ಮೈಸೂರು : ಮೈಸೂರಿನಲ್ಲಿ ನಿನ್ನೆ ಘೋರ ಘಟನೆಯೊಂದು ನಡೆದಿದ್ದು ಭಾರಿ ಮಳೆ ಸುರಿದ ಪರಿಣಾಮ ಮನೆಯ ಮೇಲ್ಚಾವಣಿ ಒಂದು ಕುಸಿದು ಬಿದ್ದಿದೆ ಆದಷ್ಟು ಮನೆಯಲ್ಲಿದ್ದ ಮೂವರನ್ನು ಸ್ಥಳೀಯರು ಬಚಾವ್ ಮಾಡಿರುವ ಘಟನೆ ನಡೆದಿದೆ.
ಹೌದು ಹೆಬ್ಬಲಗುಪ್ಪೆ ಎಂಬ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿತವಾಗಿದೆ. ಮೈಸೂರು ಜಿಲ್ಲೆಯ ಹೆಚ್‍ಡಿ ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದ ನಿವಾಸಿಯಾದ ಗೋವಿಂದ ಶೆಟ್ಟಿ ಎನ್ನುವವರ ಮನೆಯ ಮೇಲ್ಚಾವಣಿ ಕುಸಿದಿದೆ. ಮನೆ ಒಳಗೆ ಸಿಲುಕಿದ್ದ ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ರಾಧಾ, ರೋಹಿತ್ ಮತ್ತು ಸುವರ್ಣಮ್ಮ ಎನ್ನುವವರನ್ನು ಸ್ಥಳೀಯರು ಕೂಡಲೇ ರಕ್ಷಣೆ ಮಾಡಿದ್ದಾರೆ. ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.