Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿದ್ಯಾರ್ಥಿಗಳೇ ಗಮನಿಸಿ : ದ್ವಿತೀಯ ಪಿಯುಸಿ ಪರೀಕ್ಷೆ-2 ರ ಪರಿಷ್ಕೃತ `ವೇಳಾಪಟ್ಟಿ’ ಪ್ರಕಟ, ಏ.30ರಿಂದ ಮೇ.13ರವರೆಗೆ ಎಕ್ಸಾಂ.!

10/04/2026 5:29 AM

ರಾಜ್ಯದಲ್ಲಿ ಈ ಬಾರಿ `ದ್ವಿತೀಯ ಪಿಯುಸಿ-ಪರೀಕ್ಷೆ-3′ ಇರುವುದಿಲ್ಲ : ಸಚಿವ ಮಧು ಬಂಗಾರಪ್ಪ

10/04/2026 5:20 AM

BIG NEWS : ಶಾಲೆಗಳಲ್ಲಿ ಪಠ್ಯಪುಸ್ತಕಗಳಿಲ್ಲದೆಯೇ `ತೃತೀಯ ಭಾಷೆ’ ಕಲಿಕೆ ಆರಂಭಕ್ಕೆ `CBSE’ ಆದೇಶ!

10/04/2026 5:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಡಿಫೈನ್ ಪಿಂಚಣಿ ಯೋಜನೆ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | GOVT EMPLOYEE
KARNATAKA

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಡಿಫೈನ್ ಪಿಂಚಣಿ ಯೋಜನೆ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | GOVT EMPLOYEE

By kannadanewsnow5714/05/2025 6:25 AM

ಬೆಂಗಳೂರು : ಹಿಂದಿನ ಡಿಫೈನ್ ಪಿಂಚಿಣಿ ಯೋಜನೆಗೆ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 247-A ರನ್ವಯ ಪಿಂಚಿಣಿ ಸೌಲಭ್ಯಕ್ಕಾಗಿ ಅರ್ಹತಾದಾಯಕ ಸೇವೆಯನ್ನು ಪರಿಗಣಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಕ್ರಮ ಸಂಖ್ಯೆ (1) ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ, ದಿನಾಂಕ:01.04.2006 ರಂದು ಹಾಗೂ ತದನಂತರ ಸರ್ಕಾರಿ ಸೇವೆಗೆ ಸೇರುವ ಎಲ್ಲಾ ಸರ್ಕಾರಿ ನೌಕರರಿಗೆ ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಯೋಜನೆಪದ್ಧತಿಯನ್ನು ಕಡ್ಡಾಯಗೊಳಿಸಿ ಜಾರಿಗೆ ತರಲಾಗಿರುತ್ತದೆ.

ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ, ಸದರಿ ಯೋಜನೆಯನ್ನು ಕಾರ್ಯರೂಪಗೊಳಿಸಿದೆ. ದಿನಾಂಕ:31.03.2006 ರ ಆದೇಶಾನುಸಾರ ನೌಕರನು ಸೇವೆಗೆ ವಾಸ್ತವವಾಗಿ ವರದಿ ಮಾಡಿಕೊಂಡ ದಿನಾಂಕದ ಆಧಾರದ ಮೇರೆಗೆ ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಯೋಜನೆಗೆ ಒಳಪಡುವುದಾಗಿದೆ.

ಕ್ರಮ ಸಂಖ್ಯೆ (3) ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ, ರಾಜ್ಯ ಸಿವಿಲ್ ಹುದ್ದೆಗಳಿಗೆ ಸಂಬಂಧಿಸಿದಂತೆ ದಿನಾಂಕ 1.4.2006 ರ ಪೂರ್ವದ ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆಗಳ ಸಂಬಂಧದಲ್ಲಿ ದಿನಾಂಕ 1.4.2006 ಮತ್ತು ತದನಂತರದಲ್ಲಿ ಆಯ್ಕೆ ಮತ್ತು ನೇಮಕ ಹೊಂದಿ ಸೇವೆಗೆ ಸೇರಿರುವ ಅಭ್ಯರ್ಥಿಗಳ ಪ್ರಕರಣಗಳಿದ್ದು, ಆದರೆ ಅದೇ ತಂಡದಲ್ಲಿನ ಇತರೆ ಅಭ್ಯರ್ಥಿಗಳು ದಿನಾಂಕ 1.4.2006 ರ ಪೂರ್ವದಲ್ಲಿಯೇ ಆಯ್ಕೆ ಮತ್ತು ನೇಮಕಾತಿಗಳು ಪೂರ್ಣಗೊಂಡು ಸೇವೆಗೆ ನೇಮಕ ಹೊಂದಿ ವರದಿ ಮಾಡಿಕೊಂಡಿರುವ ಮತ್ತು ಇದರಿಂದಾಗಿ ಡಿಫೈನ್ ಪಿಂಚಣಿ ಯೋಜನೆಗೆ ಒಳಪಟ್ಟಿರುವ ಸಂದರ್ಭಗಳಿರುವ ನಿರ್ದಿಷ್ಟ ವಿಶಿಷ್ಟ ಪ್ರಕರಣಗಳನ್ನು ಮಾತ್ರ ಸರ್ಕಾರದ ಆದೇಶ ಸಂಖ್ಯೆ: ಆಇ (ವಿಶೇಷ) 04 ಪಿಇಟಿ 2005, ದಿನಾಂಕ 31.3.2006 ರ ಆದೇಶದನ್ವಯ ದಿನಾಂಕ 1.4.2006 ರಿಂದ ಜಾರಿಗೊಳಿಸಲಾದ ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಯೋಜನಾ ವ್ಯಾಪ್ತಿಯಿಂದ ಸಡಿಲಿಕೆಯನ್ನು ನೀಡಿ ಕೆಲವೊಂದು ಷರತ್ತುಗಳಿಗೊಳಪಡಿಸಿ ಹಿಂದಿನ ಡಿಫೈನ್* ಪಿಂಚಣಿ ವ್ಯಾಪ್ತಿಗೆ ಒಳಪಡಿಸಲು ಸರ್ಕಾರವು ಆದೇಶಿಸಿದೆ.

