ಕೋಲಾರ : ನೀನೆ ತಾನೆ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ತೀರ್ಮಾನಿಸಿದರೆ ಐದು ವರ್ಷಗಳ ಕಾಲ ನಾನೇ ಸಿಎಂ ಎಂದು ಹೇಳಿಕೆ ನೀಡಿದ್ದರು ಇದೀಗ ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಸಹ ಐದು ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಅವರೆ ಮುಂದುವರೆಯುತ್ತಾರೆ. ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂದು ಮುನಿಯಪ್ಪ ತಿಳಿಸಿದ್ದಾರೆ.
ಕೋಲಾರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಪಕ್ಷ ಬಲಪಡಿಸಿ ಅಧಿಕಾರಕ್ಕೆ ತರುವಲ್ಲಿ ಅವರ ಶ್ರಮ ಸಾಕಷ್ಟಿದೆ. ಅಧ್ಯಕ್ಷರ ಆದಿಯಾಗಿ ಸಾಕಷ್ಟು ಜನರು ಸಿಎಂ ಆಗಲು ಅರ್ಹರಿದ್ದಾರೆ. ಆದರೆ ಬೆಳಗಾದರೆ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಸಿಎಂ ಬದಲಾವಣೆಯ ಬಗ್ಗೆ ನಾವು ತೀರ್ಮಾನ ಮಾಡುವುದಿಲ್ಲ ಸಿಎಂ ಬದಲಾವಣೆ ವಿಚಾರ ಮಾತನಾಡುವುದು ಪ್ರಸ್ತುತ ಸಿಎಂ ಆಗಿ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ. 136 ಜನ ಶಾಸಕರಾಗಿ ಗೆದ್ದಿದ್ದೇವೆ ಅದಕ್ಕೆ ನಾಯಕತ್ವ ಬೇಕು ಎಂದು ತಿಳಿಸಿದರು.
ಮುನಿಯಪ್ಪ ಸಿಎಂ ಆದರೆ ಸಂತೋಷ ಎಂದು ನಿನ್ನೆ ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದು ಅದಕ್ಕೆ ಪ್ರತಿಕ್ರಿಯಿಸಿದ ಅವರು ಪರಮೇಶ್ವರ್ ಅವರು ಅತ್ಯಂತ ಹಿರಿಯ ನಾಯಕರು 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಅತ್ಯುತ್ತಮ ಆಡಳಿತ ನೀಡಿದವರು. ನಾವೆಲ್ಲರೂ ಒಟ್ಟಾಗಿ ಸೇರಿಕೊಂಡು ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಮುಖ್ಯಮಂತ್ರಿ ಸ್ಥಾನದ ತೀರ್ಮಾನ ಮಾಡುವುದು ಹೈಕಮಾಂಡ್ ನಾನು ಸಿಎಂಗೆ ರೆಡಿ ಇದ್ದೀನಿ ಎಂದು ಬರೆಯಲು ಅವಕಾಶ ಇಲ್ಲ ಸಿಎಂ ಆಗುವ ಆಸೆ ಏನು ಇಲ್ಲ ಎಂದು ಕೆಎಚ್ ಮುನಿಯಪ್ಪ ತಿಳಿಸಿದರು.








