ಬೆಂಗಳೂರು: ಮಂಗಳೂರಿನ ಬಜ್ಜೆಯ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ನಿಷೇಧಿತ ಸಂಘಟನೆ ಪ್ಯಾಫುಲರ್‌ಫ್ರಂಟ್ ಆಫ್ ಇಂಡಿಯಾದ ಮಾಜಿ ಸದಸ್ಯ ಸೇರಿದಂತೆ 11 ಮಂದಿ ವಿರುದ್ಧ NIA ಕೋರ್ಟ್ ಗೆ ಆರೋಪ ಪಟ್ಟಿಯನ್ನು ಸಲ್ಲಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಪರ ಸಂಘಟನೆಗಳ ಸಂಘಟನೆಯಲ್ಲಿ ಸುಹಾಸ್ ಸಕ್ರಿಯವಾಗಿದ್ದ. ಈ ಚಟುವಟಿಕೆಗೆ ಕಡಿವಾಣ ಹಾಕಲು ಆರೋಪಿಗಳು ಸಂಚು ರೂಪಿಸಿ ಸುಹಾಸ್ ಅವರನ್ನು ಕಳೆದ ಮೇ.1 ರಂದು ಆತನ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಈ ಕೃತ್ಯದ ಮೂಲಕ ಸಮಾಜದಲ್ಲಿ ಭೀಕರ ಭೀತಿಯನ್ನು ಸೃಷ್ಟಿಸಿ ಸಮಾಜದ ಗಮನ ಸೆಳೆಯುವುದಾಗಿತ್ತು ಎಂದು ಎನ್‌ಐಎ ತಿಳಿಸಿದೆ.
 
		



 




