ಬೆಂಗಳೂರು : ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅಥವಾ ಒಳಪಡದೇ ಇರಲು (Opt-in, Opt-out) ಅಭಿಮತವನ್ನು ನೀಡಲು ಅವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸುವ ನಿಟ್ಟಿನಲ್ಲಿ, ಮೇಲೆ ಓದಲಾದ (1)8 ದಿನಾಂಕ 23.09.20250 ಸರ್ಕಾರದ ಆದೇಶದಲ್ಲಿ ದಿನಾಂಕ:01.10.2025ರಿಂದ ಜಾರಿಗೆ ತರಲಾದ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು (opt-in) ಅಥವಾ ಒಳಪಡದೇ (Opt-Out) ಇರುವ ಬಗ್ಗೆ ಲಿಖಿತ ಅಭಿಮತವನ್ನು ಸಂಬಂಧಪಟ್ಟ ಡಿ.ಡಿ.ಓ.ಗಳಿಗೆ ಸಲ್ಲಿಸಲು ದಿನಾಂಕ 18.10.2025 ರವರೆಗೆ ಕಾಲಾವಕಾಶವನ್ನು ನೀಡಿ, ಸದರಿ ದಿನಾಂಕದೊಳಗೆ ಈ ಯೋಜನೆಗೆ ಒಳಪಡದೇ ಇರಲು ಲಿಖಿತವಾಗಿ ಇಚ್ಛೆ ವ್ಯಕ್ತಪಡಿಸದ ನೌಕರರು ಯೋಜನೆಗೆ ಒಳಪಡುವರೆಂದು ಪರಿಗಣಿಸಲಾಗುವುದೆಂದು ತಿಳಿಸಲಾಗಿತ್ತು, ಆದರೆ, ರಾಜ್ಯ ಸರ್ಕಾರವು ಕೈಗೆತ್ತಿಕೊಂಡಿದ್ದ ರಾಜ್ಯ ವ್ಯಾಪಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಬಹುತೇಕ ಸರ್ಕಾರಿ ನೌಕರರು ತೊಡಗಿದ್ದರಿಂದ, ಹಲವಾರು ನೌಕರರಿಗೆ ಈ ಯೋಜನೆಗೆ ಒಳಪಡಲು ಅಥವಾ ಒಳಪಡದೇ ಇರುವ ಬಗ್ಗೆ ಅಭಿಮತ ವ್ಯಕ್ತಪಡಿಸಲು ಸಾಧ್ಯವಾಗಿಲ್ಲವಾದ್ದರಿಂದ, ಅಭಿಮತವನ್ನು ಸಲ್ಲಿಸಲು ಮೇಲೆ ಓದಲಾದ (2) ರ ದಿನಾಂಕ 03.11.2025 ರ ಸರ್ಕಾರಿ ಆದೇಶದಲ್ಲಿ, ದಿನಾಂಕ:25.11.2025ರವರೆವಿಗೂ ಕಾಲಾವಕಾಶವನ್ನು ವಿಸ್ತರಿಸಲಾಗಿರುತ್ತದೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಮತ್ತು ಒಳಪಡದೇ ಇರುವ ಬಗ್ಗೆ ಸರ್ಕಾರಿ ನೌಕರರು ಅಭಿಮತವನ್ನು ನೀಡಲು ಕೊನೆಯಬಾರಿಯಾಗಿ ಒಂದು ತಿಂಗಳ ಅವಕಾಶವನ್ನು ನೀಡುವಂತೆ, ಸರ್ಕಾರಿ ನೌಕರರ ಹಲವಾರು ಸೇವಾ ಸಂಘಗಳು ಸಲ್ಲಿಸಿರುವ ಕೋರಿಕೆಗಳನ್ನು ನಿಯಮಾನುಸಾರ ಪರಿಶೀಲಿಸಿ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಅವರ -2-
ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಉತ್ತಮವಾದ ವೈದ್ಯಕೀಯ ಚಿಕಿತ್ಸೆಯನ್ನು ನೀಡುವ ಸದುದ್ದೇಶದಿಂದ ಜಾರಿಗೆ ತಂದಿರುವ health scheme ಆಗಿರುವುದರಿಂದ, ಸದರಿ ಯೋಜನೆಗೆ ಒಳಪಡಲು (opt-in) ಹಾಗೂ ಸದರಿ ಯೋಜನೆಯಿಂದ ಹೊರಗುಳಿಯುವ (opt-out) ಬಗ್ಗೆ ಲಿಖಿತವಾದ ಅಭಿಮತವನ್ನು ಸಲ್ಲಿಸಲು ಕೊನೆಯ ಬಾರಿಯ ಅವಕಾಶವಾಗಿ ಒಂದು ತಿಂಗಳ ಕಾಲಾವಕಾಶವನ್ನು ನೀಡಲು ಸರ್ಕಾರವು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿಸಿದೆ :-
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು (opt-in) ಅಥವಾ ಒಳಪಡದೇ (Opt-Out) ಇರುವ ಬಗ್ಗೆ ಲಿಖಿತ ಅಭಿಮತವನ್ನು ಸಂಬಂಧಪಟ್ಟ ಡಿ.ಡಿ.ಓ.ಗಳಿಗೆ ಸಲ್ಲಿಸಲು ಕೊನೆಯ ಬಾರಿಯ ಅವಕಾಶವಾಗಿ, ಕೆಳಕಂಡ ಷರತ್ತಿಗೊಳಪಟ್ಟು, 2026ನೇ ಸಾಲಿನ ಫೆಬ್ರವರಿ ಮಾಹೆಯ ಅಂತ್ಯದವರೆವಿಗೂ ಕಾಲಾವಕಾಶವನ್ನು ವಿಸ್ತರಿಸಿ, ಆದೇಶಿಸಿದೆ.
