ಬೆಂಗಳೂರು : ಇನ್ಸ್ಪೆಕ್ಟರ್ ಪಾಪಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನ ಕೋಣನಕುಂಟೆ ಇನ್ಸ್ಪೆಕ್ಟರ್ ಪಾಪಣ್ಣ ವಿರುದ್ಧ ಲೈಂಗಿಕ ಕಿರುಕುಳ ಕೇಳಿ ಬಂದಿದ್ದು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಮಂತ್ ಕುಮಾರ್ ಸಿಂಗ್ ಆದೇಶ ನೀಡಿದ್ದಾರೆ.
ಮಹಿಳಾ ರೌಡಿಶೀಟರ್ ಗೆ ಅಶ್ಲೀಲ ಸಂದೇಶ ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ್ದ ಪಾಪಣ್ಣ ಕರೆ ಮಾಡಿ, ವಾಟ್ಸಪ್ ಸಂದೇಶ ಕಳುಹಿಸಿದ್ದ ಆರೋಪ ಕೇಳಿ ಬಂದಿದೆ. ಪಾಪಣ್ಣ ಮೇಲಿನ ಆರೋಪಗಳ ಕುರಿತು ತನಿಖೆಗೆ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಪಾಪಣ್ಣ ಮಹಿಳಾ ರೌಡಿ ಶೀಟರ್ ಗೆ ಕರೆ ಮಾಡಿರುವ ಹಾಗೂ ವಾಟ್ಸಪ್ ನಲ್ಲಿ ಸ್ಟೀಲ್ ಮೆಸೇಜ್ ಮಾಡಿರುವ ಕೆಲವು ವಿಡಿಯೋಗಳು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ.








