ಬೆಂಗಳೂರು : ಇತ್ತೀಚಿಗೆ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ತೀವ್ರ ಜಟಾಪಟಿ ಏರ್ಪಟ್ಟಿದೆ. ಇದೀಗ ಪ್ರಿಯಾಂಕ ಖರ್ಗೆ ಅವರು ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕಿಡಿಕಾರಿದ್ದು, ಪದೇ ಪದೇ ರಜಾಕರು ನಿಜಾಮರು ಎಂದು ಹೇಳುವ ಸಿಟಿ ರವಿ ಅವರೇ, ನಿಮ್ಮ RSS ನಾಯಕರನ್ನು ಪಾಕಿಸ್ತಾನಕ್ಕೆ ಕಳಿಸಿ ಅಖಂಡ ಭಾರತದ ಕನಸು ನನಸು ಮಾಡಿ ಎಂದು ತಿರುಗೇಟು ನೀಡಿದ್ದಾರೆ.
ಸಚಿವ ಪ್ರಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ಟೀಕೆ ಮಾಡಿರುವ ವಿಚಾರವಾಗಿ ಸಿಟಿ ರವಿ ಪದೇ ಪದೇ ರಜಾಕರು ನಿಜಾಮರು ಅಂತ ಹೇಳುತ್ತಾರೆ. ನಿಮ್ಮ RSS ನಾಯಕರನ್ನು ಪಾಕಿಸ್ತಾನಕ್ಕೆ ಕಳುಹಿಸಿ. ಅಲ್ಲಿ ಸೆಟಲ್ ಆಗಿ ಅಖಂಡ ಭಾರತದ ಕನಸು ನನಸು ಮಾಡಿ. ರಜಾಕರು, ನಿಜಾಮರು ಅಂತ ಇಲ್ಲಿ ಕುಳಿತು ಮಾತನಾಡಬೇಡಿ ಎಂದರು.
ವಿಧಾನ ಪರಿಷತ್ ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣ ಆಯಿತು. ಈ ಕೇಸ್ ನಲ್ಲಿ ಸಿಟಿ ರವಿ ವಾಯ್ಸ್ ಸ್ಯಾಂಪಲ್ ಏಕೆ ಕೊಡಲಿಲ್ಲಾ? ಸುಪ್ರೀಂ ಕೋರ್ಟ್ ಗೆ ಹೋಗಿ ತಡೆಯಾಜ್ಞೆ ತರಬೇಕಾ? ಎಂದು ಬೆಂಗಳೂರಿನಲ್ಲಿ ಸಿಟಿ ರವಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.