ಬೆಂಗಳೂರು :ಹೆಚ್.ಆರ್.ಎಂ.ಎಸ್ ಮತ್ತು ಖಜಾನೆ-2ರಲ್ಲಿ ಸೃಜಿಸಲಾದ ಜಿಲ್ಲಾ ವಲಯದ ವೇತನ ಬಿಲ್ಲುಗಳನ್ನು ಭೌತಿಕ ಬಿಲ್ಲುಗಳ ಬದಲಿಗೆ ಆನ್‌ಲೈನ್‌ನಲ್ಲಿ ಮಾತ್ರ ಅಂಗೀಕರಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ.?
ಮೇಲೆ ಓದಲಾದ (1)ರ ಆದೇಶದಲ್ಲಿ ವೋಚರುಗಳ ಡಿಜಿಟಲೀಕರಣದ ಅಂಗವಾಗಿ, ಹೆಚ್.ಆರ್.ಎಂ.ಎಸ್ ಹಾಗೂ ಖಜಾನೆ 2 ರಲ್ಲಿ ವೇತನ ಬಿಲ್ಲು ಮತ್ತು ವೇತನಗಳಲ್ಲಿನ ಕಡಿತ, ವಸೂಲಾತಿಗಳ ಸಂಬಂಧ ಭೌತಿಕ ಷೆಡ್ಯೂಲ್ ಗಳ ಬದಲು ಆನ್ ಲೈನ್ ನಲ್ಲಿ ಅಂಗೀಕರಿಸಲು ದಿನಾಂಕ 01.04.2022 ರಿಂದ ಜಾರಿಗೆ ಬರುವಂತೆ, ಹೆಚ್ ಆರ್ ಎಂ ಎಸ್ ಹಾಗೂ ಖಜಾನೆ 2ರಲ್ಲಿ ಸೃಜಿಸುವ ವೇತನಗಳಿಗೆ ಸಂಬಂಧಿಸಿದ ಬಿಲ್ಲುಗಳನ್ನು ಡಿಡಿಓರವರು ಡಿ.ಎಸ್.ಸಿ ಮೂಲಕ ದೃಢೀಕರಿಸಿ ಖಜಾನೆಗಳಿಗೆ ಆನ್ ಲೈನ್ ಮೂಲಕ ಸಲ್ಲಿಸಲು ಹಾಗೂ ಯಾವುದೇ ಕಡಿತ ಮತ್ತು ವಸೂಲಾತಿಗಳ ಷೆಡ್ಯೂಲ್ /ಚಲನ್ ಗಳನ್ನು ಭೌತಿಕವಾಗಿ ಮುದ್ರಿಸಿ ಸಲ್ಲಿಸದಿರಲು ಆದೇಶಿಸಲಾಗಿದೆ.
2. ಸರ್ಕಾರದ ಆದೇಶ ಸಂ. ಆಇ 01 ಟಿಟಿಸಿ 2022 ದಿನಾಂಕ 23.03.2022 ಆದೇಶದಂತೆ, ಖಜಾನೆ 2 ರ ತಂತ್ರಾಂಶದಲ್ಲಿ ಅವಶ್ಯಕ ಮಾರ್ಪಾಟುಗಳನ್ನು ಮಾಡಿಕೊಂಡು, ಆಗಸ್ಟಸ್ 2023 ಮಾಹೆಯಿಂದ, ಖಜಾನೆ ಇಲಾಖೆಯ ವೇತನ ಬಿಲ್ಲುಗಳಿಗೆ ಸಂಬಂದಿಸಿದಂತೆ ಈ ಹೊಸ ವಿಧಾನವನ್ನು ಅನುಷ್ಠಾನಗೊಳಿಸಲಾಗಿದೆ.
3. ಮೇಲ್ಕಂಡ ಕಾರ್ಯವಿಧಾನವನ್ನು ಜಿಲ್ಲಾ ವಲಯದ (ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್) ವೇತನ ಬಿಲ್ಲುಗಳಿಗೂ ವಿಸ್ತರಿಸಲು ಯೋಜಿಸಲಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವೇತನ ವೋಚರುಗಳನ್ನು ವೀಕ್ಷಿಸಲು, ಅವರ ಲಾಗಿನ್ ನಲ್ಲಿ e-Compilation Form 1 ಮೂಲಕ ಅವಕಾಶ ಕಲ್ಪಿಸಲಾಗುವುದು. ಸದರಿ ವೋಚರುಗಳನ್ನು ಲೆಕ್ಕಪರಿಶೋಧನೆಗಾಗಿ ಮಾಹೆವಾರು ವರ್ಗೀಕರಿಸಿ, ಲಭ್ಯವಾಗುವಂತೆ ಮಾಡಲಾಗುವುದು.
