ಪಣಜಿ: ಸೋನಾಲಿ ಫೋಗಟ್ ಕೊಲೆ ರಹಸ್ಯಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಬಿಜೆಪಿ ನಾಯಕಿ ಮಾದಕವಸ್ತು ಸೇವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಘಟನೆ ಸಂಬಂಧ ಆಕೆಯ ಇಬ್ಬರು ಸಹಾಯಕರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ.
ಗೋವಾ ಇನ್ಸ್ಪೆಕ್ಟರ್ ಜನರಲ್ ಓಂವೀರ್ ಸಿಂಗ್ ಬಿಷ್ಣೋಯ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಶಂಕಿತರೊಬ್ಬರು ಆಕೆಗೆ ಬಲವಂತವಾಗಿ ಕೆಲವು ವಸ್ತುಗಳನ್ನು ನೀಡಿರುವುದು ಕಂಡುಬಂದಿದೆ. ಅವಳಿಗೆ ಕೆಲವು ರಾಸಾಯನಿಕವನ್ನು ನೀಡಲಾಯಿತು ಮತ್ತು ಅದರ ನಂತರ, ಅವಳು ನಿಯಂತ್ರಣದಲ್ಲಿಲ್ಲ ಅಂತ ಹೇಳಿದ್ದಾರೆ.
ಆರೋಪಿಗಳಾದ ಸುಖ್ವಿಂದರ್ ಸಿಂಗ್ ಮತ್ತು ಸುಧೀರ್ ಸಾಂಗ್ವಾನ್ ಅವರು ಉದ್ದೇಶಪೂರ್ವಕವಾಗಿ ರಾಸಾಯನಿಕವನ್ನು ದ್ರವದಲ್ಲಿ ಬೆರೆಸಿ ಅದನ್ನು ಕುಡಿಯುವಂತೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.