ಬೆಂಗಳೂರು : ಬೆಂಗಳೂರಿನ ಪರಪ್ಪನ ಆಗ್ರಹಾರ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗೆ ಸೀಮಂತ ಮಾಡಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಒಬ್ಬರಿಗೆ ಠಾಣೆಯ ಎಲ್ಲ ಸಿಬ್ಬಂದಿಗಳು ಸೇರಿಕೊಂಡು ಸೀಮಂತ ಕಾರ್ಯಕ್ರಮ ನಡೆಸಿದ್ದಾರೆ.
ಬಳೆ ತೊಡಿಸಿಸಿಬ್ಬಂದಿಗಳು ರೇಷ್ಮೆಸೀರೆ, ಅಕ್ಕಿ ಮತ್ತು ಫಲ ತಾಂಬೂಲ ನೀಡಿ ಶುಭ ಹಾರೈಸಿದ್ದಾರೆ. ಇನ್ಸ್ಪೆಕ್ಟರ್ ಸತೀಶ್ ಅವರ ನೇತೃತ್ವದಲ್ಲಿ ಎಲ್ಲಾ ಸಿಬ್ಬಂದಿಗಳು ಈ ಒಂದು ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಈ ವೇಳೆ ಮಹಿಳಾ ಸಿಬ್ಬಂದಿಗಳು ಆರತಿ ಬೆಳಗಿ ಭಾವನಾತ್ಮಕ ಕ್ಷಣಕ್ಕೆ ಕಾರಣರಾದರು.








