ಕಲಬುರ್ಗಿ : ಕಳೆದ ಏಪ್ರಿಲ್ 16 ರಂದು ರಾಜ್ಯದ ಬೀದರ್ ಶಿವಮೊಗ್ಗ ಹಾಗೂ ಧಾರವಾಡದಲ್ಲಿ ಸಿಇಟಿ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದ ಪ್ರಕರಣ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಇಂದು ಕಲಬುರ್ಗಿಯಲ್ಲಿ ಕೂಡ ನೀಟ್ ಪರಿಕ್ಷೆ ವೇಳೆ ಅಧಿಕಾರಿಗಳು ವಿದ್ಯಾರ್ಥಿಯೋರ್ವನ ಜನಿವಾರ ತೆಗೆಸಿದ ಪ್ರಕರಣ ನಡೆದಿದೆ.
ಹೌದು ಇಂದು ಕಲ್ಬುರ್ಗಿಯ ಸೇಂಟ್ ಮೇರಿ ಶಾಲೆಯಲ್ಲಿ ನೀಟ್ ಪರೀಕ್ಷೆ ಇತ್ತು ಈ ವೇಳೆ ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ಗೆ ಅಧಿಕಾರಿಗಳು ಶನಿವಾರ ತೆಗೆದಿಟ್ಟು ಒಳಗಡೆ ಹೋಗು ಎಂದು ಸೂಚನೆ ನೀಡಿದ್ದಾರೆ ಈ ಹಿನ್ನೆಲೆ ಆದ ಜನಿವಾರ ತೆಗೆದು ತನ್ನ ತಂದೆಗೆ ಕೊಟ್ಟು ಪರೀಕ್ಷೆಗೆ ತೆರಳಿದ್ದಾನೆ ಈ ವಿಚಾರ ತಿಳಿದು, ಬ್ರಾಹ್ಮಣ ಸಮಾಜದವರು ಕಲ್ಬುರ್ಗಿಯ ಸೆಂಟ್ ಮೇರಿ ಶಾಲೆಯ ಎದುರುಗಡೆ ಪ್ರತಿಭಟನೆ ಮಾಡಿದರು.
ಪರೀಕ್ಷೆಯ ಬಳಿಕ ಹೊರಬಂದ ಶ್ರೀಪಾದ್ ಪಾಟೀಲ್ ಗೆ ಶಾಸ್ತ್ರೋಕ್ತವಾಗಿ ಅಲ್ಲೇ ಜನಿವಾರ ಧಾರಣೆ ಮಾಡಲಾಯಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿದ್ಯಾರ್ಥಿ ಶ್ರೀಪಾದ್ ಪಾಟೀಲ್, ಅಧಿಕಾರಿಗಳ ಸೂಚನೆ ಹಿನ್ನೆಲೆ ಜನಿವಾರ ತೆಗೆದು ತಂದೆಯ ಕೈಗೆ ಕೊಟ್ಟಿದ್ದೆ. ಜನಿವಾರ ತೆಗೆಸಿದ್ದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ನಾನು ಮಾನಸಿಕವಾಗಿ ನೊಂದಿದ್ದೇನೆ. ಮಾನಸಿಕವಾಗಿದ್ದರಿಂದ ರೋಲ್ ನಂಬರ್ ತಪ್ಪಾಗಿ ಬರೆದಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ.