ಬೆಂಗಳೂರು: ಕರ್ನಾಟಕದ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಕಟಿಸಲಾಗಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದ್ದು, 2024-25ನೇ ಸಾಲಿನಲ್ಲಿ ನಡೆಯುವ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಜನವರಿ 17, 2025ರಿಂದ ಪರೀಕ್ಷೆ ಆರಂಭಗೊಂಡು, ಜ.29ರವರೆಗೆ ನಡೆಯಲಿದೆ ಎಂದಿದೆ.
ಹೀಗಿದೆ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ
ದಿನಾಂಕ 17-01-2025ರಂದು ಕನ್ನಡ
ದಿನಾಂಕ 20-01-2025ರಂದು ಇತಿಹಾಸ, ಭೌತ ಶಾಸ್ತ್ರ, ಸಂಖ್ಯಾಶಾಸ್ತ್ರ
ದಿನಾಂಕ 21-01-2025ರಂದು ವಾಣಿಜ್ಯ ಶಾಸ್ತ್ರ, ಗಣಿತಶಾಸ್ತ್ರ
ದಿನಾಂಕ 22-01-2025ರಂದು ಆಂಗ್ಲ ಭಾಷೆ
ದಿನಾಂಕ 23-01-2025ರಂದು ರಾಜ್ಯ ಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ
ದಿನಾಂಕ 24-01-2025ರಂದು ಲೆಕ್ಕ ಶಾಸ್ತ್ರ, ಐಚ್ಛಿಕ ಕನ್ನಡ
ದಿನಾಂಕ 27-01-2025ರಂದು ಅರ್ಥ ಶಾಸ್ತ್ರ, ರಾಸಾಯನ ಶಾಸ್ತ್ರ
ದಿನಾಂಕ 28-01-2025ರಂದು ಸಮಾಜ ಶಾಸ್ತ್ರ, ಜೀವ ಶಾಸ್ತ್ರ, ಬೇಸಿಕ್ ಮ್ಯಾತ್ಸ್, ಭೂಗೋಳ ಶಾಸ್ತ್ರ
ದಿನಾಂಕ 29-01-2025ರಂದು ಹಿಂದಿ, ತಮಿಳು, ತೆಲುಗು, ಉರ್ದು, ಸಂಸ್ಕೃತ, ಐಟಿ, ರಿಟೈಲ್, ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್ ನೆಸ್