Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಪಂಜಾಬ್ ಬಿಜೆಪಿ ಕಚೇರಿ ಹೊರಗೆ ಭಾರಿ ಸ್ಫೋಟದ ಸದ್ದು; ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ವಿಧ್ವಂಸಕ ಕೃತ್ಯದ ಶಂಕೆ!

01/04/2026 6:44 PM

ಯುದ್ಧದ ನಡುವೆ ಭಾರತಕ್ಕೆ ಇರಾನ್ ತೈಲ ಭಾಗ್ಯ: 2019ರ ನಂತರ ಮೊದಲ ಬಾರಿಗೆ ತಲುಪುತ್ತಿದೆ ಕಚ್ಚಾ ತೈಲ!

01/04/2026 6:42 PM

BREAKING: ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಿದರೆ ಮಾತ್ರ ಕದನ ವಿರಾಮ: ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ

01/04/2026 6:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಗಮನಿಸಿ : `ವಿದ್ಯಾರ್ಥಿವೇತನ’ಕ್ಕೆ ಅರ್ಜಿ ಆಹ್ವಾನ.!
KARNATAKA

BIG NEWS : ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಗಮನಿಸಿ : `ವಿದ್ಯಾರ್ಥಿವೇತನ’ಕ್ಕೆ ಅರ್ಜಿ ಆಹ್ವಾನ.!

By kannadanewsnow5721/12/2024 4:51 AM

ಪ್ರಸಕ್ತ (2024-25) ಸಾಲಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿವಿಧ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ವೆಬ್‍ಸೈಟ್ https://ssp.karnataka.gov.in ಮೂಲಕ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.

ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ(ಆದಾಯದ ಮಿತಿ 2.50 ಲಕ್ಷ), ಆಧಾರ್ ಕಾರ್ಡ್ ಬ್ಯಾಂಕ್‍ಖಾತೆಗೆ ಆಧಾರ್ ಸಂಖ್ಯೆಯನ್ನು ಎನ್‍ಪಿಸಿಐ ಮೂಲಕ ಕಡ್ಡಾಯವಾಗಿ ಲಿಂಕ್ ಮಾಡಿರಬೇಕು ಅಥವಾ ಅಂಚೆ ಕಚೇರಿಯಲ್ಲಿ ಐಪಿಪಿಬಿ ಖಾತೆ ಹೊಂದಿರಬೇಕು(ಆಧಾರ್ ಕಾರ್ಡ್ ಇ-ಕೆವೈಸಿ ಆಗಿರಬೇಕು). ದೂರವಾಣಿ ಸಂಖ್ಯೆ (ಚಾಲ್ತಿಯಲ್ಲಿರುವ ಆಧಾರ್ ಲಿಂಕ್ ಆಗಿರುವ ದೂರವಾಣಿ ಸಂಖ್ಯೆ ಕಡ್ಡಾಯವಾಗಿರಬೇಕು). ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕಪಟ್ಟಿ, ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ, ಅಧ್ಯಯನ-ಬೋನೋಪೈಡ್ ಪ್ರಮಾಣ ಪತ್ರ, ಪ್ರಸಕ್ತ ಕೋರ್ಸ್‍ನ ಶುಲ್ಕ ರಶೀದಿ ಪ್ರತಿ ಹಾಗೂ ತಂದೆ, ತಾಯಿ, ಪೋಷಕರ ಆಧಾರ್ ಕಾರ್ಡ್ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಜಾತಿ ಪ್ರಮಾಣ ಮತ್ತು ಆದಾಯ ಪ್ರಮಾಣ ಪತ್ರ(ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ (1 ರಿಂದ 8ನೇ ತರಗತಿ) ಆದಾಯದ ಮಿತಿ 6 ಲಕ್ಷ ಹಾಗೂ 9ನೇ, 10ನೇ ತರಗತಿ ಆದಾಯದ ಮಿತಿ ರೂ.2.50 ಲಕ್ಷ). ಆದಾರ್ ಕಾರ್ಡ್(ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಎನ್‍ಪಿಸಿಐ ಮೂಲಕ ಕಡ್ಡಾಯವಾಗಿ ಲಿಂಕ್ ಮಾಡಿರಬೇಕು ಅಥವಾ ಅಂಚೆ ಕಚೇರಿಯಲ್ಲಿ ಐಪಿಪಿಬಿ ಖಾತೆ ಹೊಂದಿರಬೇಕು (ಆದಾರ್ ಕಾರ್ಡ್ ಇ-ಕೆವೈಸಿ ಆಗಿರಬೇಕು). ದೂರವಾಣಿ ಸಂಖ್ಯೆ(ಚಾಲ್ತಿಯಲ್ಲಿರುವ ಆಧಾರ್ ಲಿಂಕ್ ಆಗಿರುವ ದೂರವಾಣಿ ಸಂಖ್ಯೆ ಕಡ್ಡಾಯವಾಗಿರಬೇಕು). ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕಪಟ್ಟಿ ಮತ್ತು ಎಸ್‍ಟಿಎಸ್ ಸಂಖ್ಯೆ, ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ, ತಂದೆ, ತಾಯಿ, ಪೋಷಕರ ಆಧಾರ್ ಕಾರ್ಡ್ ಪ್ರತಿ ಅರ್ಜಿಯೊಂದಿಗೆ ಲಗತ್ತಿಸಬೇಕು.

ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು(ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ ಇಲ್ಲಿನ ಕಚೇರಿ ದೂ.ಸಂ. 948084355 ನ್ನು ಸಂಪರ್ಕಿಸಬಹುದು. ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಸರ್ಕಾರದ ಮಾರ್ಗಸೂಚಿಗಳನ್ನು ಮತ್ತು ಷರತ್ತುಗಳನ್ನು ಚೆನ್ನಾಗಿ ಓದಿಕೊಂಡು ಅರ್ಥೈಸಿಕೊಂಡು ಜಾಗರೂಕತೆಯಿಂದ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

BIG NEWS : ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಗಮನಿಸಿ : `ವಿದ್ಯಾರ್ಥಿವೇತನ'ಕ್ಕೆ ಅರ್ಜಿ ಆಹ್ವಾನ.! BIG NEWS: School and college students in the state note: Applications invited for scholarships
Share. Facebook Twitter LinkedIn WhatsApp Email

Related Posts

‘ರಾಮಾಯಣದ ಭಕ್ತಿ’ ಪಥಕ್ಕೆ ಆಂಜನೇಯನೇ ದಾರಿದೀಪ: ಸಾಗರದ ಮಧ್ವ ಸಂಘದ ನಿರ್ದೇಶಕ ಆನಂದ ಕಲ್ಯಾಣಿ ಬಣ್ಣನೆ

01/04/2026 5:51 PM2 Mins Read

‘ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ’ಯಲ್ಲಿ ಕೆಎಸ್‌ಆರ್‌ಟಿಸಿ ನಂ.1: ವಿಶ್ವ ಹೆಚ್.ಆರ್.ಡಿ ಕಾಂಗ್ರೆಸ್ ಪ್ರಶಸ್ತಿ ಮುಡಿಗೆ

01/04/2026 5:51 PM2 Mins Read

ಭ್ರಷ್ಟಾಚಾರ, ಸಿಬ್ಬಂದಿಗೆ ಕಿರುಕುಳ ಆರೋಪ: ಕುವೆಂಪು ವಿವಿ ಕುಲಸಚಿವ ಮಂಜುನಾಥ್ ವರ್ಗಾವಣೆ

01/04/2026 5:31 PM1 Min Read
Recent News

BREAKING: ಪಂಜಾಬ್ ಬಿಜೆಪಿ ಕಚೇರಿ ಹೊರಗೆ ಭಾರಿ ಸ್ಫೋಟದ ಸದ್ದು; ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ವಿಧ್ವಂಸಕ ಕೃತ್ಯದ ಶಂಕೆ!

01/04/2026 6:44 PM

ಯುದ್ಧದ ನಡುವೆ ಭಾರತಕ್ಕೆ ಇರಾನ್ ತೈಲ ಭಾಗ್ಯ: 2019ರ ನಂತರ ಮೊದಲ ಬಾರಿಗೆ ತಲುಪುತ್ತಿದೆ ಕಚ್ಚಾ ತೈಲ!

01/04/2026 6:42 PM

BREAKING: ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಿದರೆ ಮಾತ್ರ ಕದನ ವಿರಾಮ: ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ

01/04/2026 6:38 PM

BREAKING: ಕದನ ವಿರಾಮಕ್ಕೆ ಮುಂದಾದ ಇರಾನ್: ಹಾರ್ಮುಜ್ ಜಲಸಂಧಿ ಮತ್ತೆ ತೆರೆದರೇ ನೋಡೋಣವೆಂದ ಟ್ರಂಪ್

01/04/2026 6:35 PM
State News
KARNATAKA

‘ರಾಮಾಯಣದ ಭಕ್ತಿ’ ಪಥಕ್ಕೆ ಆಂಜನೇಯನೇ ದಾರಿದೀಪ: ಸಾಗರದ ಮಧ್ವ ಸಂಘದ ನಿರ್ದೇಶಕ ಆನಂದ ಕಲ್ಯಾಣಿ ಬಣ್ಣನೆ

By kannadanewsnow0901/04/2026 5:51 PM KARNATAKA 2 Mins Read

ಶಿವಮೊಗ್ಗ: ರಾಮಾಯಣದ ಕಥಾನಕದಲ್ಲಿ ಶ್ರೀರಾಮಚಂದ್ರನ ಆದರ್ಶಗಳು ಎಷ್ಟು ಮುಖ್ಯವೋ, ಆ ಆದರ್ಶಗಳನ್ನು ಭಕ್ತಿ ಮತ್ತು ಸೇವೆಯ ಮೂಲಕ ಸಾಕಾರಗೊಳಿಸಿದ ಹನುಮಂತನ…

‘ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ’ಯಲ್ಲಿ ಕೆಎಸ್‌ಆರ್‌ಟಿಸಿ ನಂ.1: ವಿಶ್ವ ಹೆಚ್.ಆರ್.ಡಿ ಕಾಂಗ್ರೆಸ್ ಪ್ರಶಸ್ತಿ ಮುಡಿಗೆ

01/04/2026 5:51 PM

ಭ್ರಷ್ಟಾಚಾರ, ಸಿಬ್ಬಂದಿಗೆ ಕಿರುಕುಳ ಆರೋಪ: ಕುವೆಂಪು ವಿವಿ ಕುಲಸಚಿವ ಮಂಜುನಾಥ್ ವರ್ಗಾವಣೆ

01/04/2026 5:31 PM

ರಾಜ್ಯದಲ್ಲಿ ಅನಿರೀಕ್ಷಿತ ಆಲಿಕಲ್ಲು ಮಳೆ: ಸಮೀಕ್ಷೆ ಪೂರ್ಣಗೊಳಿಸಿ ಬೆಳೆಹಾನಿಗೆ ಪರಿಹಾರ – ಸಚಿವ ಸಂತೋಷ್ ಲಾಡ್

01/04/2026 5:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.