ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಲ್ಲಿ ರೌಡಿಶೀಟರ್ ಬಿಕ್ಲು ಶಿವ ಭೀಕರ ಕೊಲೆ ನಡೆದಿದ್ದು, ಈ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಭೈರತಿ ಬಸವರಾಜ್ ಹೆಸರು ಕೇಳಿಬಂದಿತ್ತು. ಪೊಲೀಸರು ಅವರನ್ನು ವಿಚಾರಣೆಗೂ ಒಳಪಡಿಸಿದ್ದರು. ಇದೀಗ ಇಂದು ಭರತಿ ಬಸವರಾಜ್ ಸಹೋದರ ಮಗ ಅನಿಲ್ ಸೇರಿದಂತೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಸದ್ಯ ಈ ಒಂದು ಪ್ರಕರಣಕ್ಕೆ ಮತ್ತೊಂದು ರೋಚಕ ಟ್ವಿಸ್ಟ್ ಸಿಕ್ಕಿದ್ದು, ಬಿಕ್ಲ ಶಿವನ ಕೊಲೆ ಆರೋಪಿ ಆಗಿರುವ ಜಗ್ಗ ಅಲಿಯಾಸ್ ಜಗದೀಶ್ ಸಾಮಾನ್ಯ ವ್ಯಕ್ತಿಯಲ್ಲ. ಜಗ್ಗ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಬಹಳ ಬಲಿಷ್ಠ ವ್ಯಕ್ತಿ ಅನ್ನೋದು ಗೊತ್ತಾಗಿದೆ. ಆರೋಪಿ ಜಗ್ಗನಿಗೆ ಸಿನಿಮಾ ನಂಟಿರುವುದು ಬೆಳಕಿಗೆ ಬಂದಿದೆ. ನಟಿ ರಚಿತಾ ರಾಮ್‌ಗೆ ಉಡುಗೊರೆ ನೀಡಿರುವ ಫೋಟೋಗಳು ವೈರಲ್ ಆಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ಸಿನಿಮಾ ನಂಟಿನ ವಿಚಾರಕ್ಕೆ ಬರೋದಾದರೆ, ರವಿ ಬೋಪಣ್ಣ ಸಿನಿಮಾದ ಶೂಟಿಂಗ್ ವೇಳೆ ಈಗ ನಟಿ ರಚಿತಾ ರಾಮ್‌ಗೆ ಸೀರೆ ಹಾಗೂ ಚಿನ್ನಾಭರಣವನ್ನು ಉಡುಗೊರೆಯಾಗಿ ನೀಡಿದ್ದ.ಜಗ್ಗನ ಬೆನ್ನಿಗೆ ಶಾಸಕ ಬೈರತಿ ಬಸವರಾಜ್ ಇದ್ದರು ಅನ್ನೋ ಆರೋಪ ಕೂಡ ಇದೆ. ಜಗ್ಗನ ಜೊತೆ ಶಾಸಕ ಕೂಡ ಈ ಕೊಲೆ ಕೇಸ್ ನ ಆರೋಪಿ ಆಗಿದ್ದಾರೆ. ಜಗ್ಗ ನಟಿ ರಚಿತಾ ರಾಮ್ ಗೆ ರೇಷ್ಮೆ ಸೀರೆ, ಚಿನ್ನದ ಹಾರ, ಓಲೆಯನ್ನು ಗಿಫ್ಟ್ ಮಾಡಿದ್ದ. ಗಿಪ್ಟ್ ಕೊಟ್ಟಿರೋ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಚಿತಾ ರಾಮ್ ಜೊತೆಗೆ ರವಿಚಂದ್ರನ್, ಸುದೀಪ್ ಜೊತೆಗೆ ಜಗ್ಗ ಆಪ್ತನಾಗಿದ್ದ ಎನ್ನಲಾಗಿದೆ.