ಮೈಸೂರು : ಶಾಸಕ ರಿಜ್ವಾನ್ ಆರ್ಷದ್ ಗೆ ಟಿಕೆಟ್ ಕೊಡಿಸಿದ್ದು, ಜಮೀರ್ ಅಹ್ಮದ್ ಖಾನ್ ಎಂದು ಮೈಸೂರು ನಲ್ಲಿ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಹೇಳಿಕೆ ನೀಡಿದರು. ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ರಿಜ್ವಾನ್ ರಿಜ್ವಾನ್ ಆರ್ಷದ್ ವೆ ಜಮೀರ್ ಅಹ್ಮದ್ ಖಾನ್ ಟಿಕೆಟ್ ಕೊಡಿಸಿದ್ದಾರೆ ಎಂದರು.
2023ರಲ್ಲಿ ನನಗೆ ಸಿದ್ದರಾಮಯ್ಯ ಅವರು ಬಿ ಫಾರಂ ನೀಡಿದ್ದರು. ಆದರೆ ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಶಿವಾಜಿನಗರ ಕ್ಷೇತ್ರದ ಶಾಸಕ ಶಾಸಕ ರಿಜ್ವಾನ್ ಗೆ ಟಿಕೆಟ್ ಕೊಡಿಸಿದ್ದೆ ನಮ್ಮ ತಂದೆ. ಚುನಾವಣೆಯಲ್ಲಿ ರಿಜ್ವಾನ್ ಆರ್ಷದ್ ಅವರನ್ನು ಗೆಲ್ಲಿಸಿದ್ದು ಸಹ ನಮ್ಮ ತಂದೆ ಶಿವಾಜಿನಗರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚಾಗಿದ್ದಾರೆ. ನಮ್ಮ ಮನೆ ಸಹ ಶಿವಾಜಿನಗರ ಕ್ಷೇತ್ರದಲ್ಲಿಯೇ ಇದೆ ನಾನು ಬಯಸಿದ್ದರೆ ಆಗಲೇ ಶಾಸಕನಾಗುತ್ತಿದ್ದೆ ಎಂದು ಜೈದ್ಖಾನ್ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.








