ಬೆಳಗಾವಿ : ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲಿ ಇತ್ತೀಚಿಗೆ ಎಸ್‌ಡಿಎ ನೌಕರ ರುದ್ರಣ್ಣ ಮೇಲಾಧಿಕಾರಿಗಳ ಕಿರುಕುಳಕ್ಕೆ ಬಿಸತ್ತು ಕಚೇರಿಯ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳಗಾವಿಯ ಕಡೆ ಬಜಾರ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ FIR ದಾಖಲಾಗಿದೆ.
ಈ ಕುರಿತಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಾಡ ಮಾರ್ಟಿನ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, A1 ಆರೋಪಿ ತಹಶೀಲ್ದಾರ್ ಬಸವರಾಜ ನಾಗರಾಳ್, A2 ಆರೋಪಿ ಅಶೋಕ್ ಹಾಗೂ A3 ಆರೋಪಿ ಸೋಮು ವಿರುದ್ಧ ಖಡೆಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸಿಪಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ತನಿಖೆ ಆರಂಭಿಸಿ ಕೆಲವೊಂದು ಅಷ್ಟು ಮಾಹಿತಿ ಸಂಗ್ರಹಿಸಲಾಗಿದೆ ಎಂದರು.
ರುದ್ರಣ್ಣ ಮೊಬೈಲ್ ನೀಡಲು ಕುಟುಂಬಸ್ಥರಿಗೆ ಸೂಚನೆ ನೀಡಿದ್ದೇವೆ. ಮೃತ ರುದ್ರೇಶ್ ಮೊಬೈಲ್ FSL ಗೆ ಕಳುಹಿಸುತ್ತೇವೆ. ಸಿಸಿಟಿವಿ ದೃಶ್ಯಗಳನ್ನು ಕೂಡ ನಾವು ಕಲೆ ಹಾಕುತ್ತಿದ್ದೆವೆ. ರುದ್ರಣ್ಣ ಆಫೀಸ್ ವಾಟ್ಸಪ್ ಗ್ರೂಪ್ ನಲ್ಲಿ ಮೆಸೇಜ್ ಹಾಕಿದ್ದಾರೆ. ಇದರಲ್ಲಿ ಸಚಿವರ ಪಿಎ ಸೋಮು ಹೆಸರು ಇದೆ ಎಂದು ಹೇಳುತ್ತಿದ್ದಾರೆ. ಮೊಬೈಲ್ ಸಿಕ್ಕ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಾಡ ಮಾರ್ಟಿನ್ ಹೇಳಿಕೆ ನೀಡಿದರು.