Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಈರುಳ್ಳಿ ತಿಂತೀನಿ, ಮೆದುಳನ್ನಲ್ಲ!’: ಪ್ರಧಾನಿ ಮೋದಿ ‘ಝಲ್ಮುರಿ’ ವಿಡಿಯೋ ವೈರಲ್; ಒಂದೇ ದಿನದಲ್ಲಿ 10 ಕೋಟಿಗೂ ಅಧಿಕ ವೀಕ್ಷಣೆ!

21/04/2026 7:23 AM

BIG NEWS : ಬ್ಯಾಂಕ್ ಮೆಮೊದಲ್ಲಿ ಸೀಲು-ಸಹಿ ಇಲ್ಲದಿದ್ದರೂ `ಚೆಕ್ ಬೌನ್ಸ್’ ಕೇಸ್ ಸಿಂಧು: ಹೈಕೋರ್ಟ್ ಐತಿಹಾಸಿಕ ತೀರ್ಪು

21/04/2026 7:22 AM

ಆಪಲ್‌ನಲ್ಲಿ ಹೊಸ ಯುಗಾರಂಭ: ಸಿಇಒ ಸ್ಥಾನದಿಂದ ಕೆಳಗಿಳಿಯಲಿರುವ ಟಿಮ್ ಕುಕ್; ಜಾನ್ ಟೆರ್ನಸ್‌ಗೆ ಪಟ್ಟ!

21/04/2026 7:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಬ್ಯಾಂಕ್ ಮೆಮೊದಲ್ಲಿ ಸೀಲು-ಸಹಿ ಇಲ್ಲದಿದ್ದರೂ `ಚೆಕ್ ಬೌನ್ಸ್’ ಕೇಸ್ ಸಿಂಧು: ಹೈಕೋರ್ಟ್ ಐತಿಹಾಸಿಕ ತೀರ್ಪು
KARNATAKA

BIG NEWS : ಬ್ಯಾಂಕ್ ಮೆಮೊದಲ್ಲಿ ಸೀಲು-ಸಹಿ ಇಲ್ಲದಿದ್ದರೂ `ಚೆಕ್ ಬೌನ್ಸ್’ ಕೇಸ್ ಸಿಂಧು: ಹೈಕೋರ್ಟ್ ಐತಿಹಾಸಿಕ ತೀರ್ಪು

By kannadanewsnow5721/04/2026 7:22 AM

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಗಳಲ್ಲಿ ತಾಂತ್ರಿಕ ಕಾರಣಗಳನ್ನು ಒಡ್ಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸುವವರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಬ್ಯಾಂಕ್ ನೀಡುವ ‘ರಿಟರ್ನ್ ಮೆಮೊ’ಗಳಲ್ಲಿ ಅಧಿಕಾರಿಗಳ ಸಹಿ ಅಥವಾ ಸೀಲು ಇಲ್ಲ ಎಂಬ ಕಾರಣಕ್ಕೆ ಚೆಕ್ ಬೌನ್ಸ್ ದೂರನ್ನು ವಜಾಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:

ಬೆಂಗಳೂರಿನ ಆರ್. ಜಗದೀಶ್ ಎಂಬುವವರು ಆದಿತ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ 3 ಲಕ್ಷ ರೂ. ಸಾಲ ಪಡೆದು, ಭದ್ರತೆಗಾಗಿ ಚೆಕ್ ನೀಡಿದ್ದರು. ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೆಳಹಂತದ ನ್ಯಾಯಾಲಯವು ಜಗದೀಶ್ ಅವರಿಗೆ 4 ಲಕ್ಷ ರೂ. ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್ ನೀಡಿದ ಪ್ರಮುಖ ಅಂಶಗಳು:

ಡಿಜಿಟಲ್ ಯುಗದಲ್ಲಿ ತಾಂತ್ರಿಕತೆ ಮುಖ್ಯ: ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಪೀಠವು, “ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಚೆಕ್ ಕ್ಲಿಯರಿಂಗ್ ಪ್ರಕ್ರಿಯೆ ಡಿಜಿಟಲ್ ಆಗಿ ನಡೆಯುತ್ತದೆ. ಕಂಪ್ಯೂಟರ್ ಮೂಲಕ ಸಿದ್ಧವಾಗುವ ಮೆಮೊಗಳಿಗೆ ಹಸ್ತಚಾಲಿತ ಸಹಿ ಅಥವಾ ಸೀಲು ಕಡ್ಡಾಯವಲ್ಲ” ಎಂದು ತಿಳಿಸಿದೆ.

ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ: ಚೆಕ್ ಮೇಲಿರುವ ಸಹಿ ತನ್ನದೇ ಎಂದು ಒಪ್ಪಿಕೊಂಡ ಮೇಲೆ, ಸಾಲ ತೀರಿಸದ ಹೊರತು ಆರೋಪಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.

ಪುರಾವೆಯ ಕೊರತೆ: ಸಾಲ ತೀರಿಸಿದ್ದೇನೆ ಎಂದು ವಾದಿಸಿದ್ದ ಆರೋಪಿ, ಅದಕ್ಕೆ ಪೂರಕವಾದ ಯಾವುದೇ ದಾಖಲೆ ಒದಗಿಸಿರಲಿಲ್ಲ. ಅಲ್ಲದೆ, ಚೆಕ್ ದುರ್ಬಳಕೆಯಾಗಿದ್ದರೆ ಅದನ್ನು ವಾಪಸ್ ಪಡೆಯಲು ಅಥವಾ ಪೊಲೀಸರಿಗೆ ದೂರು ನೀಡಲು ಏಕೆ ಮುಂದಾಗಲಿಲ್ಲ ಎಂದು ಕೋರ್ಟ್ ಪ್ರಶ್ನಿಸಿದೆ.

ನ್ಯಾಯಾಲಯದ ಅಂತಿಮ ಆದೇಶ:

ಕೆಳಹಂತದ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಎತ್ತಿಹಿಡಿದ ಹೈಕೋರ್ಟ್, ಜಗದೀಶ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಒಟ್ಟು 4 ಲಕ್ಷ ರೂ. ದಂಡದಲ್ಲಿ 3.95 ಲಕ್ಷ ರೂ. ಅನ್ನು ದೂರುದಾರ ಸೊಸೈಟಿಗೆ ಮತ್ತು 5,000 ರೂ. ಅನ್ನು ಸರ್ಕಾರಕ್ಕೆ ಪಾವತಿಸುವಂತೆ ಆದೇಶಿಸಿದೆ.  ಈ ತೀರ್ಪಿನಿಂದಾಗಿ ಇನ್ಮುಂದೆ ಡಿಜಿಟಲ್ ಬ್ಯಾಂಕ್ ದಾಖಲೆಗಳಿಗೆ ಕಾನೂನುಬದ್ಧವಾಗಿ ಹೆಚ್ಚಿನ ಬಲ ಸಿಕ್ಕಂತಾಗಿದ್ದು, ತಾಂತ್ರಿಕ ದೋಷಗಳ ನೆಪದಲ್ಲಿ ಕೇಸ್ ದಾರಿ ತಪ್ಪಿಸುವುದು ಕಷ್ಟವಾಗಲಿದೆ.

BIG NEWS: Sindhu in `check bounce' case despite no seal or signature in bank memo: High Court's historic verdict
Share. Facebook Twitter LinkedIn WhatsApp Email

Related Posts

ಡಿಜಿಟಲ್ ಗೋಲ್ಡ್ vs ಭೌತಿಕ ಚಿನ್ನ: ಹೂಡಿಕೆಗೆ ಯಾವುದು ಉತ್ತಮ? ತಿಳಿಯಿರಿ

21/04/2026 7:16 AM2 Mins Read

ALERT : ಹೊಕ್ಕುಳಿನಲ್ಲಿ ಕಲ್ಲು! ಏನಿದು ‘ನೇವಲ್ ಸ್ಟೋನ್’? ಇಲ್ಲಿದೆ ಸಂಪೂರ್ಣ ಮಾಹಿತಿ

21/04/2026 7:14 AM2 Mins Read

ಮಧುಮೇಹ ನಿಯಂತ್ರಣಕ್ಕೆ ಇಲ್ಲಿವೆ 9 ಸರಳ ಮತ್ತು ಪರಿಣಾಮಕಾರಿ ಮಾರ್ಗಗಳು

21/04/2026 7:00 AM2 Mins Read
Recent News

​’ಈರುಳ್ಳಿ ತಿಂತೀನಿ, ಮೆದುಳನ್ನಲ್ಲ!’: ಪ್ರಧಾನಿ ಮೋದಿ ‘ಝಲ್ಮುರಿ’ ವಿಡಿಯೋ ವೈರಲ್; ಒಂದೇ ದಿನದಲ್ಲಿ 10 ಕೋಟಿಗೂ ಅಧಿಕ ವೀಕ್ಷಣೆ!

21/04/2026 7:23 AM

BIG NEWS : ಬ್ಯಾಂಕ್ ಮೆಮೊದಲ್ಲಿ ಸೀಲು-ಸಹಿ ಇಲ್ಲದಿದ್ದರೂ `ಚೆಕ್ ಬೌನ್ಸ್’ ಕೇಸ್ ಸಿಂಧು: ಹೈಕೋರ್ಟ್ ಐತಿಹಾಸಿಕ ತೀರ್ಪು

21/04/2026 7:22 AM

ಆಪಲ್‌ನಲ್ಲಿ ಹೊಸ ಯುಗಾರಂಭ: ಸಿಇಒ ಸ್ಥಾನದಿಂದ ಕೆಳಗಿಳಿಯಲಿರುವ ಟಿಮ್ ಕುಕ್; ಜಾನ್ ಟೆರ್ನಸ್‌ಗೆ ಪಟ್ಟ!

21/04/2026 7:16 AM

ಡಿಜಿಟಲ್ ಗೋಲ್ಡ್ vs ಭೌತಿಕ ಚಿನ್ನ: ಹೂಡಿಕೆಗೆ ಯಾವುದು ಉತ್ತಮ? ತಿಳಿಯಿರಿ

21/04/2026 7:16 AM
State News
KARNATAKA

BIG NEWS : ಬ್ಯಾಂಕ್ ಮೆಮೊದಲ್ಲಿ ಸೀಲು-ಸಹಿ ಇಲ್ಲದಿದ್ದರೂ `ಚೆಕ್ ಬೌನ್ಸ್’ ಕೇಸ್ ಸಿಂಧು: ಹೈಕೋರ್ಟ್ ಐತಿಹಾಸಿಕ ತೀರ್ಪು

By kannadanewsnow5721/04/2026 7:22 AM KARNATAKA 1 Min Read

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಗಳಲ್ಲಿ ತಾಂತ್ರಿಕ ಕಾರಣಗಳನ್ನು ಒಡ್ಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸುವವರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಬ್ಯಾಂಕ್…

ಡಿಜಿಟಲ್ ಗೋಲ್ಡ್ vs ಭೌತಿಕ ಚಿನ್ನ: ಹೂಡಿಕೆಗೆ ಯಾವುದು ಉತ್ತಮ? ತಿಳಿಯಿರಿ

21/04/2026 7:16 AM

ALERT : ಹೊಕ್ಕುಳಿನಲ್ಲಿ ಕಲ್ಲು! ಏನಿದು ‘ನೇವಲ್ ಸ್ಟೋನ್’? ಇಲ್ಲಿದೆ ಸಂಪೂರ್ಣ ಮಾಹಿತಿ

21/04/2026 7:14 AM

ಮಧುಮೇಹ ನಿಯಂತ್ರಣಕ್ಕೆ ಇಲ್ಲಿವೆ 9 ಸರಳ ಮತ್ತು ಪರಿಣಾಮಕಾರಿ ಮಾರ್ಗಗಳು

21/04/2026 7:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.