ಗದಗ : ಇತ್ತೀಚಿಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಬೇಸತ್ತು ಎಷ್ಟೋ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈ ಒಂದು ಘಟನೆಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳ ಹಿಂದೆ ಗದಗ್ ನಲ್ಲಿ ಪೊಲೀಸರು ಹಲವು ಬಡ್ಡಿ ದಂಧೆಕೋರರ ಮನೆಯ ಮೇಲೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಜಪ್ತಿ ಮಾಡಿದ್ದರು. ಇದೀಗ ಗದಗದಲ್ಲಿರುವ ಸಂಗಮೇಶ್ ದೊಡ್ಡಣ್ಣವರ್ ಎನ್ನುವ ಬಡ್ಡಿ ದಂಧೆಕೋರನ ಮನೆಯ ಮೇಲೆ ದಾಳಿ ಮಾಡಿ 26 ಲಕ್ಷ ರೂಪಾಯಿ ಪೊಲೀಸರು ಜತ್ತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗಮೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಹೌದು ಸಂಗಮೇಶ್ ದೊಡ್ಡಣ್ಣವರ ಮನೆಯಲ್ಲಿ 26.57 ಲಕ್ಷ ಹಣ ಜಪ್ತಿ ವಿಚಾರವಾಗಿ ಒಂದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮಗನ ಲಿವರ್ ಚಿಕಿತ್ಸೆಗೆ ತಂದಿಟ್ಟ ಹಣ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹಣ ಜಪ್ತಿ ಮಾಡಿದ್ದಕ್ಕೆ ಸಂಗಮೇಶ್ ದೊಡ್ಡಣ್ಣವರ್ ಇದೀಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮನೆಯಲ್ಲಿ ನೇಣು ತೆಗೆದುಕೊಂಡು ಸಂಗಮೇಶ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗದಗ ನಗರದ ಕಾಶಿವಿಶ್ವನಾಥ ಕಾಲೋನಿ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಲಾಗಿದ್ದು,ನೇಣು ಬಿಗಿದ ಸ್ಥಿತಿಯಲ್ಲಿ ಕೂಡಲೇ ಸ್ಥಳೀಯರು ರಕ್ಷಿಸಿದ್ದಾರೆ.
ಕೂಡಲೇ ಗದಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸಂಗಮೇಶ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಎಸ್ ಡಿ ಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಸಂಗಮೇಶ್ ದೊಡ್ಡಣ್ಣ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸಂಗಮೇಶ್ ಮನೆಯಲ್ಲಿ ಸೀಜ್ ಆಗಿದ್ದು ಬಡ್ಡಿ ವ್ಯವಹಾರದ ಹಣ ಅಲ್ಲ ಮಗನ ಚಿಕಿತ್ಸೆಗಾಗಿ ಇಟ್ಟುಕೊಂಡಿದ್ದ ಹಣ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸಂಗಮೇಶ್ ಮಗನಿಗೆ ಲಿವರ್ ಆಪರೇಷನ್ ಗೆ 26 ಲಕ್ಷ ಹಣ ಖರ್ಚು ಇದೆ ಎಂದು ವೈದ್ಯರು ಹೇಳಿದ್ದಕ್ಕೆ ಸಾಲ ಮಾಡಿ ಸಂಗಮೇಶ್ ಹಣ ಹೊಂದಿಸಿದ್ದ. ಈ ವೇಳೆ ಪೊಲೀಸರು ರೇಡ್ ಮಾಡಿ ಹಣ ಸೀಜ್ ಮಾಡಿದ್ದಾರೆ. ಈ ಬಗ್ಗೆ ಎಷ್ಟೇ ಹೇಳಿದರೂ ಪೊಲೀಸರು ಕೇಳಲಿಲ್ಲ ಅಂತ ಸಂಗಮೇಶ್ ಹೇಳಿದ್ದ. ಇತ್ತ ಹಣವು ಇಲ್ಲದೆ, ಮಗನಿಗೆ ಚಿಕಿತ್ಸೆ ಕೊಡಿಸಲು ಆಗದೆ ಮನನೊಂದಿದ್ದ ಸಂಗಮೇಶ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಯಾರದ್ದು ಒತ್ತಡಕ್ಕೆ ಮನೆದು ಕೇಸ್ ಮಾಡಿದ್ದಾರೆ ಎಂದು ಪೊಲೀಸರ ವಿರುದ್ಧ ಸಂಗಮೇಶ್ ಸಹೋದರಿ ಆಕ್ರೋಶ ಹೊರ ಹಾಕಿದ್ದಾಳೆ. ತಮ್ಮ ಸಂಗಮೇಶ್ ಪರಿಸ್ಥಿತಿ ನೋಡಿ ಅಕ್ಕ ಕಣ್ಣೀರು ಹಾಕಿದ್ದಾಳೆ. ಸಂಗಮೇಶ್ ಪತ್ನಿ ತುಂಬು ಗರ್ಭಿಣಿ ಇದ್ದಾಳೆ. ತಾಯಿಗೂ ಆರೋಗ್ಯ ಸರಿ ಇಲ್ಲ ಮಗನಿಗೆ ಲಿವರ್ ಸಮಸ್ಯೆ ಇದೆ. ತಮ್ಮನಿಗೆ ಏನಾದರೂ ಆದರೆ ಸುಮ್ಮನಿರಲ್ಲ ಎಂದು ಹೇಳಿದ್ದಾಳೆ. ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.