ಮಂಗಳೂರು : ಕಳೆದ 12 ವರ್ಷಗಳ ಹಿಂದೆ ಧರ್ಮಸ್ಥಳದ ನೇತ್ರಾವತಿ ನದಿ ಬಳಿ ಕಾಡಂಚಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಭೀಕರವಾಗಿ ಕೊಲೆಯಾಗಿದ್ದ ಸೌಜನ್ಯಳ ತಂದೆ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.
ಮಂಗಳೂರಿನ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿಯಾಗಿದ್ದ ಚಂದಪ್ಪ ಗೌಡ (58) ಎನ್ನುವರು ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು. ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಇವರು ಕಳೆದ ಎರಡು ದಿನಗಳ ಹಿಂದೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ ಆರೋಗ್ಯದಲ್ಲಿ ಏರುಪೇರಾಗಿ ಉಂಟಾಗಿ ಚಿಕಿತ್ಸೆ ಪಡಿಸಿದೆ ಇಂದು ಅವರು ಸಾವನ್ನಪ್ಪಿದ್ದಾರೆ ಎಂದು ಬಳ್ಳ ಮೂಲಗಳಿಂದ ತಿಳಿದು ಬಂದಿದೆ. ಪತ್ನಿ ನಾಲ್ವರು ಮಕ್ಕಳನ್ನು ಅಗಲಿದ ಚಂದಪ್ಪಗೌಡರ ಅಂತ್ಯಕ್ರಿಯೆಯೂ ಇಂದು ರಾತ್ರಿ 7.30ಕ್ಕೆ ಪಾಂಗಾಳದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿದುಬಂದಿದೆ.