ವಿಜಯನಗರ : ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಹಮ್ಮಿಕೊಂಡಿತ್ತು. ಈ ಒಂದು ಸಾಧನ ಸಮಾವೇಶದಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ,ಭಾರತ ಪಾಕಿಸ್ತಾನದ ನಡುವೆ ಸಣ್ಣಪುಟ್ಟ ಯುದ್ಧಗಳು ನಡೆದಿವೆ ಎಂದು ಹೇಳಿಕೆ ನೀಡಿದರು.
ಭಾರತ ಪಾಕಿಸ್ತಾನದ ನಡುವೆ ಸಣ್ಣಪುಟ್ಟ ಯುದ್ಧಗಳು ನಡೆದಿವೆ. ನಮ್ಮ ಪಾಕ್ ವಿರುದ್ಧ ನಾವೇನು ಘರ್ಷಣೆ ಮಾಡ್ತಿದ್ದೇವೆ. ಪಾಕಿಸ್ತಾನ ಕೆಲಸ ಭಾರತದ ಮೇಲೆ ಗೂಬೆ ಕೂರಿಸುವುದು. ಚೀನಾ ಬೆಂಬಲ ಪಡೆದು ಭಾರತದ ಮೇಲೆ ಪಾಕಿಸ್ತಾನ ದಾಳಿ ನಡೆಸುತ್ತಿದೆ. ಇದನ್ನು ಎಂದು ಕೂಡ ನಮ್ಮ ದೇಶ ಸಹಿಸುವುದಿಲ್ಲ ಎಂದು ಹೇಳಿದರು.
ಈ ಘಟನೆ ಬಳಿಕ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಬೆಂಗಳೂರಿನಲ್ಲಿ ಹೇಳಿದ್ದೆ. ನಮ್ಮ ವಿರುದ್ಧ ಬಂದರೆ ಒಕ್ಕಟ್ಟಾಗಿ ಹೋರಾಟ ಮಾಡೋಣ. ನಮಗೆ ದೇಶ ಮುಖ್ಯ ಜಾತಿ ಧರ್ಮ ಆಮೇಲೆ. ಆದರೆ ಈಗ ಮೋದಿ ಮೊದಲು ದೇಶ ಆಮೇಲೆ ಆಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಹೊರ ಹಾಕಿದರು.