ಬೀದರ್ : ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಸಚಿನ್ ಪಾಂಚಾಳ್ ಸಹೋದರಿ ಸುರೇಖಾ ಅವರು ನಮ್ಮ ಅಣ್ಣನ ಆತ್ಮಹತ್ಯೆ ಪ್ರಕರಣ ರಾಜ್ಯ ಸರ್ಕಾರ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ. ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆವರು, ರಾಜ್ಯ ಸರ್ಕಾರದಿಂದ ಕೇಸ್ ಮುಚ್ಚಿ ಹಾಕಲು ಪ್ರಯತ್ನ ನಡೆಸಲಾಗುತ್ತಿದೆ. ಕಲ್ಬುರ್ಗಿಯಲ್ಲಿ ಸಚಿನ್ ಕೆಲಸ ಮಾಡಿಲ್ಲ. ಆತ ನಮ್ಮನ್ನು ಭೇಟಿ ಆಗಿಲ್ಲ. ಸಚಿನ್ ಹುಟ್ಟೇ ಇಲ್ಲ ಅಂತ ಏನೇನೋ ಹುಟ್ಟಾಕಿ ಬಿಡುತ್ತಾರೆ ಎಂಬ ಭಯವಿದೆ. ಹಾಗಾಗಿ ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ ಸಿಬಿಐ ತನಿಖೆ ಆದರೆ ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ.
ಡೆತ್ ನೋಟ್ ಅಲ್ಲಿ ಉಲ್ಲೇಖವಾದ ಆರೋಪಿಗಳನ್ನು ಪ್ರಶ್ನೆನೆ ಮಾಡಿಲ್ಲ. ಅಧಿಕಾರಿಗಳು ನಮ್ಮನ್ನು ಮಾತ್ರ ವಿಚಾರಣೆ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ತನಿಖಾಧಿಕಾರಿಗಳು ಯಾವುದೇ ಮಾಹಿತಿ ಕೊಟ್ಟಿಲ್ಲ. ಎಫ್ ಎಸ್ ಎಲ್ ವರದಿ ಹಾಗೂ ಮರಣೋತ್ತರ ಪರೀಕ್ಷೆ ವರದಿಯ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಪ್ರಧಾನಿ ಮೋದಿಗೂ ಈ ಕುರಿತು ಪತ್ರ ಬರೆಯಲು ಪ್ರಯತ್ನಿಸುತ್ತೇವೆ. ಎಂದು ಸಚಿನ್ ಸಹೋದರಿ ಸುರೇಖಾ ಹೇಳಿಕೆ ನೀಡಿದರು.
ಸಚಿನ್ ಗುತ್ತಿಗೆದಾರನೇ ಅಲ್ಲ!
ಇನ್ನು ಆತ್ಮಹತ್ಯೆ ಮಾಡಿಕೊಂಡ ಸಚಿನ್ ಗುತ್ತಿಗೆದಾರನೇ ಅಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ್ ಶೆಗಜಿ ಈ ಒಂದು ಹೇಳಿಕೆ ನೀಡಿದ್ದಾರೆ. ಗುತ್ತಿಗೆದಾರರ ಸಂಘದ ಬೀದರ್ ಘಟಕದಿಂದಲೂ ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇತರೆ ಜಿಲ್ಲೆಗಳಿಂದಲೂ ಆತ ಗುತ್ತಿಗೆದಾರ ಅಲ್ಲವೆಂಬ ಮಾಹಿತಿ ತಿಳಿದು ಬಂದಿದೆ. ಧಾರವಾಡ ಇಂಜಿನಿಯರ್ ಕಚೇರಿಯಲ್ಲೂ ಇಲ್ಲ ಗುತ್ತಿಗೆದಾರ ಎಂದು ಎಲ್ಲೂ ಕೂಡ ನೋಂದಣಿ ದಾಖಲೆ ಇಲ್ಲ ಎರಡು ಕಚೇರಿಯಿಂದ ಮಾಹಿತಿಯನ್ನು ಗುತ್ತಿಗೆದಾರರ ಸಂಘ ಇದೀಗ ಪಡೆದುಕೊಂಡಿದೆ ಆದರೆ ಎಲ್ಲೂ ಕೂಡ ಸಚಿನ್ ಪಂಚಾಳ್ ಹೆಸರು ಗುತ್ತಿಗೆದಾರ ಎಂದು ನಮೂದು ಆಗಿಲ್ಲ ಎಂದು ತಿಳಿಸಿದ್ದಾರೆ.