4. ಆದುದರಿಂದ, ಉಲ್ಲೇಖಿತ ಸರ್ಕಾರದ ಆದೇಶದಲ್ಲಿನ ಸೂಚನೆಗಳಿಗೆ ಒಳಪಟ್ಟು, ಸರ್ಕಾರದ ಎಲ್ಲಾ ಇಲಾಖೆಗಳು ಹೆಚ್.ಆರ್.ಎಂ.ಎಸ್ ಮತ್ತು ಖಜಾನೆ-2ರಲ್ಲಿ ಸೃಜಿಸಲಾದ ಜಿಲ್ಲಾ ವಲಯಕ್ಕೆ ಸಂಬಂಧಿಸಿದ ವೇತನ ಬಿಲ್ಲುಗಳಿಗೆ ಸಂಬಂಧಿಸಿದಂತೆ, ಬಿಲ್ಲುಗಳನ್ನು ಹಾಗೂ ಕಡಿತ ವಸೂಲಾತಿಗಳಿಗೆ ಸಂಬಂಧಿಸಿದ ಷೆಡ್ಯೂಲ್‌ಗಳನ್ನು ಯಾವುದೇ ಭೌತಿಕ ಪ್ರತಿಗಳನ್ನು ಸಲ್ಲಿಸದೆ, ಡಿಎಸ್ ಸಿ ಮೂಲಕ ದೃಢೀಕರಿಸಿ ಖಜಾನೆಗಳಿಗೆ ಆನ್ ಲೈನ್ ಮೂಲಕ ಸಲ್ಲಿಸಲು ಜಿಲ್ಲಾ ಪಂಚಾಯತ್/ ತಾಲ್ಲೂಕು ಪಂಚಾಯತ್ ಗಳಿಗೆ ಸೂಚನೆಗಳನ್ನು ನೀಡಲು ಕೋರಿರುತ್ತಾರೆ.
ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಗಿನಂತೆ ಆದೇಶಿಸಿದೆ.
1. ವೋಚರುಗಳ ಡಿಜಿಟಲೀಕರಣದ ಅಂಗವಾಗಿ ದಿನಾಂಕ 01-05-2025 ರಿಂದ ಜಾರಿಗೆ ಬರುವಂತೆ ಜಿಲ್ಲಾ ವಲಯದ (ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್) ಡಿಡಿಓ ರವರು ಉಲ್ಲೇಖಿತ ಆದೇಶದ ಸೂಚನೆಗಳಿಗೆ ಒಳಪಟ್ಟು, ಹೆಚ್.ಆರ್.ಎಂ.ಎಸ್ ಹಾಗೂ ಖಜಾನೆ-2ರಲ್ಲಿ ಸೃಜಿಸುವ ಜಿಲ್ಲಾ ವಲಯದ ವೇತನ ಬಿಲ್ಲುಗಳು ಹಾಗೂ ಸಂಬಂದಿಸಿದ ವೇತನಗಳಲ್ಲಿನ ಕಡಿತ ವಸೂಲಾತಿಗಳ ಸಂಬಂಧ ಭೌತಿಕ ಷೆಡ್ಯೂಲ್‌ಗಳ ಬದಲು ಆನ್ ಲೈನ್ ನಲ್ಲಿ ಅಂಗೀಕರಿಸಲು, ಹಾಗೂ ಇದಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ಡಿಡಿಓರವರು ಡಿ.ಎಸ್.ಸಿ ಮೂಲಕ ದೃಢೀಕರಿಸಿ, ಖಜಾನೆಗಳಿಗೆ ಆನ್ ಲೈನ್ ಮೂಲಕ ಸಲ್ಲಿಸುವಂತೆ ಹಾಗೂ ಭೌತಿಕವಾಗಿ ಮುದ್ರಿಸಿ ಸಲ್ಲಿಸದಿರಲು ಆದೇಶಿಸಲಾಗಿದೆ.
2. ಖಜಾನೆಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವೇತನ ಬಿಲ್ಲುಗಳಿಗೆ ಸಂಬಂಧಿಸಿದ ವೋಚರುಗಳನ್ನು ವೀಕ್ಷಿಸಲು, ಅವರ ಲಾಗಿನ್ ನಲ್ಲಿ e-Compilation Form 1 ಮೂಲಕ ಅವಕಾಶ ಕಲ್ಪಿಸುವುದು. ಹಾಗೂ ಸದರಿ ವೋಚರುಗಳನ್ನು ಲೆಕ್ಕಪರಿಶೋಧನೆಗಾಗಿ ಮಾಹೆವಾರು ವರ್ಗೀಕರಿಸಿ, ಲಭ್ಯವಾಗುವಂತೆ ಮಾಡುವುದು.
3. ಈ ಸಂಬಂಧ ಕರ್ನಾಟಕ ಆರ್ಥಿಕ ಸಂಹಿತೆ ಮತ್ತು ಕರ್ನಾಟಕ ಖಜಾನೆ ಸಂಹಿತೆ ಹಾಗೂ ಜಿಲ್ಲಾ/ತಾಲ್ಲೂಕು ಪಂಚಾಯಿತಿಗಳ (ಹಣಕಾಸು ಮತ್ತು ಲೆಕ್ಕಗಳು) ನಿಯಮಗಳಿಗೆ ಸೂಕ್ತ ತಿದ್ದುಪಡಿ ತರಲಾಗುವುದು.