ಬೆಂಗಳೂರು : ಇಂದು ಕನ್ನಡ ಬಿಗ್ ಬಾಸ್ ಸೀಸನ್ 12ರ ಗ್ರಾಂಡ್ ಫಿನಾಲೆ ನಡೆಯಲಿದ್ದು, ಈಗಾಗಲೇ ಫಿನಾಲೆಯಲ್ಲಿ ಆರು ಸ್ಪರ್ಧಿಗಳು ಬಂದು ಕುಳಿತಿದ್ದಾರೆ. ಇಂದು ನಡೆಯುವ ಫಿನಾಲೆಯಲ್ಲಿ ಯಾರು ಬಿಗ್ ಬಾಸ್ ಸೀಸನ್ 12ರ ಕಪ್ ಗೆಲ್ಲಲಿದ್ದಾರೆ ಎನ್ನುವುದು ಕೆಲವೇ ಗಂಟೆಗಳಲ್ಲಿ ತಿಳಿದು ಬರಲಿದೆ. ಆದರೆ ಅದಕ್ಕೂ ಮೊದಲು ಬಿಗ್ ಬಾಸ್ ಗೆ ಮತ್ತೊಂದು ಶಾಕ್ ಎದುರಾಗಿದ್ದವು ಅರಣ್ಯ ಇಲಾಖೆ ಬಿಗ್ ಬಾಸ್ ಆಯೋಜಕರಿಗೆ ನೋಟಿಸ್ ಜಾರಿ ಮಾಡಿದೆ.
ಹೌದು ಕಳೆದ ಕೆಲವು ವಾರಗಳ ಹಿಂದೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯೊಂದರಲ್ಲಿ ಕಂಟೆಸ್ಟೆಂಟ್ ಒಬ್ಬರು ರಣಹದ್ದು ಇರುವಂತಹ ಫೋಟೋವೊಂದನ್ನು ತೋರಿಸಿದ್ದರು. ಆಗ ಕಿಚ್ಚ ಸುದೀಪ್ ಇದಕ್ಕೆ ಪ್ರತಿಕ್ರಿಯಿಸಿ, ಹೊಂಚು ಹಾಕಿ ಸಂಚು ಮಾಡಿ ಸರಯಾದ ಸಮಯಕ್ಕೆ ಲಬಕ್ ಎಂದು ಹಿಡಿಯುತ್ತದೆ ಎಂದಿದ್ದರು. ಇದಕ್ಕೆ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಸುದೀಪ್ ಅವರು ರಣಹದ್ದುಗಳ ಕುರಿತು ತಪ್ಪಾಗಿ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಅರಣ್ಯ ಇಲಾಖೆಯ ಅಧಿಕಾರಿಗೆ ಪತ್ರ ಬರೆದಿದ್ದರು.
ಕಿಚ್ಚ ಸುದೀಪ್ ಅವರು ವೀಕೆಂಡ್ ಸಂಚಿಕೆಯ ಒಂದರಲ್ಲಿ ರಣಹದ್ದುಗಳ ಕುರಿತು ತಪ್ಪಾದ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಈ ಹದ್ದುಗಳು ಈಗ ಅಳಿವಿನಂಚಿನಲ್ಲಿವೆ. ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಅರಣ್ಯ ಇಲಾಖೆ ಆಯೋಜಕರಿಗೆ ನೋಟಿಸ್ ಕೊಟ್ಟಿದೆ. ನೋಟಿಸ್ನಲ್ಲಿ ರಣಹದ್ದುಗಳ ಸ್ವಭಾವದ ಕುರಿತು ಮುಂದಿನ ಸಂಚಿಕೆಯಲ್ಲಿ ಸ್ಪಷ್ಟನೆ ನೀಡಬೇಕು ಎಂದು ತಿಳಿಸಲಾಗಿದೆ. ಹಾಗಾಗಿ ಇಂದು ನಡೆಯುವ ಫಿನಾಲೆಯಲ್ಲಿ ಈ ಕುರಿತು ಸುದೀಪ ಅವರು ಸ್ಪಷ್ಟನೆ ಇಡುತ್ತಾರೆ ಎನ್ನುವುದರ ಕುರಿತು ಕಾದು ನೋಡಬೇಕಾಗಿದೆ.








