ಮೈಸೂರು : ಮೈಸೂರು ನಗರದಲ್ಲಿ ನಿನ್ನೆ ರಾತ್ರಿ ನಡೆದ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲುತೂರಾಟದ ಘಟನೆ ಡಿಜೆ ಹಳ್ಳಿ, ಕೇಜೆ ಹಳ್ಳಿ ಮಾದರಿಯಲ್ಲಿ ಪೊಲೀಸರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಆರ್.ಅಶೋಕ್ ಈ ಘಟನೆಯನ್ನು ಖಂಡಿಸಿದ್ದು, ನವೆಂಬರ್ ವರೆಗೆ ಮಾತ್ರ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಅಲ್ಲಿವರೆಗೂ ಆದರೂ ಒಳ್ಳೆಯ ಆಡಳಿತ ಕೊಡಿ ಎಂದು ಆರ್ ಅಶೋಕ ಸಿದ್ದರಾಮಯ್ಯ ಅವರ ಕಾಲು ಎಳೆದಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನವೆಂಬರ್ ವರೆಗೆ ಮಾತ್ರ ಸಿಎಂ ಆಗಿರುತ್ತಾರೆ. ಅಲ್ಲಿವರೆಗೂ ಸಿಎಂ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡಲಿ. ಒಳಿತು ಮಾಡು ಮನುಷ್ಯ ನೀ ಇರೋದು ಮೂರು ದಿವಸ ಎಂದು ಹಾಡಿನ ಮೂಲಕ ಆರ್ ಅಶೋಕ್ ಸಿಎಂ ಸಿದ್ದರಾಮಯ್ಯ ಅವರ ಕಾಲು ಎಳೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಆಗೋದು ಬಿಟ್ಟು ಆಡಳಿತದತ್ತ ಗಮನಹರಿಸಬೇಕು ಎಂದು ಇದೆ ವೇಳೆ ತಿಳಿಸಿದರು.