ಬೆಂಗಳೂರು : ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಈ ಹಿಂದೆ ಮೊದಲ ಬಾರಿ ಬೆಂಗಳೂರಿನ ಭಾರತೀಯ ನಗರಕ್ಕೆ ಶಾಸಕ ಭಾರತಿ ಬಸವರಾಜ್ ವಿಚಾರಣೆಗೆ ಹಾಜರಾಗಿದ್ದರು. ಬಳಿಕ ಇಂದು ಮತ್ತೆ ಪೊಲೀಸರ ಎದುರು ಬೆರೆದಿ ಸುರೇಶ್ ವಿಚಾರಣೆಗೆ ಹಾಜರಾಗಿದ್ದಾರೆ ವಿಚಾರಣೆಯ ಬಳಿಕ, ಇವಂದು ಕೊಲೆ ಪ್ರಕರಣದ ಹಿಂದೆ ಕಾಣದ ಕೈಗಳಿವೆ ಎಂದು ಭೈರತಿ ಬಸವರಾಜ್ ಆರೋಪಿಸಿದ್ದಾರೆ.
ಪೊಲೀಸರು ನನಗೆ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರ ನೀಡಿದ್ದೇನೆ. ಆರೋಪಿಗಳು ಯಾರು ಏನು ನನಗೆ ಗೊತ್ತಿಲ್ಲ. ಬಿಕ್ಲು ಶಿವ ಕೊಲೆಯ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಯಾವ ಆರೋಪಿಯು ನನಗೆ ಪರಿಚಯ ಇಲ್ಲ. ಮೊದಲು ದೂರು ನೀಡಿದಾಗಲೂ ಪೊಲೀಸರು ನನ್ನನ್ನು ಸಂಪರ್ಕಿಸಿಲ್ಲ. ಸಾಕಷ್ಟು ಜನರು ನಮ್ಮ ಜೊತೆ ಬಂದು ಫೋಟೋ ತೆಗೆದುಕೊಳ್ಳುತ್ತಾರೆ ಫೋಟೋ ತೆಗೆಸಿಕೊಳ್ಳುವವರು ನನಗೆ ಪರಿಚಯ ಇರುತ್ತಾರ? ಎಂದು ಭೈರತಿ ಬಸವರಾಜ್ ಪ್ರಶ್ನಿಸಿದರು.
ಆ ಶಿವಪ್ರಕಾಶ್ ಯಾರು ಅಂತಾನೆ ನನಗೆ ಗೊತ್ತಿಲ್ಲ. ಯಾವ ಜಮೀನು ಯಾವ ವಿಚಾರದ ಬಗ್ಗೆಯೂ ನನಗೆ ಗೊತ್ತಿಲ್ಲ. ನಾನು ಪ್ರಾಮಾಣಿಕ ರಾಜಕಾರಣಿ ರಾಜಕೀಯ ಪ್ರೇರಿತ ಆರೋಪ ಮಾಡಲಾಗುತ್ತಿದೆ. ಈ ಪ್ರಕರಣದ ಹಿಂದೆ ಕಾಣದ ಕೈಗಳಿವೆ. ಏನೇ ಮಾಡಿದರು ಎದುರಿಸುತ್ತೇನೆ ನನಗೆ ಎಲ್ಲವನ್ನು ಎದುರಿಸುವ ಶಕ್ತಿ ಇದೆ. ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ ಅವರು ಪೊಲೀಸರ ವಿಚಾರಣೆಯ ಬಳಿಕ ಹೇಳಿಕೆ ನೀಡಿದರು.