ಷರತ್ತುಗಳು :-
(i) ಈ ಸರ್ಕಾರಿ ಆದೇಶದನ್ವಯ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡುವ (opt-in) ಹಾಗೂ ಒಳಪಡದೇ (opt-out) ಇರುವ ಬಗ್ಗೆ ಲಿಖಿತ ಅಭಿಮತ ನೀಡುವ ಸರ್ಕಾರಿ ನೌಕರರುಗಳ ಮಾಸಿಕ ವಂತಿಕೆಯನ್ನು 2026ನೇ ಸಾಲಿನ ಫೆಬ್ರವರಿ ಮಾಹೆಯ ವೇತನದಿಂದ ಕಟಾವಣೆಗೊಳಿಸಲು ಹಾಗೂ ಕಟಾವಣೆಗೊಳಿಸದಿರಲು ಕ್ರಮಕೈಗೊಳ್ಳುವಂತೆ ಎಲ್ಲಾ ಇಲಾಖಾ ಮುಖ್ಯಸ್ಥರು / ಡಿ.ಡಿ.ಓ. ಗಳಿಗೆ ಸೂಚಿಸಲಾಗಿದೆ.
(ii) ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡದೇ (opt-out) ಇರುವ ಬಗ್ಗೆ ಲಿಖಿತ ಅಭಿಮತವನ್ನು 2026ನೇ ಸಾಲಿನ ಫೆಬ್ರವರಿ ಮಾಹೆಯ ಅಂತ್ಯದವರೆವಿಗೂ ಸಲ್ಲಿಸದೇ ಇರುವ ನೌಕರರು ಈ ಯೋಜನೆಗೆ ಒಳಪಡುವರೆಂದು ಪರಿಗಣಿಸಲಾಗುವುದು (by default opt-in).
ರಾಜ್ಯದ ಎಲ್ಲಾ ಸರ್ಕಾರಿ ನೌಕರರ ದತ್ತಾಂಶ ಸಂಗ್ರಹಣೆಯ ಉದ್ದೇಶದಿಂದ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡುವ ಮತ್ತು ಒಳಪಡದಿರುವ ಬಗ್ಗೆ ಇಚ್ಛೆ ವ್ಯಕ್ತಪಡಿಸುವ ಅಧಿಕಾರಿ/ನೌಕರರ ಮತ್ತು ಅವರ ಕುಟುಂಬದ ವಿವರಗಳನ್ನು HRMS ತಂತ್ರಾಂಶದಲ್ಲಿ ದಾಖಲಿಸಲು ಅವಕಾಶ ಕಲ್ಪಿಸಿದ್ದು, ಅದರಂತೆ, ಎಲ್ಲಾ ಅಧಿಕಾರಿ/ನೌಕರರಿಂದ ಅಗತ್ಯ ಮಾಹಿತಿ/ದಾಖಲಾತಿಗಳನ್ನು ಪಡೆದು HRMS ತಂತ್ರಾಂಶದಲ್ಲಿ ದಾಖಲಿಸಲು ಸಂಬಂಧಪಟ್ಟ ಡಿ.ಡಿ.ಓ. ಗಳು ಕ್ರಮ ಕೈಗೊಳ್ಳತಕ್ಕದ್ದು.