ಕ್ರಮ ಸಂಖ್ಯೆ (4) ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ, ದಿನಾಂಕ 1.4.2006 ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗಾಗಿ ಹೊರಡಿಸಿದ ನೇಮಕಾತಿ ಅಧಿಸೂಚನೆಗಳ ಮೇರೆಗೆ ಆಯ್ಕೆ ಹೊಂದಿ ದಿನಾಂಕ 1.4.2006 ರಂದು ಅಥವಾ ಆ ದಿನಾಂಕದ ನಂತರ ಸೇವೆಗೆ ಸೇರಿರುವ ಕಾರಣದಿಂದ ನೂತನ ಅಂಶದಾಯಿ ಕೊಡುಗೆ ಯೋಜನೆಯ (ರಾಷ್ಟ್ರೀಯ ಪಿಂಚಣಿ ಯೋಜನೆ) ವ್ಯಾಪ್ತಿಗೊಳಪಟ್ಟಿರುವ ಸರ್ಕಾರಿ ನೌಕರರನ್ನು ಸರ್ಕಾರವು ಅವರ ಅಭಿಮತದ ಮೇರೆಗೆ ಕೆಳಕಂಡ ಷರತ್ತುಗಳಿಗೊಳಪಟ್ಟು ಒಂದು ಬಾರಿಯ ಕ್ರಮವಾಗಿ ಹಿಂದಿನ ಡಿಫೈನ್ದ ಪಿಂಚಣಿ ಯೋಜನೆ ವ್ಯಾಪ್ತಿಗೊಳಪಡಿಸಲು ಒಪ್ಪಿಗೆ ನೀಡಿದೆ.

ಪ್ರಸ್ತುತ ಸರ್ಕಾರ ಮೇಲೆ ನಮೂದಿಸಿದ ದಿನಾಂಕ 17.2.2021 ಹಾಗೂ ದಿನಾಂಕ 24.1.2024 ರ ಸರ್ಕಾರಿ ಆದೇಶಗಳ ಮೂಲಕ OPS ಯೋಜನೆಯ ವ್ಯಾಪ್ತಿಗೊಳಪಟ್ಟ ನೌಕರರಿಗೆ OPS ಯೋಜನೆಯ ಎಲ್ಲ ಸೌಲಭ್ಯಗಳನ್ನು ವಿಸ್ತರಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ:

ಸರ್ಕಾರದ ಆದೇಶ ಸಂಖ್ಯೆ: ಆಇ 263 ಸೇ-3 2022, ಬೆಂಗಳೂರು, ದಿನಾಂಕ:11-05-2025

ಪ್ರಸ್ತಾವನೆಯಲ್ಲಿ ವಿವರಿಸಲಾಗಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ಆದೇಶ ಸಂಖ್ಯೆ:ಆಇ 39 ಪಿಇಎನ್ 2020(ಭಾಗ), ದಿನಾಂಕ:17.2.2021 ಹಾಗೂ ಸರ್ಕಾರಿ ಆದೇಶ ಸಂಖ್ಯೆ: ಆಇ-ಪಿಇಎನ್/99/2023, ದಿನಾಂಕ:24.1.2024 ರ ಉಪಬಂಧಗಳನ್ವಯ ಹಿಂದಿನ ಡಿಫೈನ್ ಪಿಂಚಿಣಿ ಯೋಜನೆಗೆ ಯೋಜನೆಯನ್ನು ವಿಸ್ತರಿಸಲ್ಪಟ್ಟ ಸರ್ಕಾರಿ ನೌಕರರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 2-C ಅನ್ವಯವಾಗತಕ್ಕದ್ದಲ್ಲವೆಂದು ಮತ್ತು ಈ ನೌಕರರಿಗೆ ಅದೇ ನಿಯಮಾವಳಿಯ ನಾಲ್ಕನೇ ಭಾಗ (Part IV) ರಲ್ಲಿನ ಎಲ್ಲ ಉಪಬಂಧಗಳು ಅನ್ವಯವಾಗತಕ್ಕದ್ದೆಂದು ಆದೇಶಿಸಿದೆ.

