ಬೆಳಗಾವಿ : ನಿನ್ನೆ ಸದನದಲ್ಲಿ ಗ್ಯಾರಂಟಿ ಯೋಜನೆ ಕುರಿತು ವಿಪಕ್ಷಗಳು ರಾಜ್ಯ ಸರ್ಕಾರದವರು ಇದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಹೌದು ಎರಡು ತಿಂಗಳ ಕಂತು ಹಣ ಬಾಕಿ ಇದೆ ಎಂದು ಒಪ್ಪಿಕೊಂಡು ಸರಿಯಾದ ವ್ಯಕ್ತಿ ಪಡಿಸಿದ್ದರು. ಇದೀಗ ಚುನಾವಣೆ ಪೂರ್ವ ಕರ್ನಾಟಕದ ಮಹಿಳೆಯರಿಗೆ ಮಾಡಿದಂತ ವಾಗ್ದಾನ ಏನು ಇತ್ತೋ ಆ ವಾಗ್ದಾನ ಸಂಪೂರ್ಣವಾಗಿ ಬದ್ಧತೆಯಿಂದ ನಾವು ನಮ್ಮ ಸರ್ಕಾರ ನಮ್ಮ ಇಲಾಖೆ ನಿಭಾಯಿಸುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಸರಿಯಾದ ರೀತಿಯಲ್ಲಿ ಗೃಹಲಕ್ಷ್ಮಿ ಹಣ ಹಾಕುತ್ತಿದ್ದೇವೆ 23 ತಿಂಗಳ ಹಣವನ್ನು ಮಹಿಳೆಯರ ಖಾತೆಗೆ ಹಾಕಿದ್ದೇವೆ. 46 ಸಾವಿರ ರೂಪಾಯಿ ಒಬ್ಬರಿಗೆ ಬಂದಿದೆ. ಆಗಸ್ಟ್ ವರೆಗೂ ಕ್ಲಿಯರ್ ಇದೆ. 23 ಕಂತುಗಳಲ್ಲಿ ಈಗಾಗಲೇ ಹಣ ಹಾಕಿದ್ದೇವೆ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ ಆಗಿದ್ದೇನೆ. ಇವರು ಕೇಳಿದ್ದು ಫೆಬ್ರವರಿ ಮಾರ್ಚ್ ತಿಂಗಳದ್ದು, ಫೈನಾನ್ಸಿಯಲ್ ಡಿಪಾರ್ಟ್ಮೆಂಟ್ಗೆ ಪ್ರತಿ ತಿಂಗಳು ನಮ್ಮ ಇಲಾಖೆಯಿಂದ ನಾನು ಫೈಲ್ ಮಾಡುತ್ತೇನೆ.
1ನೇ ತಾರೀಕು ಅಥವಾ 3ನೇ ತಾರೀಕು ಆದರು ನಮಗೆ ದುಡ್ಡು ರಿಲೀಸ್ ಮಾಡಿ ಅಂತ ನಾವು ಫೈನಾನ್ಸಿ ಡಿಪಾರ್ಟ್ಮೆಂಟ್ ಗೆ ಫೈಲ್ ಮೂವ್ ಮಾಡಿದಾಗ ಯಾವತ್ತು ಯಾವ ತಾರೀಕಿಗೆ ನಮ್ಮ ಫೈಲ್ ಕ್ಲಿಯರ್ ಮಾಡುತ್ತೋ ಒಂದು ಕ್ಷಣ ನಾನು ಲೇಟ್ ಮಾಡ್ದೆ ಗೃಹಲಕ್ಷ್ಮಿಯರ ಅಕೌಂಟಿಗೆ ಹೋಗುವ ರೀತಿ ನೋಡಿಕೊಳ್ಳುತ್ತೇನೆ.ಫೆಬ್ರುವರಿ ಮಾರ್ಚ್ ಹೆಚ್ಚು ಕಡಿಮೆ ಆಗಿದ್ದರೆ ಸಿಎಂ ಸಿದ್ದರಾಮಯ್ಯ ಉತ್ತರ ಕೊಡುತ್ತಾರೆ ಎಂದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದರು.








