಛೇರಿಗೆ ಹಾಜರಾಗತಕ್ಕದ್ದು ಹಾಗೂ ತನ್ನ ಹುದ್ದೆಯ ಕರ್ತವ್ಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಗರಿಷ್ಠ ಸಮಯವನ್ನು ಮೀಸಲಿಡುವುದು ಮತ್ತು ತುರ್ತು ಸೇವೆ ಅಗತ್ಯವಿದ್ದಾಗ ಮತ್ತು ಉನ್ನತ ಅಧಿಕಾರಿಗಳ ಸೂಚನೆಯ ಮೇಲೆ, ಕಚೇರಿ ಕೆಲಸದ ಅವಧಿಗಳನ್ನು ಮೀರಿ ಕಾರ್ಯನಿರ್ವಹಿಸತಕ್ಕದ್ದು.

(8) ಪ್ರತಿಯೊಬ್ಬ ಸರ್ಕಾರಿ ನೌಕರನು, ಸರ್ಕಾರಿ ಸೇವೆಗೆ ಸೇರುವ ಸಮಯದಲ್ಲಿ, ಈ ಮುಂದಿನ ನಮೂನೆಯಲ್ಲಿನ ಪ್ರಮಾಣವನ್ನು ಮಾಡತಕ್ಕದ್ದು.

BIG NEWS : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ʻನಿವೃತ್ತಿ ವೇತನʼದ ನಿಯಮ BIG NEWS: 'State government employees take note' : It is mandatory to follow these rules after joining the job.
Share. Facebook Twitter LinkedIn WhatsApp Email

Related Posts

ಉದ್ಯೋಗವಾರ್ತೆ: 9,970 ರೈಲ್ವೆ ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಮೇ 19ರವರೆಗೆ ದಿನಾಂಕ ವಿಸ್ತರಣೆ | Railway Recruitment-2025

15/05/2025 12:05 PM3 Mins Read

BIG NEWS: ಇನ್ಮುಂದೆ ರಾಜ್ಯ ಸರ್ಕಾರದಿಂದಲೇ 108 ಆಂಬುಲೆನ್ಸ್ ಸೇವೆ: ಸಚಿವ ದಿನೇಶ್ ಗುಂಡೂರಾವ್

15/05/2025 11:58 AM1 Min Read

ಶ್ರೀಹರಿಯ ಈ 10 ಮಂತ್ರ ಪಠಿಸಿದರೆ 24 ಗಂಟೆಯಲ್ಲಿ ಇದರ ಪ್ರಭಾವದಿಂದ ಜೀವನವೇ ಬದಲಾಗುತ್ತೆ

15/05/2025 11:53 AM3 Mins Read
Recent News

BREAKING : ʻವಕ್ಫ್ ತಿದ್ದುಪಡಿ ಕಾಯ್ದೆʼ ಅರ್ಜಿ ವಿಚಾರಣೆ ಮೇ.20 ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್‌ | Waqf bill

15/05/2025 12:42 PM

ಮೇ 20ರಿಂದ 30ರವರೆಗೆ ‘ಜೈ ಹಿಂದ್ ಸಭೆ’ ನಡೆಸಲಿರುವ ಕಾಂಗ್ರೆಸ್ | Jai Hind Sabhas

15/05/2025 12:40 PM

BREAKING : ಭಯೋತ್ಪಾದಕರು ಧರ್ಮ ನೋಡಿ ಕೊಂದಿದ್ದರು. ನಾವು ಉಗ್ರರ ಕರ್ಮ ನೋಡಿ ಹೊಡೆದಿದ್ದೇವೆ : ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ | WATCH VIDEO

15/05/2025 12:35 PM

BREAKING : ಪಾಕಿಸ್ತಾನದ ನ್ಯೂಕ್ಲಿಯರ್ ಬ್ಲ್ಯಾಕ್ ಮೇಲ್ ಗೆ ಭಾರತ ಹೆದರೋದಿಲ್ಲ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ | WATCH VIDEO

15/05/2025 12:24 PM
State News
KARNATAKA

ಉದ್ಯೋಗವಾರ್ತೆ: 9,970 ರೈಲ್ವೆ ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಮೇ 19ರವರೆಗೆ ದಿನಾಂಕ ವಿಸ್ತರಣೆ | Railway Recruitment-2025

By kannadanewsnow5715/05/2025 12:05 PM KARNATAKA 3 Mins Read

ನವದೆಹಲಿ : ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ 9,970 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು…

BIG NEWS: ಇನ್ಮುಂದೆ ರಾಜ್ಯ ಸರ್ಕಾರದಿಂದಲೇ 108 ಆಂಬುಲೆನ್ಸ್ ಸೇವೆ: ಸಚಿವ ದಿನೇಶ್ ಗುಂಡೂರಾವ್

15/05/2025 11:58 AM

ಶ್ರೀಹರಿಯ ಈ 10 ಮಂತ್ರ ಪಠಿಸಿದರೆ 24 ಗಂಟೆಯಲ್ಲಿ ಇದರ ಪ್ರಭಾವದಿಂದ ಜೀವನವೇ ಬದಲಾಗುತ್ತೆ

15/05/2025 11:53 AM

BIG NEWS : ರಾಜ್ಯ ಸರ್ಕಾರಿ ನೌಕರರಿಗೆ `ಆರೋಗ್ಯ ಸಂಜೀವಿನಿ ಯೋಜನೆ’ : `DDO’ ಗಳು ಸಲ್ಲಿಸಬೇಕಾದ `ಘೋಷಣೆ/ಪ್ರಮಾಣ ಪತ್ರ’ದ ಬಗ್ಗೆ ಇಲ್ಲಿದೆ ಮಾಹಿತಿ

15/05/2025 11:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.