ಯಾದಗಿರಿ : ರಾಜ್ಯ ಶಿಕ್ಷಣ ಇಲಾಖೆ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ರಸ್ತಾಪುರದ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ರೌಡಿಶೀಟರ್ ನೇಮಕಗೊಂಡಿದ್ದಾನೆ.ಆದರೂ ಕೂಡ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ.
ಹೌದು ರೌಡಿಶೀಟರ್ ಸರ್ಕಾರಿ ಅತಿಥಿ ಶಿಕ್ಷಕನಾಗಿ ನೇಮಕಗೊಂಡಿದ್ದಾನೆ. ರೌಡಿಶೀಟರ್ ಅತಿಥಿ ಶಿಕ್ಷಕನಾಗಿದ್ದರು ಕೂಡ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿದೆ. ರೌಡಿಶೀಟರ್ ಭಾಗಪ್ಪ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕನಾಗಿ ನೇಮಕವಾಗಿದ್ದಾನೆ. ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ರಸ್ತಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ರೌಡಿಶೀಟರ್ ಭಾಗಪ್ಪ ಅತಿಥಿ ಶಿಕ್ಷಕನಾಗಿ ನೇಮಕಗೊಂಡಿದ್ದು, ಶಿಕ್ಷಣ ಇಲಾಖೆಯ ಮತ್ತೊಂದು ಎಡವಟ್ಟಿಗೆ ಕಾರಣವಾಗಿದೆ.
ಅತಿಥಿ ಶಿಕ್ಷಕನಾಗಿ ನೇಮಕಗೊಂಡಿರುವ ಭಾಗಪ್ಪ ಹಿಂದಿ ಭಾಷೆಯ ಶಿಕ್ಷಕ. ಕಳೆದ 5 ವರ್ಷಗಳಿಂದ ಭಾಗಪ್ಪ ಅತಿಥಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ. 2017ರಲ್ಲಿ ಭಾಗಪ್ಪನ ವಿರುದ್ಧ ರೌಡಿ ಶೀಟ್ ಓಪನ್ ಆಗಿದೆ. ಭಾಗಪ್ಪನ ವಿರುದ್ಧ ರೌಡಿ ಶೀಟ್ ಓಪನ್ ಆದರೂ ಕೂಡ ಅತಿಥಿ ಶಿಕ್ಷಕನಾಗಿ ನೇಮಕವಾಗಿದ್ದಾನೆ. ಭಾಗಪ್ಪನ ಉಪಟಳಕ್ಕೆ ಬೇಸತ್ತು ಹಲವು ಶಿಕ್ಷಕರು ಬೇರೆ ಕಡೆಗೆ ವರ್ಗಾವಣೆಯಾಗಿದ್ದಾರೆ.
ಕುಡಿದು ಬಂದು ಶಿಕ್ಷಕರು ವಿದ್ಯಾರ್ಥಿಗಳ ಜೊತೆಗೆ ಅಸಭ್ಯ ವರ್ತನೆ ತೋರುತ್ತಾನೆ ಎಂದು ಆರೋಪಿಸಲಾಗಿದ್ದು ಸಾರ್ವಜನಿಕ ಗ್ರಂಥಾಲಯಕ್ಕೆ ಮೇಲ್ವಿಚಾರಕ ಶಿವಪ್ಪ ನಾಯಕ ಕೊಡಿ ದೂರು ನೀಡಿದ್ದಾರೆ. ಹಾಗಾಗಿ ಯಾದಗಿರಿ ಡಿಸಿಗೆ ದೂರು ನೀಡಿ ಭಾಗಪ್ಪನನ್ನು ವಜಾ ಗೊಳಿಸುವಂತೆ ಇದೀಗ ಮನವಿ ಮಾಡಲಾಗಿದೆ.