ಬೆಂಗಳೂರು : ಕಳೆದ ವರ್ಷ ರಾಜ್ಯದಲ್ಲಿ ಬಳ್ಳಾರಿ ಬೆಳಗಾವಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ, ಹೆರಿಗೆಗೆ ಎಂದು ದಾಖಲಾಗಿದ್ದ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ, ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸಿಎಂ ಸಿದ್ದರಾಮಯ್ಯ ಅವರು ಮಹಿಳೆಯರಿಗೆ 2 ಸಾವಿರ ಕೊಡುವ ಬದಲು ಬಾಣಂತಿಯರ ಸಾವು ನಿಲ್ಲಿಸಲಿ ಎಂದು ಆಗ್ರಹಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಸರ್ಕಾರ ಬಂದ ಮೇಲೆ 736 ಬಾಣಂತಿಯರ ಸಾವಾಗಿದೆ. ಹೆರಿಗೆಗಾಗಿ ಆಸ್ಪತ್ರೆಗೆ ಹೋದ ಮಹಿಳೆಯರು ಶವವಾಗಿ ಬರುತ್ತಿದ್ದಾರೆ.ಇನ್ನೂ ಕೂಡ ರಾಜ್ಯದಲ್ಲಿ ಬಾಣಂತಿಯರ ಸಾವು ನಿಂತಿಲ್ಲ ಅಧಿವೇಶನದಲ್ಲಿ ನಾವು ರಾಜ್ಯ ಸರ್ಕಾರದ ಕಿವಿ ಹಿಂಡಿದ್ದೆವು. ಮೆಡಿಕಲ್ ಮಾಫಿಯಾ ಗೆ ಸರ್ಕಾರ ಬಗ್ಗಿರುವುದು ಸ್ಪಷ್ಟವಾಗಿದೆ ಎಂದರು.
ಹೊಸ ವರ್ಷದಲ್ಲಿ ಎಲ್ಲರೂ ಶುಭಾಶಯ ಕೋರಿದ್ದೆ ಕೋರಿದ್ದು. ಸಚಿವರು ರಜೆ ಹಾಕಿ ಹೊಸ ವರ್ಷ ಆಚರಿಸಿದ್ದಾರೆ. ಆದರೆ ಬಾಣಂತಿಯರ ಕುಟುಂಬದಲ್ಲಿ ಇನ್ನೂ ಹರುಷ ಮೂಡಿಲ್ಲ. ರಾಯಚೂರು ಜಿಲ್ಲೆಯಲ್ಲಿ 11 ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಬಾಣಂತಿಯರ ಸಾವು ಇದು ಸರ್ಕಾರಿ ಪ್ರಾಯೋಜಿತ ಕೊಲೆಗೆ ಸಮ. ನ್ಯಾಯಾಂಗ ತನಿಖೆ, ಡೆತ್ ಅಡಿಟ್ ಬಗ್ಗೆ ಇನ್ನು ಮಾಹಿತಿ ಬಂದಿಲ್ಲ. ದ್ರಾವಣ ಪೂರೈಸಿದ ಕಂಪನಿ ವಿರುದ್ಧ ದೂರು ನೀಡುವುದಾಗಿ ಹೇಳಿದ್ದರು. ದೆಹಲಿಗೆ ಹೋಗಿ ದೂರು ಕೊಡುವುದಾಗಿ ಸಚಿವರೇ ಹೇಳಿದ್ದರು. ಯಾಕೆ ಇನ್ನು ಹೋಗಿ ದೂರು ಕೊಟ್ಟಿಲ್ಲ?
ಸಿದ್ದರಾಮಯ್ಯ 2,000 ಬಾಣಂತಿಯರ ಸಾವು ನಿಲ್ಲಿಸಲಿ ಬಾಣಂತಿಯರಿಗೆ ಬದುಕುವ ಗ್ಯಾರಂಟಿಯನ್ನು ಸರ್ಕಾರ ಕೊಡಬೇಕು. ಎಲ್ಲದಕ್ಕೂ ಕಾರಣ ಆಗಿರುವ ಸಚಿವರು ರಾಜೀನಾಮೆ ಕೊಡಬೇಕು. ಸಿಎಂ ಈ ಪ್ರಕರಣವನ್ನು ನ್ಯಾಯಾಂಗ ತೆನಿಕೆಗೆ ಕೊಡಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದರು.