ಮಂಡ್ಯ : ಮಂಡ್ಯದಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಂದ ಗಾರೆ ಕೆಲಸ ಮಾಡಿಸಿರುವ ಘಟನೆ ಇದೀಗ ವರದಿಯಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಲಕುಂದಿ ಗ್ರಾಮದ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಶಾಲೆಗೆ ಮಕ್ಕಳು ವಿದ್ಯಾಭ್ಯಾಸಕ್ಕೆ ತೆರಳುತ್ತಾರೆ. ಆದರೆ ಈ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಂದ ಗಾರೆ ಕೆಲಸ ಮಾಡಿಸಿದ್ದಾರೆ. ನಾಗಮಂಗಲ ತಾಲೂಕಿನ ನಲಕುಂದಿ ಗ್ರಾಮದ ಶಾಲೆಯಲ್ಲಿ ಶಾಲಾ ಮಕ್ಕಳು ಕೂಲಿ ಆಳುಗಳಂತೆ ಕೆಲಸ ಮಾಡಿದ್ದಾರೆ. ಹೀಗಾಗಿ ಸ್ಥಳೀಯರು ಶಾಲಾ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಎಷ್ಟು ಜನ ಮಕ್ಕಳನ್ನು ಇಟ್ಕೊಂಡು ಗಾಡಿ ಕೆಲಸ ಮಾಡುತ್ತಿದ್ದೀರಲ್ಲ ಗ್ರಾಮದಲ್ಲಿ ಬೇರೆ ಯಾರು ನಿಮಗೆ ಈ ಕೆಲಸ ಮಾಡೋಕೆ ಸಿಗಲಿಲ್ವಾ? ಮಕ್ಕಳ ಕೈಯಲ್ಲಿ ಹೇಗೆ ಕೆಲಸ ಮಾಡಿಸಿದ್ದೀರಾ? ನೀವು ಏನು ಬೇಕಾದರೂ ಮಾಡಿ ಆದರೆ ಮಕ್ಕಳ ಕೈಯಲ್ಲಿ ಯಾಕೆ ಕೆಲಸ ಮಾಡಿಸುತ್ತೀರಾ? ಮಕ್ಕಳನ್ನು ಶಾಲೆಗೆ ಕಳಿಸುವುದು ಇದಕ್ಕೆನಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.