ಈ ಕುರಿತು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗೆ ಅಗತ್ಯ ತಿದ್ದುಪಡಿಯನ್ನು ಮಾಡಲಾಗುವುದು.

BIG NEWS: State `Government Employees' Take Note: Important Order from the Government Regarding `Define Pension Scheme' | GOVT EMPLOYEE
Share. Facebook Twitter LinkedIn WhatsApp Email

Related Posts

ವಿದ್ಯಾರ್ಥಿಗಳೇ ಗಮನಿಸಿ : ದ್ವಿತೀಯ ಪಿಯುಸಿ ಪರೀಕ್ಷೆ-2 ರ ಪರಿಷ್ಕೃತ `ವೇಳಾಪಟ್ಟಿ’ ಪ್ರಕಟ, ಏ.30ರಿಂದ ಮೇ.13ರವರೆಗೆ ಎಕ್ಸಾಂ.!

10/04/2026 5:29 AM2 Mins Read

ರಾಜ್ಯದಲ್ಲಿ ಈ ಬಾರಿ `ದ್ವಿತೀಯ ಪಿಯುಸಿ-ಪರೀಕ್ಷೆ-3′ ಇರುವುದಿಲ್ಲ : ಸಚಿವ ಮಧು ಬಂಗಾರಪ್ಪ

10/04/2026 5:20 AM1 Min Read

BIG NEWS : ಶಾಲೆಗಳಲ್ಲಿ ಪಠ್ಯಪುಸ್ತಕಗಳಿಲ್ಲದೆಯೇ `ತೃತೀಯ ಭಾಷೆ’ ಕಲಿಕೆ ಆರಂಭಕ್ಕೆ `CBSE’ ಆದೇಶ!

10/04/2026 5:19 AM1 Min Read
Recent News

ವಿದ್ಯಾರ್ಥಿಗಳೇ ಗಮನಿಸಿ : ದ್ವಿತೀಯ ಪಿಯುಸಿ ಪರೀಕ್ಷೆ-2 ರ ಪರಿಷ್ಕೃತ `ವೇಳಾಪಟ್ಟಿ’ ಪ್ರಕಟ, ಏ.30ರಿಂದ ಮೇ.13ರವರೆಗೆ ಎಕ್ಸಾಂ.!

10/04/2026 5:29 AM

ರಾಜ್ಯದಲ್ಲಿ ಈ ಬಾರಿ `ದ್ವಿತೀಯ ಪಿಯುಸಿ-ಪರೀಕ್ಷೆ-3′ ಇರುವುದಿಲ್ಲ : ಸಚಿವ ಮಧು ಬಂಗಾರಪ್ಪ

10/04/2026 5:20 AM

BIG NEWS : ಶಾಲೆಗಳಲ್ಲಿ ಪಠ್ಯಪುಸ್ತಕಗಳಿಲ್ಲದೆಯೇ `ತೃತೀಯ ಭಾಷೆ’ ಕಲಿಕೆ ಆರಂಭಕ್ಕೆ `CBSE’ ಆದೇಶ!

10/04/2026 5:19 AM

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಗ್ ಅಪ್‌ ಡೇಟ್: 2027ರಿಂದ ಇರುವುದಿಲ್ಲ ಮುದ್ರಿತ ಅಂಕಪಟ್ಟಿ!

10/04/2026 5:16 AM
State News
KARNATAKA

ವಿದ್ಯಾರ್ಥಿಗಳೇ ಗಮನಿಸಿ : ದ್ವಿತೀಯ ಪಿಯುಸಿ ಪರೀಕ್ಷೆ-2 ರ ಪರಿಷ್ಕೃತ `ವೇಳಾಪಟ್ಟಿ’ ಪ್ರಕಟ, ಏ.30ರಿಂದ ಮೇ.13ರವರೆಗೆ ಎಕ್ಸಾಂ.!

By kannadanewsnow5710/04/2026 5:29 AM KARNATAKA 2 Mins Read

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ರ ದ್ವಿತೀಯ ಪಿಯುಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.…

ರಾಜ್ಯದಲ್ಲಿ ಈ ಬಾರಿ `ದ್ವಿತೀಯ ಪಿಯುಸಿ-ಪರೀಕ್ಷೆ-3′ ಇರುವುದಿಲ್ಲ : ಸಚಿವ ಮಧು ಬಂಗಾರಪ್ಪ

10/04/2026 5:20 AM

BIG NEWS : ಶಾಲೆಗಳಲ್ಲಿ ಪಠ್ಯಪುಸ್ತಕಗಳಿಲ್ಲದೆಯೇ `ತೃತೀಯ ಭಾಷೆ’ ಕಲಿಕೆ ಆರಂಭಕ್ಕೆ `CBSE’ ಆದೇಶ!

10/04/2026 5:19 AM

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಗ್ ಅಪ್‌ ಡೇಟ್: 2027ರಿಂದ ಇರುವುದಿಲ್ಲ ಮುದ್ರಿತ ಅಂಕಪಟ್ಟಿ!

10/04/2026 5:16 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.