ಬೆಂಗಳೂರು : ಈಗಾಗಲೇ ಮೆಟ್ರೋ ಸೇರಿದಂತೆ ಬಸ್ ಟಿಕೆಟ್ ಪ್ರಯಾಣದ ದರ ಏರಿಕೆ ಮಾಡಿದ್ದು, ರಾಜ್ಯದ ಜನತೆಗೆ ಸರ್ಕಾರ ಶಾಕ್ ನೀಡಿದೆ. ಇದರ ಮಧ್ಯ ಮೆಟ್ರೋ ದರ ಇಳಿಕೆಗೆ ಒತ್ತಾಯ ಹೆಚ್ಚಾಗುತ್ತಿದೆ. ದರ ಕಡಿಮೆ ಮಾಡಬೇಕು ಎಂದು ಮೆಟ್ರೋ ಪ್ರಯಾಣಿಕರು ಆಗ್ರಹ ಮಾಡುತ್ತಿದ್ದಾರೆ.
ಆದರೆ, ಮೆಟ್ರೋ ದರ ನಿಗದಿ ಸಮಿತಿಯು ಪ್ರಯಾಣಿಕರಿಗೆ ಶಾಕ್ ನೀಡಿದೆ. ದರ ಇಳಿಕೆ ಮಾಡೋದಿಲ್ಲ ಅಂತ ನಿರ್ಧಾರ ಮಾಡಿದೆ. ಜೊತೆಗೆ ಸ್ಟುಡೆಂಟ್ ಪಾಸ್ ಬಗ್ಗೆ BMRCL ಮಹತ್ವದ ಅಪ್ಡೇಟ್ ನೀಡಿದೆ.ನಮ್ಮ ಮೆಟ್ರೋ ದರ ಏರಿಕೆ ಆದ ದಿನದಿಂದ ಇಳಿಕೆ ಮಾಡಬೇಕು ಅಂತ ಒತ್ತಾಯಿಸಿ ಹೋರಾಟಗಳು ಹೆಚ್ಚಾಗುತ್ತಿವೆ. ಆದರೆ, ದರ ಇಳಿಕೆ ಮಾಡೋದಿಲ್ಲ ಅಂತ ಮೆಟ್ರೋ ದರ ನಿಗದಿ ಸಮಿತಿ ಮೆಟ್ರೋ ಪ್ರಯಾಣಿಕರಿಗೆ ಉತ್ತರ ನೀಡಿದೆ.
ದರ ನಿಗದಿ ಸಮಿತಿಗೆ ಮೆಟ್ರೋ ಪ್ರಯಾಣಿಕರಿಗೆ ಸಲಹೆ ಜೊತೆಗೆ ಪ್ರಶ್ನೆಗಳನ್ನ ಕೂಡ ಕೇಳಿದ್ದರು. ಇದಕ್ಕೆ ಉತ್ತರ ನೀಡಿರುವ ಸಮಿತಿ, ದರ ಇಳಿಕೆ ಸಾಧ್ಯವೇ ಇಲ್ಲ ಎಂದು ತಿಳಿಸಿದೆ. ಮೆಟ್ರೋ ತಿಂಗಳ ಪಾಸ್ ನೀಡಿ ಎಂದು ಬಿಎಂಆರ್‌ಸಿಎಲ್ ಮತ್ತು ದರ ನಿಗದಿ ಸಮಿತಿಗೆ ಪ್ರಯಾಣಿಕರು ಕೂಡ ಮನವಿ ಮಾಡಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ಪಾಸ್ ಕೊಡಿ ಅಂತ ಬೇಡಿಕೆ ಇಟ್ಟಿದ್ದಾರೆ. ತಿಂಗಳ ಪಾಸ್ ನೀಡೋದಿಲ್ಲ. ಸಿಂಗಲ್ ಪಾಸ್ ಕೂಡ ವಿದ್ಯಾರ್ಥಿಗಳಿಗೆ ನೀಡಲ್ಲ. ಶಿಕ್ಷಣ ಸಂಸ್ಥೆಗಳು ಅಪ್ರೂಚ್ ಮಾಡಿದ್ದಾರೆ. ಗ್ರೂಪ್ ಪಾಸ್ ನೀಡುತ್ತೇವೆ ಎಂದಿದ್ದಾರೆ.








