ಬೆಂಗಳೂರು: ಗಣೇಶೋತ್ಸವದಲ್ಲಿ ‘ಸಾವರ್ಕರ್ ಉತ್ಸವ’ ಆಚರಣೆ ಮಾಡಲಾಗುವುದು ಅಂತ ಪ್ರಮೋದ್ ಮುತಾಲಿಕ್, ಘೋಷಣೆ ಮಾಡಿದ್ದಾರೆ. ಅವರು ಇಂದು ಬೆಂಗಳೂರಿನ ಪ್ರಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಅವರು ಮಾತನಾಡುತ್ತ, ಸ್ವಾತಂತ್ರ್ಯ ವೀರ ಸಾವರ್ಕರ್ಗೆ ಮಾಡಿದ ಅವಮಾನವನ್ನು ನಾನು ಖಂಡಿಸುವೆ ಅಂತ ಹೇಳಿದರು. ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವೆರಿಸಿ, ಈ ಬಾರಿಯ ಗಣೇಶ ಕೂರಿಸುವ ಸ್ಥಳಗಳಲ್ಲಿ ಸಾವರ್ಕರ್ ಫೋಟೋ ವನ್ನು ಇಡುವಂತೆ ಈ ಮೂಲಕ ನಾನು ಮನವಿ ಮಾಡಿಕೊಳ್ಳುತ್ತೇನೆ, ಅದೇ ರೀತಿಯಲ್ಲಿ, ಅವರ ಹೋರಾಟದ ಬಗ್ಗೆ ಉಪನ್ಯಾಸತ ನಾಟಕ, ನೃತ್ಯ ರೂಪಕವನ್ನು ಹಮ್ಮಿಕೊಳ್ಳಲಾಗಿದೆ ಅಂತ ತಿಳಿಸಿದರು.
ಇನ್ನೂ ಮಾಜಿ ಸಿಎಂ ಸಿದ್ಧರಾಮಯ್ಯ ಕೊಡಗು, ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಮಾಡುತ್ತಿರೋ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆಯ ಬಿಸಿ ತಟ್ಟಿದೆ. ಈ ಬೆನ್ನಲ್ಲೇ ಅವರು ನೀಡಿರುವಂತ ಪ್ರಚೋದನಕಾರಿ ಹೇಳಿಕೆಯಿಂದ, ಅವರ ವಿರುದ್ಧ ದೂರು ದಾಖಲಾಗಿದೆ. ಮೈಸೂರಿನಲ್ಲಿ ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು ಎಂಬುವರು ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಪ್ರೋಚದನಕಾರಿ ಹೇಳಿಕೆ ಬಗ್ಗೆ ಪೊಲೀಸರಿಗೆ ದೂರು ನೀಡಿದದಾರೆ. ಅಂದಹಾಗೇ ಕೊಡಗಿನಲ್ಲಿ ತಮ್ಮ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿದ್ದ ಘಟನೆ ಬಗ್ಗೆ ಮಾತನಾಡಿದ್ದಂತ ಅವರು, ನಮಗೆ ಮೊಟ್ಟೆ ಎಸೆಯೋದು ಬರೋದಿಲ್ವಾ.? ನಾವು ಹೋರಾಟ ಶುರು ಮಾಡಿದ್ರೇ.. ಸಿಎಂ, ಬಿಜೆಪಿ ನಾಯಕರು ಓಡಾಡೋದಕ್ಕೆ ಆಗೋದಿಲ್ಲ ಎಂಬುದಾಗಿ ಹೇಳಿದ್ದರು. ಈ ಪ್ರಚೋದನಕಾರಿ ಹೇಳಿಕೆಯ ಬಗ್ಗೆಯೂ ಬಿಜೆಪಿಯಿಂದ ಪೊಲೀಸರಿಗೆ ಅವರ ವಿರುದ್ಧ ದೂರು ನೀಡಲಾಗಿದೆ.
BIG NEWS: ಪ್ರಚೋದನಕಾರಿ ಹೇಳಿಕೆ ಹಿನ್ನಲೆ: ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ದೂರು ದಾಖಲು