ಕನಕಗಿರಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ಸಿಎಂ ಸ್ಥಾನದ ಕುರಿತು ಹಲವು ಚರ್ಚೆಗಳು ಬಂದಿದ್ದು ಇದೀಗ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ ಇನ್ನೂ 10 ವರ್ಷಗಳ ಕಾಲ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರ್ಲಿ ಎಂದು ಸ್ಪೋಟಕ್ಕೆ ಹೇಳಿಕೆ ನೀಡಿದ್ದಾರೆ.
‘BMTC’ಯಲ್ಲಿ 50 ಜನರಿಗೆ ‘ಅನುಕಂಪದ’ ಉದ್ಯೋಗ : ಮೃತ ನೌಕರರ ಕುಟುಂಬಕ್ಕೆ ನೇಮಕಾತಿ ಪತ್ರ ನೀಡಿದ ರಾಮಲಿಂಗಾರೆಡ್ಡಿ
ಈ ಕುರಿತಂತೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನನ್ನು ಮಂತ್ರಿ ಮಾಡದಿದ್ದರೂ ಪರವಾಗಿಲ್ಲ. ಆದರೆ, ಸಿದ್ದರಾಮಯ್ಯ ಅವರು ಇನ್ನೂ 10 ವರ್ಷ ಸಿಎಂ ಆಗಿರಬೇಕೆಂಬ ಬಯಕೆ ನನ್ನದು ಎಂದು ಸಿಎಂ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ರಾಜ್ಯ ಸರ್ಕಾರದಿಂದ ‘ಹಾವು ಕಡಿತ’ಕ್ಕೆ ಚಿಕಿತ್ಸೆ ನೀಡಲು ‘ಮಾರ್ಗಸೂಚಿ’ ಪ್ರಕಟ: ಈ ‘ನಿಯಮ ಪಾಲನೆ’ ಕಡ್ಡಾಯ
ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ಶನಿವಾರ ಕನಕಗಿರಿ ಉತ್ಸವದ ಉದ್ಘಾ ಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮಾಡಿರುವುದು ಸೂಕ್ತವಾಗಿದೆ. ಆರ್ಥಿಕ ವರ್ಷದಲ್ಲಿ ಕಡಿಮೆ ಅವಧಿ ಇದ್ದರೂ, ಗ್ಯಾರಂಟಿ ಯೋಜನೆ ಜಾರಿ ಮಾಡಿದರು. ಹಣಕಾಸನ್ನು ಸಿಎಂ ಸಿದ್ದರಾಮಯ್ಯ ಅವರು ಚಾಣಾಕ್ಷತನದಿಂದ ಹೊಂದಿಸಿ ಅಭಿವೃದ್ಧಿ ಕೆಲಸವನ್ನೂ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜವಾದ ಜಾತ್ಯತೀತರು ಎಂದು ಅವರು ಶ್ಲಾಘಿಸಿದರು.
ರಾಜ್ಯ ಸರ್ಕಾರದಿಂದ ‘ಮಹತ್ವದ’ ನಿರ್ಧಾರ: ನಿಮ್ಮ ಮನೆಗೆ ಬಾಗಿಲಿಗೆ ಬಂದು ‘ಆರ್ಟಿಸಿ-ಆಧಾರ್’ ಜೋಡಣೆ!