ಬೆಂಗಳೂರು : ರಾಜ್ಯದ ಪರಿಶಿಷ್ಟ ಜಾತಿಯ 101 ಉಪಜಾತಿಗಳನ್ನು ಪ್ರವರ್ಗ ಎ,ಬಿ ಮತ್ತು ಸಿ ಎಂದು ಮೂರು ಪ್ರವರ್ಗಗಳಾಗಿ ವರ್ಗೀಕರಿಸಿ ಜಾರಿಗೊಳಿಸಿರುವ ಒಳ ಮೀಸಲಾತಿಗೆ ಅನುಗುಣವಾಗಿ ರಾಜ್ಯ ಸಿವಿಲ್ ಸೇವೆಗಳ ಹುದ್ದೆ ಗಳ ನೇರ ನೇಮಕಾತಿಯಲ್ಲಿ ಪ್ರವರ್ಗವಾರು ಹುದ್ದೆಗಳ ಹಂಚಿಕೆಗೆ ಸಂಬಂಧಿಸಿ ರೋಸ್ಟರ್ ಬಿಂದು ಪರಿಷ್ಕರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಬುಧವಾರ ಸರ್ಕಾರ ಆದೇಶಿಸಿದೆ.
ಹಾಗಾಗಿ ಆ ಪ್ರಕಾರ, ಎಸ್ಸಿ ಸಮುದಾಯಕ್ಕೆ ರಾಜ್ಯದಲ್ಲಿ ಒಟ್ಟಾರೆ ಒಟ್ಟಾರೆ ಇರು ಇರುವ ಶೇ.17 ಮೀಸಲಾತಿಯಲ್ಲಿ ಇನ್ನು ಮುಂದೆ ಪ್ರವರ್ಗ ಎ ಅಡಿ ಬರುವ ಉಪಜಾತಿಗಳಿಗೆ ಶೇ.6, ಪ್ರವರ್ಗ ಬಿ ಅಡಿ ಬರುವ ಉಪಜಾತಿಗಳಿಗೆ ಶೇ.6 ಮತ್ತು ಪ್ರವರ್ಗ ಸಿ ಅಡಿ ಬರುವ ಉಪಜಾತಿಗಳಿಗೆ ಶೇ.5 ಹುದ್ದೆಗಳು ಲಭ್ಯವಾಗಲಿವೆ.
ಅಂದರೆ ನೂರು ಹುದ್ದೆಯಲ್ಲಿ ಪ್ರಸ್ತುತ ಪರಿಶಿಷ್ಟ ಜಾತಿಯವರಿಗೆ ಮೀಸಲಿರುವ 17 ಹುದ್ದೆಗಳಲ್ಲಿ ಒಳಮೀಸಲಾತಿಯಡಿ ಪ್ರವರ್ಗ ಎ ಅಡಿ ಬರುವ ಎಸ್ಸಿ ಉಪ ಜಾತಿಗಳಿಗೆ 6 ಹುದ್ದೆ, ಪ್ರವರ್ಗ ಬಿ ಅಡಿ ಬರುವ ಉಪ ಜಾತಿಗಳಿಗೆ 6 ಹುದ್ದೆ ಮತ್ತು ಪ್ರವರ್ಗ ಸಿ ಅಡಿ ಬರುವ ಉಪ ಜಾತಿಗಳಿಗೆ ಹುದ್ದೆಗಳು ಮೀಸಲಾಗಿರಲಿವೆ. ಅಲ್ಲದೆ, ಇದು ಪ್ರತಿ ಪ್ರವರ್ಗದಲ್ಲೂ ಬರುವ ಎಲ್ಲ ಉಪಜಾತಿಗಳಿಗೂ ರೊಟೇಷನ್ ಪದ್ಧತಿಯಲ್ಲಿ ಒಳಮೀಸಲಾತಿ ಮೂಲಕ ನೇಮಕಾತಿಯಲ್ಲಿ ಪ್ರಾತಿನಿಧ್ಯ ಸಿಗುವಂತೆ ಮಾಡಲಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.