ಹಾಸನ : ವಿಪಕ್ಷಗಳಿಗೆ ಕೌಂಟರ್ ನೀಡಲು, ಇಂದು ಹಾಸನದಲ್ಲಿ ಕಾಂಗ್ರೆಸ್ ಪಕ್ಷದಿಂದ ಅರಸಿಕೆರೆ ರಸ್ತೆಯಲ್ಲಿರುವ ಎಸ್ಎಂ ಕೃಷ್ಣ ನಗರದಲ್ಲಿ ಜನಕಲ್ಯಾಣ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಒಂದು ಸಮಾವೇಶಕ್ಕೆ ಈಗಾಗಲೇ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, ಸುಮಾರು ಮೂರು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ.
ಈಗಾಗಲೇ ಉತ್ತರ ಕರ್ನಾಟಕ ಜಿಲ್ಲೆಗಳಿಂದ ಸಿದ್ದರಾಮಯ್ಯ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಬೆಳಗಾವಿ, ಯಾದಗಿರಿ, ರಾಯಚೂರು, ಕಲ್ಬುರ್ಗಿ, ಸೇರಿದಂತೆ ಅನೇಕ ಕಡೆಗಳಿಂದ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಇದೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅಪ್ಪಟ ಅಭಿಮಾನಿಗಳು ಮುಂದಿನ 5 ವರ್ಷಗಳ ಕಾಲ ಸಿಎಂ ಸಿದ್ದರಾಮಯ್ಯನವರೇ ಸಿಎಂ ಎಂದು ಘೋಷಣೆ ಕೂಗಿದರು.
ಜೈ ಸಿದ್ದರಾಮಯ್ಯ, 5 ವರ್ಷಗಳವರೆಗೆ ಸಿಎಂ ಆಗಿ ಸಿದ್ದರಾಮಯ್ಯರೆ ಮುಂದುವರೆಯಲಿದ್ದಾರೆ ಎಂದು ಘೋಷಣೆ ಕೂಗಿದರು.ಈಗಾಗ್ಲೇ ಸಿದ್ದರಾಮೋತ್ಸವದ ವೇದಿಕೆ ಬಳಿ ಜನರು ಜಮಾಯಿಸುತ್ತಿದ್ದಾರೆ. ಸುಮಾರು 3 ಲಕ್ಷಕ್ಕೂ ಹೆಚ್ಚು ಜನರು ಅಧಿಕ ಭಾಗಿಯಾಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಸಮಾವೇಶ ವೇದಿಕೆಯಲ್ಲಿ ಕಲಾವಿದ ರಿಂದ ಚಂಡೆ ಪ್ರದರ್ಶನವಾಗುತ್ತಿದ್ದು ಪ್ರಧಾನ ವೇದಿಕೆಯಲ್ಲಿ ಕಲಾವಿದರು ಚಂಡೆ ಬಾರಿಸುತ್ತಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಈ ಸಮಾವೇಶ ಆರಂಭವಗಲಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಸಚಿವರುಗಳು, ಶಾಸಕರು ಹಾಗೂ ಕಾರ್ಯಕರ್ತರು ಸೇರಿದಂತೆ ಒಟ್ಟು ಎರಡುವರೆಯಿಂದ ಮೂರು ಲಕ್ಷಕ್ಕೂ ಅಧಿಕ ಜನರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ. ಹಾಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಒದಗಿಸಲಾಗಿದೆ.