ಬೆಂಗಳೂರು : ಕಳೆದ ಕೆಲವು ತಿಂಗಳ ಹಿಂದೆ ರೌಡಿಶೀಟರ್ ಬಿಕ್ಲು ಶಿವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬೇಕಾರವಾಗಿ ಕೊಲೆ ಮಾಡಲಾಗಿತ್ತು ಈ ಒಂದು ಕೊಲೆ ಪ್ರಕರಣದ A1 ಆರೋಪಿಯಾಗಿದ್ದ ಜಗ್ಗ ಅಲಿಯಾಸ್ ಜಗದೀಶ್ ವಿದೇಶಕ್ಕೆ ಪರಾರಿಯಾಗಿದ್ದ. ಇದೀಗ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಸಿಐಡಿ ಅಧಿಕಾರಿಗಳು ಆರೋಪಿ ಜಗದೀಶನ ಆಪ್ತ ಅಜೀತ್ ನನ್ನ ಅರೆಸ್ಟ್ ಮಾಡಿದ್ದಾರೆ.
ಹೌದು ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಗದೀಶ್ ಆಪ್ತ ಅಜಿತ್ ನನ್ನು ಸಿಐಡಿ ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಅಜಿತ್ ನನ್ನು ಬಂಧಿಸಿದ್ದಾರೆ ಪ್ರಕರಣದಲ್ಲಿ ಅಜಿತ್ ವಿರುದ್ಧ ಸಿಐಡಿ ಪೋಲೀಸರು ಹೆಚ್ಚುವರಿ ಸಾಕ್ಷಿ ಕಲೆ ಹಾಕಿದ್ದರು ಇಂದು ಬೆಳಿಗ್ಗೆ ರಾಮಮೂರ್ತಿ ನಗರದಲ್ಲಿ ಸಿಐಡಿ ಪೋಲೀಸರು ಅಜಿತ್ ವಶಕ್ಕೆ ಪಡೆದುಕೊಂಡಿದ್ದು ಕಚೇರಿಗೆ ಕರೆತಂದು ಆರೋಪಿ ಅಜಿತ್ ನನ್ನು ಅರೆಸ್ಟ್ ಮಾಡಿದ್ದಾರೆ ಮಧ್ಯಾಹ್ನ 3 ಗಂಟೆಯ ಬಳಿಕ ಕೋರ್ಟಿಗೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.






