ರಾಯಚೂರು : ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕುರಿತು ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ, ಆರ್ ಎಸ್ ಎಸ್ ಬಿಜೆಪಿಯವರು ಕೆಲವು ಹುಚ್ಚು ನಾಯಿಗಳನ್ನು ಸಾಕಿದ್ದಾರೆ. ಹುಚ್ಚು ನಾಯಿಗಳನ್ನ ಸಾಕುವ ಮೂಲಕ ವಿಪಕ್ಷಗಳ ನಾಯಕರ ತೇಜೋವಧೆ ಮಾಡುತ್ತಿದ್ದಾರೆ ಎಂದು ರಾಯಚೂರಲ್ಲಿ ಎಂಎಲ್ ಸಿ ವಸಂತಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ವ್ಯಕ್ತಿಗಳ ತೇಜೋವಧೆ ಮಾಡಲು ಇಂತಹ ಹುಚ್ಚು ನಾಯಿಗಳನ್ನು ಸಾಕಿದ್ದಾರೆ. ವ್ಯವಸ್ಥಿತವಾಗಿ ನಮ್ಮ ಪಕ್ಷದ ನಾಯಕರ ತೇಜೋವಧೆ ಮಾಡುತ್ತಿದ್ದಾರೆ. ಇಂತಹ ನಾಯಿಗಳು ಬೊಗಳುವುದರಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಗೆ ಯಾವುದೇ ಧಕ್ಕೆ ಆಗಲ್ಲ. ದೇಶದ ಜನರಿಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಸೇವೆ, ಅನುಭವ ಗೊತ್ತಿದೆ ಎಂದು ರಾಯಚೂರಿನಲ್ಲಿ ಕಾಂಗ್ರೆಸ್ ಎಂಎಲ್ಸಿ ವಸಂತಕುಮಾರ್ ಹೇಳಿಕೆ ನೀಡಿದ್ದಾರೆ.








